ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ಆಯ್ಕೆ

Last Updated 11 ಫೆಬ್ರುವರಿ 2011, 6:30 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆಯ 12 ನೇ ವಾರ್ಡಿಗೆ ಫೆ.27 ರಂದು ನಡೆಯಲಿ ರುವ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಹ್ಮದ ಇಸಾಕ್ ಜಮಖಂಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಜೆಡಿಎಸ್ ಕಾರ್ಯಾಲಯದಲ್ಲಿ ಎಚ್‌ಕೆಡಿಬಿ ಮಾಜಿ ಅಧ್ಯಕ್ಷ ನಾಗನ ಗೌಡ ಕಂದಕೂರ, ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಚೆನ್ನೂರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಮಹ್ಮದ ಇಸಾಕ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಲಾಯಿತು.

12 ನೇ ವಾರ್ಡ್ ಪ್ರತಿನಿಧಿಸುತ್ತಿದ್ದ ಜೆಡಿಎಸ್‌ನ ಸದಸ್ಯ ಸುಭಾಷರೆಡ್ಡಿ ವನಿಕೇರಿ ಅವರ ನಿಧನದಿಂದಾಗಿ ನಗರ ಸಭೆಯ 12ನೇ ವಾರ್ಡಿಗೆ ಉಪಚುನಾವಣೆ ನಡೆಯುತ್ತಿದ್ದು, ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ನಿರ್ಧರಿಸಿದೆ ಎಂದು ನಗರ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ ತಿಳಿಸಿದ್ದಾರೆ.

ಜಿಲ್ಲಾ ಘಟಕದ ಉಪಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ವಕೀಲ ಖಾಜಿ ಬಾಬಾ, ಸಲೀಂ ಗೋಗಿ, ಶೇಖ ಚಾಂದ್, ಸಲೀಂ ಪಾಟೀಲ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಬಾಪುರೆ, ಸದಸ್ಯರಾದ ಶಂಕರ ಸಾಗರ, ರಾಜ ಶೇಖರ ಬಾನಾ, ಶೇಖ ದಾವೂದ್, ವಿನಾಯಕ ಪಾಟೀಲ, ಮಲ್ಲಿಕಾರ್ಜುನ ಗೋಸಿ, ಚೆನ್ನಾರಡ್ಡಿ ಬಿಳ್ಹಾರ, ನಾಗರಾಜ ಬಿಳ್ಹಾರ, ವಿಶ್ವನಾಥರೆಡ್ಡಿ ಗೊಂದಡಗಿ, ಪದ್ಮಾ ರೇಲ್ವೆ, ಕರಬಸಪ್ಪ ಅಂದೇಲಿ, ಸೋಮನಾಥ ಅತ್ತುತ್ತಿ, ಅಬ್ದುಲ್ ಕಯೂಮ್, ಇನಾಯಿತುರ್ ರಹಿಮಾನ್, ಶರಣಗೌಡ ಕಂದಕೂರ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT