ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಮುಂದೆ ಫಲಾನುಭವಿಗಳ ಧರಣಿ

Last Updated 4 ಡಿಸೆಂಬರ್ 2012, 6:08 IST
ಅಕ್ಷರ ಗಾತ್ರ

ಕೊಪ್ಪಳ:  ಆಯ್ಕೆಯಾಗಿರುವವರಿಗೆ ಮನೆ ಮತ್ತು ಬಯೋಮೆಟ್ರಿಕ್ ಕಾರ್ಡ್ ವಿತರಿಸುವಂತೆ ಒತ್ತಾಯಿಸಿ ನಗರದ ಸರ್ವೆ ಸಂಖ್ಯೆ 438ರ ಆಶ್ರಯ ಬಡಾವಣೆಯ ಫಲಾನುಭವಿಗಳು ಸೋಮವಾರ ನಗರಸಭೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಮಹಿಳೆಯರು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿದ್ದ ಫಲಾನುಭವಿಗಳು ಮನೆ ಹಂಚಿಕೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಹದ್ದೂರಬಂಡಿ ರಸ್ತೆಯಲ್ಲಿ ನಿರ್ಮಿಸಿರುವ 249 ಮನೆಗಳನ್ನು ಪುನರ್‌ಹಂಚಿಕೆ ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಅರ್ಜಿ ಸಲ್ಲಿಸಿದ 143 ಜನರ ಪೈಕಿ 130 ಜನ ಫಲಾನುಭವಿಗಳು ಅರ್ಹರು ಎಂದು ಗುರುತಿಸಿ ಎರಡು ವಾರಗಳು ಕಳೆದರೂ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಆದೇಶ  ಹೊರಬಿದ್ದಿಲ್ಲ, ಅರ್ಹರಿದ್ದರೂ ಆಶ್ರಯ ಮನೆಗಳು ಹಂಚಿಕೆಯಾಗದಿರುವುದು ಅನುಮಾನಕ್ಕೆ ಕಾರಣವಾಗಿವೆ ಎಂದು ಧರಣಿ ನಿರತರು ಹೇಳಿದರು.

ಅರ್ಜಿ ಆಹ್ವಾನಿಸಿದ ಕಾರಣಕ್ಕೆ ಸೂರು ರಹಿತರಾಗಿರುವ ನಾವು ಕಡುಬಡತನದಲ್ಲಿ ಜೀವ ಸವೆಸುತ್ತಿದ್ದರೂ ಹೇಗೋ ಹಣ ಹೊಂದಿಸಿ, ಅರ್ಜಿ ಸಲ್ಲಿಸಿ ಮನೆ ದೊರುಕುವ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿದ್ದೇವೆ, ಅದರಂತೆ ಫಲಾನುಭವಿಗಳ ಆಯ್ಕೆ ಪಟ್ಟಿ ಹೊರಬಿದ್ದಾಗ ಸಂತಸಗೊಂಡಿದ್ದೆವು.
ಆದರೆ ಮನೆ ಹಂಚಿಕೆ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಗೋಳು ತೋಡಿಕೊಂಡರು.

ವಾರದೊಳಗೆ ಮನೆ ಹಂಚಿಕೆ ಮತ್ತು ಬಯೋಮೆಟ್ರಿಕ್ ಕಾರ್ಡ್‌ಗಳನ್ನು ವಿತರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಫಲಾನುಭವಿಗಳಾದ ಶಿವರುದ್ರಯ್ಯ ಹಿರೇಮಠ, ಹನಮಂತಪ್ಪ ಮ್ಯಾಗಳಮನಿ, ನಾಸೀರ್‌ಹುಸೇನ್ ತೆಗ್ಗಿನಕೇರಿ, ಮೈಲಪ್ಪ ಬಿಸರಳ್ಳಿ, ಮಲ್ಲಿಕಾರ್ಜುನ ಪೂಜಾರ, ಶಾಂತಾ ಕಟ್ಟಿಮನಿ, ಬಾಬುಸಾಬ ಮನಿಯಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT