ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ವಾರ್ಡ್‌ಗಳ ಪುನರ್‌ವಿಂಗಡಣೆ

Last Updated 3 ಡಿಸೆಂಬರ್ 2012, 9:32 IST
ಅಕ್ಷರ ಗಾತ್ರ

ಮಡಿಕೇರಿ: 2001ರ ಜನಗಣತಿ ಆಧಾರದ ಮೇಲೆ ಮಡಿಕೇರಿ ನಗರಸಭೆಯ ವಾರ್ಡ್‌ಗಳ ಸಂಖ್ಯೆಯನ್ನು ಪುನರ್‌ವಿಂಗಡಣೆ ಮಾಡಿ 23ಕ್ಕೆ ಸಿಮೀತ ಗೊಳಿಸಬೇಕೆಂದು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳನ್ನು ಪುನರ್‌ವಿಂಗಡಿಸಲು ನಗರಸಭೆ ಮುಂದಾಗಿದೆ.

ಸುಮಾರು 33,000 ಜನಸಂಖ್ಯೆ ಹೊಂದಿರುವ ಮಡಿಕೇರಿ ನಗರವನ್ನು ಮೊದಲು ಇದ್ದ 31 ವಾರ್ಡ್ ಪ್ರದೇಶವನ್ನು 23 ವಾರ್ಡ್‌ಗಳಲ್ಲಿ ಪುನರ್‌ವಿಂಗಡಿಸಿದೆ. ಈ ಕುರಿತು ನಗರಸಭೆ ಈಗಾಗಲೇ ಪತ್ರಿಕೆಗಳ ಮೂಲಕ, ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಿದ್ದು, ತಮ್ಮ ಪ್ರದೇಶ ಸೇರ್ಪಡೆ ಕುರಿತು ಆಕ್ಷೇಪಣೆ ಇದ್ದರೆ ತಿಳಿಸುವಂತೆಯೂ ಹೇಳಿದೆ.

ಪುನರ್‌ವಿಂಗಡಿತ ವಾರ್ಡ್‌ಗಳ ವಿವರ:
ವಾರ್ಡ್ 1: ಬ್ಲಾಕ್ ನಂ-14 (ಡೈರಿ ಫಾರಂ, ರೈಫಲ್ ರೇಂಜ್, ಸುಬ್ರಮಣ್ಯ ನಗರ, ಡಿಎಆರ್ ಕ್ವಾಟ್ರಸ್, ಎಫ್.ಎಂ.ಸಿ. ಕಾಲೇಜು ಹಿಂಭಾಗ ರಸ್ತೆ, ವಿದ್ಯಾನಗರ ಹೌಸಿಂಗ್ ಬೋರ್ಡ್).
ವಾರ್ಡ್ 2: ಬ್ಲಾಕ್ ನಂ-1 (ಮಹದೇವಪೇಟೆ ಮುಖ್ಯರಸ್ತೆ, ಮುತ್ತಪ್ಪ ದೇವಸ್ಥಾನ ರಸ್ತೆ, ಕೋದಂಡರಾಮ ದೇವಸ್ಥಾನ ರಸ್ತೆ)
ವಾರ್ಡ್ 3: ಬ್ಲಾಕ್ ನಂ- 2, 3 ಹಾಗೂ 24 (ಗಣಪತಿ ಬೀದಿ, ಮಹದೇವಪೇಟೆ, ದಾಸವಾಳ ರಸ್ತೆ)
ವಾರ್ಡ್ 4: ಬ್ಲಾಕ್ ನಂ- 3 (ಭಾಗಶಃ), ಬ್ಲಾಕ್ ನಂ-6 (ದಾಸವಾಳ ಭಾಗಶಃ, ಗಣಪತಿ ಬೀದಿ ಭಾಗಶಃ)
ವಾರ್ಡ್ 5: ಬ್ಲಾಕ್ ನಂ-5, 4 (ಮಹದೇವಪೇಟೆ, ಮಕಾನ್‌ಗಲ್ಲಿ, ಕನಕದಾಸ ರಸ್ತೆ ಮತ್ತು ಹಿಲ್ ರಸ್ತೆ)
ವಾರ್ಡ್ 6: ಬ್ಲಾಕ್ ನಂ- 7, 4 (ಭಾಗಶಃ) (ರಾಣಿಪೇಟೆ, ಮಹದೇವಪೇಟೆ (ಭಾಗಶಃ), ಹಿಲ್ ರಸ್ತೆ (ಭಾಗಶಃ)
ವಾರ್ಡ್ 7: ಬ್ಲಾಕ್ ನಂ- 10, 7 (ಭಾಗಶಃ), 8, 9, 14 (ರಾಣಿಪೇಟೆ, ಕಾನ್ವೆಂಟ್, ಮಲ್ಲಿಕಾರ್ಜುನ ನಗರ).
ವಾರ್ಡ್ 8: ಬ್ಲಾಕ್ ನಂ- 8 (ಭಾಗಶಃ), 25 (ರಾಣಿಪೇಟೆ, ಮಲ್ಲಿಕಾರ್ಜುನ ನಗರ)
ವಾರ್ಡ್ 9: ಬ್ಲಾಕ್ ನಂ- 9 (ಭಾಗಶಃ), 14 (ಭಾಗಶಃ), 8 (ಭಾಗಶಃ) (ಕಾಲೇಜು ರಸ್ತೆ, ಭಗವತಿ ನಗರ, ಐಟಿಐ, ಹೌಸಿಂಗ್ ಬೋರ್ಡ್)
ವಾರ್ಡ್ 10: ಬ್ಲಾಕ್ ನಂ 11, 12, 13 (ಕಾಲೇಜು ರಸ್ತೆ, ಅಪ್ಪಚ್ಚು ರಸ್ತೆ, ಪೆನಶನ್‌ಲೇನ್, ಶಾಸ್ತ್ರಿ ನಗರ)
ವಾರ್ಡ್ 11: ಬ್ಲಾಕ್ ನಂ 12 (ಭಾಗಶಃ), 11 (ಭಾಗಶಃ), 13 (ಭಾಗಶಃ) (ಗೌಳಿಬೀದಿ,ಮುಖ್ಯ ರಸ್ತೆ)
ವಾರ್ಡ್ 12: ಬ್ಲಾಕ್ ನಂ 14 (ಭಾಗಶಃ), (ಇಂದಿರಾನಗರ, ಚಾಮುಂಡೇಶ್ವರ ನಗರ ಮತ್ತು ಹೊಸ ಬಡಾವಣೆ)
ವಾರ್ಡ್ 13: ಬ್ಲಾಕ್ ನಂ 14 (ಭಾಗಶಃ), (ಜೋತಿ ನಗರ, ಹೊಸ ಬಡಾವಣೆ, ಪೊಲೀಸ್ ಕ್ವಾಟ್ರಸ್ ಮತ್ತು ರಿಮ್ಯಾಂಡ್ ಹೋಂ)
ವಾರ್ಡ್ 14: ಬ್ಲಾಕ್ ನಂ 15, 14 (ಭಾಗಶಃ), (ರಾಜಾಸೀಟ್ ರಸ್ತೆ, ಮಂಗಳೂರು ರಸ್ತೆ, ಬ್ರಾಹ್ಮಣರ ಬೀದಿ, ಚಾಮರಾಜ ವಿಲ್ಲಾ ರಸ್ತೆ)
ವಾರ್ಡ್ 15: ಬ್ಲಾಕ್ ನಂ 16 (ಮಂಗಳಾದೇವಿ ನಗರ, ಜನರಲ್ ತಿಮ್ಮಯ್ಯ ರಸ್ತೆ, ಮಿಷನ್ ಕಂಪೌಂಡ್, ಮೂರ್ನಾಡು ರಸ್ತೆ)
ವಾರ್ಡ್ 16: ಬ್ಲಾಕ್ ನಂ 17, 18 (ಮೂರ್ನಾಡು ರಸ್ತೆ ಬಲಭಾಗ, ಮಂಗಳೂರು ರಸ್ತೆ ಎಡಭಾಗ, ಮೈಸೂರು ರಸ್ತೆ ಮತ್ತು ಜಿ.ಟಿ. ರಸ್ತೆ)
ವಾರ್ಡ್ 17: ಬ್ಲಾಕ್ ನಂ 18 (ಭಾಗಶಃ), 17 (ಭಾಗಶಃ) 19 (ಮೈಸೂರು ರಸ್ತೆ ಭಾಗಶಃ, ಉಕ್ಕುಡ, ಹಳೇ ಸಿದ್ದಾಪುರ ರಸ್ತೆ, ಪಿ.ಡಬ್ಲು.ಡಿ ಕ್ವಾಟ್ರಸ್)
ವಾರ್ಡ್ 18: ಬ್ಲಾಕ್ ನಂ 18 (ಭಾಗಶಃ), 17 (ಭಾಗಶಃ), (ಮೈಸೂರು ರಸ್ತೆ, ಸುದರ್ಶನ ವೃತ್ತ, ಪುಟಾಣಿನಗರ ಮತ್ತು ಜಯನಗರ)
ವಾರ್ಡ್ 19: ಬ್ಲಾಕ್ ನಂ 20, 21, 22, 23 (ಚೈನ್‌ಗೇಟ್ ರಸ್ತೆ, ಜ್ಯೂನಿಯರ್ ಕಾಲೇಜು ರಸ್ತೆ)
ವಾರ್ಡ್ 20: ಬ್ಲಾಕ್ ನಂ 23 (ಭಾಗಶಃ), (ದಾಸವಾಳ ರಸ್ತೆ, ಕನ್ನಂಡಬಾಣೆ ಮತ್ತು ಸೋಮವಾರಪೇಟೆ ರಸ್ತೆ)
ವಾರ್ಡ್ 21: ಬ್ಲಾಕ್ ನಂ 23 (ಭಾಗಶಃ), (ಫಾರೆಸ್ಟ್ ಕ್ವಾಟರ್ಸ್, ಸೋಮವಾರಪೇಟೆ ರಸ್ತೆ, ಕನ್ನಂಡಬಾಣೆ, ಪಂಪ್‌ಹೌಸ್ ಮತ್ತು ಹೌಸಿಂಗ್ ಬೋರ್ಡ್)
ವಾರ್ಡ್ 22: ಬ್ಲಾಕ್ ನಂ 24 (ಭಾಗಶಃ), (ಮುತ್ತಪ್ಪ ದೇವಸ್ಥಾನ ರಸ್ತೆ, ಗದ್ದಿಗೆ ಹಿಂಭಾಗ, ತ್ಯಾಗರಾಜ ಕಾಲೋನಿ)
ವಾರ್ಡ್ 23: ಬ್ಲಾಕ್ ನಂ 24 (ಭಾಗಶಃ), (ಗದ್ದಿಗೆ ಹಿಂಭಾಗ, ಆಜಾದ್ ನಗರ, ಉಕ್ಕುಡ ರಸ್ತೆ ಮತ್ತು ರಾಜರಾಜೇಶ್ವರಿ ನಗರ).

ಪ್ರಕರಣದ ಹಿನ್ನೆಲೆ
ಜಿಲ್ಲಾ ಕೇಂದ್ರಸ್ಥಾನವೆನ್ನುವ ಕಾರಣಕ್ಕಾಗಿ ಮಡಿಕೇರಿ ಪುರಸಭೆಯನ್ನು 2007ರಲ್ಲಿ ನಗರಸಭೆಗೆ ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಕಾರಣಕ್ಕಾಗಿ ನಗರ ವ್ಯಾಪ್ತಿಯನ್ನು 31 ವಾರ್ಡ್‌ಗಳಲ್ಲಿ ವಿಂಗಡಿಸಲಾಯಿತು. (ಇದಕ್ಕೂ ಮೊದಲು ಇದ್ದ ವಾರ್ಡ್‌ಗಳ ಸಂಖ್ಯೆ 23).

ಇದನ್ನು ಪ್ರಶ್ನಿಸಿ ಪಿ.ಪಿ. ಚಾಮಿ ಎನ್ನುವವರು 2008ರ ಮಾರ್ಚ್ 24ರಂದು ಹೈಕೋರ್ಟ್‌ಗೆ ರಿಟ್ ಪಿಟಿಶನ್ ಸಲ್ಲಿಸಿದರು. ವಿಚಾರಣೆ ನಡೆಸಿದ ಹೈಕೋರ್ಟ್, 31 ವಾರ್ಡ್‌ಗಳನ್ನು ವಿಂಗಡಿಸಿ ಹೊರಡಿಸಿದ್ದ 2007ರ ಆದೇಶವನ್ನು ರದ್ದುಗೊಳಿಸುವಂತೆ ಹಾಗೂ 23 ವಾರ್ಡ್‌ಗಳನ್ನಾಗಿ ಪುನರ್‌ವಿಂಗಡಿಸುವಂತೆ ಸರ್ಕಾರಕ್ಕೆ ಸೂಚನೆ ಹೊರಡಿಸಿತು.

ಆದರೆ, ಆ ವೇಳೆಗಾಗಲೇ 31 ವಾರ್ಡ್‌ಗಳಿಗೆ ಚುನಾವಣೆ ನಡೆದು, ಜನಪ್ರತಿನಿಧಿಗಳ ಆಯ್ಕೆಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಂಡು, ಮುಂದಿನ ಚುನಾವಣೆ ವೇಳೆ ವಾರ್ಡ್‌ಗಳ ಪುನರ್‌ವಿಂಗಡಣೆಯನ್ನು ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 2 (1)(ಎ) ಅನ್ವಯ ಕ್ರಮಕೈಗೊಳ್ಳಲು ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT