ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸದಸ್ಯರಿಂದ ಅನಿರ್ದಿಷ್ಟ ಧರಣಿ ಆರಂಭ

Last Updated 12 ಜನವರಿ 2012, 7:40 IST
ಅಕ್ಷರ ಗಾತ್ರ

ಜಮಖಂಡಿ: ಸೇವಾ ವರ್ಗಾವಣೆಗೊಂಡಿರುವ ಪೌರಾಯುಕ್ತ ಎಸ್.ಎಸ್.ಜಯಧರ ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನಗರಸಭೆ ಕಾರ್ಯಾಲಯ ಎದುರು ನಿರ್ಮಿಸಿರುವ ವೇದಿಕೆಯಲ್ಲಿ ನಗರಸಭೆ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಬುಧವಾರ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.

ಕರ್ನಾಟಕ ಸಚಿವಾಲಯ ಸೇವೆಯಿಂದ ನಿಯೋಜನೆ ಮೇಲೆ ಸ್ಥಳೀಯ ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಾಯುಕ್ತರ ವಿರುದ್ದ ಶಿಸ್ತು ಕ್ರಮ ಬಾಕಿ ಇಟ್ಟು ಅವರ ಮಾತೃ ಇಲಾಖೆಯಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಸೇವೆಗಳು-3)ಗೆ ಅವರ ಸೇವೆಯನ್ನು ವರ್ಗಾಯಿಸಲಾಗಿದೆ. ಆದರೆ ಅವರು ಕರ್ತವ್ಯದಿಂದ ಬಿಡುಗಡೆ ಆಗದೆ ಸೇವೆಯಲ್ಲಿ ಮುಂದುವರಿದಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಪೌರಾಯುಕ್ತರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ನಗರಸಭೆಯಲ್ಲಿ ನಡೆದಿವೆ ಎನ್ನಲಾದ ಭಾರೀ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ಆಗಬೇಕು. ಅಲ್ಲಿಯ ವರೆಗೆ ಅನಿರ್ದಿಷ್ಟ ಧರಣಿ ಮುಂದುವರಿಸಲಾಗುವುದು. ಈ ಬೇಡಿಕೆಗಳು ಕೂಡಲೇ ಈಡೇರದಿದ್ದರೆ ಧರಣಿ ಸತ್ಯಾಗ್ರಹದ ಬದಲಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.

ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಉಪಾಧ್ಯಕ್ಷೆ ಶೀಲಾಬಾಯಿ ಪಿಸಾಳ, ಸ್ಥಾಯಿ ಸಮಿತಿ ಚೇರಮನ ಇಕ್ತಿಯಾರ ಅವಟಿ, ಸದಸ್ಯರಾದ ಶೋಭಾ ಶಿರಗಣ್ಣವರ, ವಿಜಯಲಕ್ಷ್ಮೀ ಉಕಮನಾಳ, ಕಾಶೀಬಾಯಿ ಹೂಗಾರ, ಶ್ರೀಶೈಲ ಪಾಟೀಲ, ನರಸಿಂಹ ನಾಯಿಕ, ಎಸ್.ಆರ್.ಕುಲಕರ್ಣಿ, ಪ್ರಕಾಶ ಪುರೋಹಿತ, ಹಿಂದೂ ಏಕತಾ ಸಮಿತಿ ಸಂಚಾಲಕ ಉಮೇಶ ಆಲಮೇಲಕರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ಪೌರಾಯುಕ್ತರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಗರಸಭೆಯ ಸರ್ವ ಸದಸ್ಯರು ನಗರಸಭೆ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಈ ಹಿಂದೆ ಪ್ರತಿಭಟಿಸಿದ್ದನ್ನು ಮತ್ತು ಹಲವು ಜನಪರ ಸಂಘಟನೆಗಳು ಜಮಖಂಡಿ ಬಂದ್ ಕರೆಕೊಟ್ಟು ಬೃಹತ್ ರ‌್ಯಾಲಿ ಆಯೋಜಿಸಿದ್ದನ್ನು ಈಗ ಸ್ಮರಿಸಬಹುದು.

ತನಿಖೆ: ಸ್ಥಳೀಯ ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗಾಗಿ ಪೌರಾಯುಕ್ತ ಇಲಾಖೆಯ ಬೆಂಗಳೂರಿನ ಅಧಿಕಾರಿಗಳು ನಗರಸಭೆಗೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ನಗರಸಭೆಯ ಮೂಲಭೂತ ಸೌಲಭ್ಯಗಳ ಕುರಿತು ಸಹ ಅವರು ಸಮೀಕ್ಷೆ ನಡೆಸಲಿದ್ದಾರೆ ಎಂದು ಉಮೇಶ ಆಲಮೇಲಕರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT