ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಿಗೆಗೊಂದು ಸ್ಪರ್ಧೆ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಮನರಂಜನೆ ನೀಡುವ ಚಟುವಟಿಕೆ ಕೂಡ ಹೌದು. ಓಟಕ್ಕಿಂತ ಕಡಿಮೆ ವೇಗ ಅಥವಾ ಸಾಮಾನ್ಯ ನಡಿಗೆಗಿಂತ ತುಸು ವೇಗದಲ್ಲಿ ಸಾಗುವ ಟ್ರೇಲ್‌ವಾಕರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ವಿದೇಶಿಯರಿಗಂತೂ ಇದೊಂದು ಮೋಜಿನ ನಡಿಗೆ.

ಇಂತಹ ವಿಶಿಷ್ಟ ಟ್ರೇಲ್‌ವಾಕರ್ ದೇಶದಲ್ಲಿ ಇದೇ ಮೊದಲ ಬಾರಿಗೆ 2012ರ ಫೆಬ್ರುವರಿ 10 ರಿಂದ 12 ರಂದು ನಡೆಯಲಿದೆ. ಆಕ್ಸ್‌ಫಾಮ್ ಇದರ ಸಾರಥ್ಯ ವಹಿಸಿದೆ. ಟ್ರೇಲ್‌ವಾಕರ್ ಬಿಡದಿಯಿಂದ ಪ್ರಾರಂಭಗೊಂಡು ಕನಕಪುರ ತಾಲ್ಲೂಕು ಸಂಗಮದಲ್ಲಿ ಕೊನೆಗೊಳ್ಳಲಿದೆ.

ಟ್ರೇಲ್‌ವಾಕರ್‌ನಲ್ಲಿ ಭಾಗವಹಿಸಲು ಈಗಾಗಲೇ 40 ತಂಡಗಳು ನೋಂದಣಿ ಮಾಡಿಕೊಂಡಿವೆ. ಸುಮಾರು 150 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ನಡಿಗೆ ಹಿಂದೆ ಸಾಮಾಜಿಕ ಕಾರ್ಯಕ್ಕೆ ನಿಧಿ ಸಂಗ್ರಹಣೆ ಮಾಡುವ ಸದುದ್ದೇಶ ಕೂಡ ಇದೆ.

ಅಂದ ಹಾಗೆ, ಈ ಟ್ರೇಲ್‌ವಾಕರ್ 100 ಕಿಮೀ ದೂರವನ್ನು ಗರಿಷ್ಠ 48 ಗಂಟೆಗಳಲ್ಲಿ ಪೂರೈಸುವ ಸವಾಲನ್ನು ಸ್ಪರ್ಧಿಗಳಿಗೆ ಒಡ್ಡಲಿದೆ. ಐಟಿ ಮಂದಿ, ನಡಿಗೆ ಪ್ರಿಯರು ಹಾಗೂ ವಿದೇಶಿ ಸ್ಪರ್ಧಿಗಳು ನೋಂದಣಿ ಮಾಡಿಕೊಂಡು ಟ್ರೇಲ್‌ವಾಕರ್‌ಗೆ ರಂಗು ತುಂಬಿದ್ದಾರೆ.

`ಆಕ್ಸ್‌ಫಾಮ್ ಟ್ರೇಲ್‌ವಾಕರ್ ಕೇವಲ ಓಟಗಾರರು ಅಥವಾ ವೃತ್ತಿಪರ ಅಥ್ಲಿಟ್‌ಗಳಿಗಾಗಿ ಮಾತ್ರವಲ್ಲ. ಇದು ಬಡತನ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಹಾಗೂ ಅಸಹಾಯಕರಿಗೆ ಬದುಕು ಕಟ್ಟಿಕೊಡುವಲ್ಲಿ ಶ್ರಮವಹಿಸುವ ಮನೋಭಾವ ಹೊಂದಿರುವರಿಗೆ ಕೂಡ ಹೌದು~ ಎನ್ನುತ್ತಾರೆ ಆಕ್ಸ್‌ಫಾಮ್‌ನ ರಾಯಭಾರಿ, ನಟ ರಾಹುಲ್ ಬೋಸ್.

`ಆಕ್ಸ್‌ಫಾಮ್ ಟ್ರೇಲ್‌ವಾಕರ್‌ನಂತಹ ಕಾರ್ಯಕ್ರಮಗಳು ಸಮುದಾಯದ ಅಭ್ಯುದಯಕ್ಕೆ ನೆರವಾಗುವಂತಹ ಕೊಡುಗೆ ನೀಡಲು ಪ್ರೋತ್ಸಾಹಿಸುತ್ತವೆ~ ಎನ್ನುತ್ತಾರೆ ಆಕ್ಸ್‌ಫಾಮ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಷಾ ಅಗರ್‌ವಾಲ್.

ನೋಂದಣಿ ಮತ್ತು ಮಾಹಿತಿಗೆ:  www.trailwalker.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT