ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಶಾಸ್ತ್ರಿ ಪುತ್ಥಳಿ ಸ್ಥಾಪನೆ: ಭರವಸೆ

Last Updated 3 ಅಕ್ಟೋಬರ್ 2011, 8:20 IST
ಅಕ್ಷರ ಗಾತ್ರ

ವಿಜಾಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದಿವಂಗತ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಜಯಂತಿಯನ್ನು ಭಾನುವಾರ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಜಿಲ್ಲಾ ಆಡಳಿತದಿಂದ ಇಲ್ಲಿಯ ಗಾಂಧಿ ವೃತ್ತದಲ್ಲಿ ಗಾಂಧೀಜಿ ಅವರ ಪುತ್ಥಳಿಗೆ ವಿಶೇಷ ಪೂಜೆ ಹಾಗೂ ಸರ್ವಧರ್ಮಗಳ ಪ್ರಾರ್ಥನೆ ಸಲ್ಲಿಸಲಾಯಿತು. ಶಾಸಕ ಅಪ್ಪು ಪಟ್ಟಣಶೆಟ್ಟಿ ಇತರರು ಪಾಲ್ಗೊಂಡಿದ್ದರು.

ವಿಜಾಪುರದ ಲಾಲ್‌ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಪುತ್ಥಳಿ ಸ್ಥಾಪಿಸಲು ಸಂಸದರು-ಶಾಸಕರು ಒಲವು ವ್ಯಕ್ತಪಡಿಸಿದರು.ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಶಾಸ್ತ್ರಿ ಅವರ ಪುತ್ಥಳಿಗೆ ಹಣ ನೀಡುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರೆ, ಬಿಎಲ್‌ಡಿಇ ಸಂಸ್ಥೆಯಿಂದ ಶಾಸ್ತ್ರಿ ಪುತ್ಥಳಿಗೆ ರೂ 5 ಲಕ್ಷ  ನೀಡುವುದಾಗಿ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಪ್ರಕಟಿಸಿದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಸಹ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಪುತ್ಥಳಿಗೆ ಅನುದಾನ ನೀಡುವ ಭರವಸೆ ನೀಡಿದರು. ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ನಡೆದ ಸಮಾರಂಭದಲ್ಲಿ ವೈಜನಾಥ ಕರ್ಪೂರಮಠ, ಅಪ್ಪಾಸಾಹೇಬ ಜಂಗಮಶೆಟ್ಟಿ, ಕಿರಣ ಅಕ್ಕಿ, ಮಲ್ಲಿಕಾರ್ಜುನ ಹಳಕಟ್ಟಿ ಇತರರು ಪಾಲ್ಗೊಂಡಿದ್ದರು.

ನಂತರ ಶಾಪೇಟಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗಲೇ ಕಸಗೂಡಿಸಿ ಸ್ವಚ್ಛಗೊಳಿಸಿದ್ದ ಆ ಬೀದಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಬಿ. ಪಾಟೀಲ, ವಿಠ್ಠಲ ಕಟಕಧೋಂಡ, ಜಿ.ಪಂ. ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಪ್ರಭಾರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ, ಜಿ.ಪಂ. ಸಿಇಓ ಎ.ಎನ್. ಪಾಟೀಲ, ಪೌರಾಯುಕ್ತ ರಾಜಶೇಖರ ಇತರರು ಪೊರಕೆ ಹಿಡಿದು ಛಾಯಾಗ್ರಾಹಕರಿಗೆ ಫೋಸ್ ನೀಡಿದರು.
 
ಶಾಲೆ ನಂ.21: ವಿಜಾಪುರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.21 ರಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಮುಖ್ಯಗುರು ಎಚ್.ಜಿ. ದೊಡಮನಿ ಮಾತನಾಡಿದರು. ಸಹ ಶಿಕ್ಷಕ ಕೆ.ಎಂ. ಕಾರಜೋಳ, ಶಿಕ್ಷಕಿ ಆರ್.ಬಿ. ಮ್ಯಾಗೇರಿ, ವಿ.ವಿ. ಪಾಟೀಲ, ಜಿ.ಎಸ್. ಮಿರಜಕರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
 
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ: ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದವರು ಇಲ್ಲಿಯ ಅನಾಥ ಆಶ್ರಮದ ಮಕ್ಕಳಿಗೆ ಹಣ್ಣು-ಹಂಪಲು ವಿತರಿಸಿ ಮೂಲಕ ಗಾಂಧಿ ಜಯಂತಿ ಆಚರಿಸಿದರು.ವಕೀಲ ಖಾಡೆ ಅಧ್ಯಕ್ಷತೆ ವಹಿಸಿದ್ದರು. ವೈಜನಾಥ ಕರ್ಪೂರಮಠ, ವಸಂತ ಹೊನಮೋಡೆ, ಕೂಸಪ್ಪ ಇಮ್ಮನದ, ತಾಜುದ್ದೀನ್ ಖಲೀಫಾ, ಖಾಜಪ್ಪ, ಎ.ಎಸ್. ಇನಾಮದಾರ, ಎಂ.ಎ. ಬಕ್ಷಿ, ದೇಸಾಯಿ ಇತರರು ಪಾಲ್ಗೊಂಡಿದ್ದರು.

ಮಕ್ಕಳಿಗೆ ಸಾಧನ ವಿತರಣೆ:  ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಿಂದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತ ಸಾಧನ-ಸಲಕರಣೆ ವಿತರಿಸಲಾಯಿತು. ಡಿಡಿಪಿಐ ಹಕೀಂ ಇತರರು ಪಾಲ್ಗೊಂಡಿದ್ದರು.

ಎಕ್ಸಲಂಟ್ ಶಾಲೆ: ವಿಜಾಪುರದ ಎಕ್ಸಲಂಟ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಶಿಕ್ಷಕ ಎಸ್. ವಿ. ಬುರ್ಲಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಚ್.ಎನ್., ವಿಕಾಸ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ರಾಜಶೇಖರ ಕೌಲಗಿ, ಮಂಜು ಕೌಲಗಿ, ದಯಾನಂದ ಎಚ್. ಎನ್, ಸುಮಂಗಲಾ ಇಲ್ಲಾಳ ಪಾಲ್ಗೊಂಡಿದ್ದರು.
 
ಬುರಣಾಪುರ:  ಬುರಣಾಪುರದ ಕಾಸ್ಮೋನಿಕೇತನ ಪ್ರೌಢಶಾಲೆಯಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಣವ್ ಕುಂಬಾರ, ಮುಖ್ಯಾಧ್ಯಾಪಕ ಬಿ.ಎಸ್. ಅವಟಿ, ಎಸ್.ಎಸ್. ವಂಟಿಮುರಿ ಇತರರು ಪಾಲ್ಗೊಂಡಿದ್ದರು.
 
ದಯೆ ಸಂಸ್ಥೆ:  ವಿಜಾಪುರದ ದಯೆ ಸಂಸ್ಥೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಅಧ್ಯಕ್ಷೆ ರೇಷ್ಮಾ ಪಡೇಕನೂರ, ಪವಿತ್ರ ಕೃಷ್ಣಮೂರ್ತಿ, ಶಶಿಕಲಾ ರಾಠೋಡ, ತೌಸಿಫ್ ಅಗಸನಾಳ, ಭೀಮರಾವ ಕುಲಕರ್ಣಿ, ಹಸೀನಾ ಮಕಾನದಾರ, ಸವಿತಾ ನಾವಿ, ರಾಜು ವಾರದ, ಶ್ರೀಶೈಲ ಕಗ್ಗೊಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT