ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಗಲಪ್ಪ ಮಹಿಮೆ

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿರುವ ಪುಟ್ಟ ಗ್ರಾಮ ಹಾಲಕೂಸುಗಲ್ಲ. ಗ್ರಾಮದ ಮಧ್ಯಭಾಗದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ತಲೆ ಎತ್ತಿ ನಿಂತಿರುವ ಎರಡು ಐತಿಹಾಸಿಕ ಜೋಡಿ ಸ್ಮಾರಕಗಳು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿವೆ.

ಧಾರವಾಡದಿಂದ ಸುಮಾರು ನಲವತ್ತೈದು ಕಿಲೋ ಮೀಟರ್ ದೂರದಲ್ಲಿದೆ ಈ ಗ್ರಾಮ. ಎರಡು ಶತಮಾನಗಳಿಗಿಂತಲೂ ಹಿಂದೆಯೇ ಇಲ್ಲಿ ನೆಲೆನಿಂತಿರುವ ಈ ಜೋಡಿ ಸ್ಮಾರಕಗಳಿಗೆ ಗ್ರಾಮಸ್ಥರು ನಟಗಲಪ್ಪ ಎಂದು ಹೆಸರಿಟ್ಟಿದ್ದಾರೆ. ಜಾತಿ-ಧರ್ಮದ ಬೇಧವಿಲ್ಲದೆಯೇ ಇದನ್ನು ದೇವರೆಂದು ಭಾವಿಸಿ ಪ್ರತಿ ಅಮವಾಸ್ಯೆಗೊಮ್ಮೆ ಪೂಜೆ ಮಾಡುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಇವನೊಬ್ಬ ಪವಾಡಪುರುಷ ಎನ್ನುತ್ತಾರೆ.

ಈ ಸ್ಮಾರಕಗಳ ಬಗ್ಗೆ ಅನೇಕ ಮೂಢನಂಬಿಕೆಗಳು ಗ್ರಾಮಸ್ಥರಲ್ಲಿದೆ. ಇದರಿಂದ ಅಜ್ಞಾನ ಕೂಡ ಮನೆಮಾಡುತ್ತಿದೆ. ಸ್ಮಾರಕಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT