ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಿಗೆ ಅನುಕರಿಸುವ ರೋಬೊ!

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮಾನವರ ನಡಿಗೆಯನ್ನು ಯಥಾವತ್ತಾಗಿ ಅನುಕರಿಸುವ ಯಂತ್ರಮಾನವನ ಒಂದು ಜೊತೆ ಕಾಲುಗಳನ್ನು ಶೋಧ ಮಾಡಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಮಾನವ ಸ್ನೇಹಿ ರೋಬೊ ಅಭಿವೃದ್ಧಿಪಡಿಸಲು ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಅರಿಜೋನಾ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗ ರೋಬೊ ಕಾಲುಗಳನ್ನು ಅಭಿವೃದ್ಧಿಪಡಿಸಿದೆ.

ನ್ಯೂರಲ್ (ನರವ್ಯೆಹ) ಎಂಜಿಯರಿಂಗ್ ಪತ್ರಿಕೆಯಲ್ಲಿ ಈ ರೋಬೊದ ಜೈವಿಕ ನಿಖರತೆಯನ್ನು ವಿವರಿಸಲಾಗಿದ್ದು, ಮಾನವ ನಡಿಗೆ, ಅದರಲ್ಲೂ ಚಿಕ್ಕ ಮಕ್ಕಳು ಯಾವ ರೀತಿಯಲ್ಲಿ ನಡೆಯಲು ಕಲಿಯುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರಿಗೆ ಇದು ನೆರವಾಗಿದೆ. ಬೆನ್ನು ಹುರಿ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳು ಹೇಗೆ ಚೇತರಿಸಿಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಇದು ಸಹಕಾರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT