ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್, ವೀನಸ್ ಶುಭಾರಂಭ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್): ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಸ್ಪೇನ್‌ನ ರಫೆಲ್ ನಡಾಲ್ ಅವರು ಶುಭಾರಂಭ ಮಾಡಿದರು.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸೋಮವಾರ ಆರಂಭವಾದ 125ನೇ ವರ್ಷದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್ 6-4, 6-2, 6-2 ರಲ್ಲಿ ಅಮೆರಿಕದ ಮೈಕಲ್ ರಸೆಲ್ ವಿರುದ್ಧ ಜಯ ಪಡೆದರು.

ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಅಟಗಾರ ನಡಾಲ್ ಮೊದಲ ಸೆಟ್‌ನಲ್ಲಿ ಸ್ವಲ್ಪ ಪರದಾಟ ನಡೆಸಿದರೂ, ಎರಡು ಗಂಟೆಗಳ ಹೋರಾಟದ ಬಳಿಕ ಗೆಲುವು ತಮ್ಮದಾಗಿಸಿಕೊಂಡರು.

ಆರನೇ ಶ್ರೇಯಾಂಕದ ಆಟಗಾರ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ 6-2, 6-2, 6-1 ರಲ್ಲಿ ಇಟಲಿಯ ಫಿಲಿಪೊ ವೊಲಾಂಡ್ರಿ ಅವರನ್ನು ಮಣಿಸಿದರೆ, ಫ್ರಾನ್ಸ್‌ನ ಗೈಲ್ ಮೊಂಫಿಲ್ಸ್ 6-4, 7-6, 6-3 ರಲ್ಲಿ ಜರ್ಮನಿಯ ಮಥಾಯಸ್ ಬಾಷಿಂಜೆರ್ ವಿರುದ್ಧ ಜಯ ಪಡೆದರು.

ಇತರ ಪಂದ್ಯಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ 6-3, 6-4, 6-4 ರಲ್ಲಿ ಇಟಲಿಯ ಪೊಟಿಟೊ ಸ್ಟರೇಸ್ ವಿರುದ್ಧವೂ, ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್ 6-4, 7-5, 6-3 ರಲ್ಲಿ ಜರ್ಮನಿಯ ಮೈಕಲ್ ಬೆರೆರ್ ಮೇಲೂ ಜಯ ಪಡೆದು ಎರಡನೇ ಸುತ್ತಿಗೆ ಮುನ್ನಡೆದರು.

ವೀನಸ್‌ಗೆ ಜಯ: ಐದು ಬಾರಿಯ ಚಾಂಪಿಯನ್ ಅಮೆರಿಕದ ವೀನಸ್ ವಿಲಿಯಮ್ಸ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6-3, 6-1 ರಲ್ಲಿ ಉಜ್ಬೆಕಿಸ್ತಾನದ ಅಕುಲ್ ಅಮನ್‌ಮುರಡೋವಾ ವಿರುದ್ಧ ಜಯ ಪಡೆದರು.

ವೀನಸ್ ಗಾಯದ ಕಾರಣ ಕಳೆದ ಐದು ತಿಂಗಳುಗಳ ಕಾಲ ಅಂಗಳದಿಂದ ದೂರವಿದ್ದರು. ಅವರು ಗೆಲುವಿನ ಹಾದಿಯಲ್ಲಿ ಹೆಚ್ಚಿನ ಒತ್ತಡ ಅನುಭವಿಸಲಿಲ್ಲ.

ಎರಡನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ವೆರಾ ಜ್ವೊನರೇವಾ 6-0, 3-6, 6-3 ರಲ್ಲಿ ಅಮೆರಿಕದ ಅಲೈಸನ್ ರಿಸ್ಕ್ ಅವರನ್ನು ಮಣಿಸಿದರು. ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ 3-6, 6-3, 6-4 ರಲ್ಲಿ ಚೀನಾದ ಶುಯ್ ಪೆಂಗ್ ವಿರುದ್ಧ ಜಯ ಪಡೆದರು. ವಿಭಾಗದ ಇತರ ಪಂದ್ಯಗಳಲ್ಲಿ ರಷ್ಯಾದ ಎಲೆನಾ ವೆಸ್ನಿನಾ 6-4, 6-3 ರಲ್ಲಿ ಸ್ಪೇನ್‌ನ ಲಾರಾ ಪೌಸ್ ಎದುರೂ, ಇಟಲಿಯ ಸಾರಾ ಎರಾನಿ 6-1, 6-4 ರಲ್ಲಿ ಎಸ್ಟೋನಿಯದ ಕಾಯಾ ಕನೆಪಿ ಮೇಲೂ ಜಯ ಸಾಧಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT