ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಕನಸಿನ ಮನೆ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ತುಳುನಾಡ ಗುತ್ತಿನ ಮನೆ

`ಜನಪದ ಕಲೆ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಇರುವ ನನಗೆ ತುಳುನಾಡಿನ ಪ್ರಾಚೀನ -ಗುತ್ತಿನ ಮನೆ- ಶೈಲಿಯಲ್ಲಿಯೇ ಮನೆ ಕಟ್ಟಿ, ಅದಕ್ಕೆ ಆಧುನಿಕ ಸವಲತ್ತುಗಳ ಸ್ಪರ್ಶ ನೀಡಬೇಕೆಂಬ ಕನಸಿದೆ'. `ನಾನೇ ದುಡಿದು ಸಂಪಾದಿಸಿದ ನನ್ನ ಊರಿಗೆ ಹತ್ತಿರವಿರುವ ಪ್ರಕೃತಿ ಸೌಂದರ್ಯದ ಸ್ಥಳದಲ್ಲಿ, ಮುಖ್ಯ ರಸ್ತೆಯಿಂದ ಸ್ವಲ್ಪ ಹೊರಗೆ ನನ್ನ ಮನೆ ಇರಬೇಕು. ಪಕ್ಕದಲ್ಲಿ ನದಿ-ತೊರೆ ಹರಿಯುತ್ತಿದ್ದರೆ ಚೆನ್ನ.

ಮನೆ ಸುತ್ತ ಅಡಿಕೆ, ತೆಂಗು, ಬಾಳೆ ತೋಟ. ಹಲಸು, ಮಾವು, ಸಪೋಟ ಮರ ಇರಬೇಕು. ನಿವೃತ್ತ ಜೀವನವನ್ನು ಗಿಡ-ಮರ, ಹೂವು-ಹಣ್ಣು, ಪ್ರಾಣಿ-ಪಕ್ಷಿಗಳೊಂದಿಗೆ ಪ್ರಶಾಂತ ವಾತಾವರಣದಲ್ಲಿ ಕಳೆಯುವಂತಾಗಬೇಕು. ಮನೆ ಸುತ್ತಲಿನ ಪರಿಸರ ಬರವಣಿಗೆಗೆ ಪ್ರೇರಕವಾಗಿರಬೇಕು'.

ಗುತ್ತಿನ ಮನೆ ನೆನಪಿಸುವಂತೆ ನಾಲ್ಕು ಕಡೆಯೂ ಆವರಿಸಿರುವ (ತುಳುವಿನ ಸುತ್ತುಪಡಿಪಿರೆ) ಮನೆಯಾಗಿರಬೇಕು. ಪೂರ್ವದಲ್ಲಿ ಮುಂಬಾಗಿಲು, ಉತ್ತರದಲ್ಲಿ ಹಿಂಬಾಗಿಲು, ಮುಂಭಾಗದ ಸೀಟೌಟ್‌ನಲ್ಲಿ ಎರಡು ಆಕರ್ಷಕ ಕೆತ್ತನೆಯ- ಮರದಂತೆ ಕಾಣುವ ಸಿಮೆಂಟ್ ಕಂಬಗಳಿರಬೇಕು. ಮನೆ ಮಧ್ಯಭಾಗದಲ್ಲಿಯೂಮುಂಭಾಗದಂತೆ ಆಕರ್ಷಕ ಕೆತ್ತನೆಯ ಕಂಬಗಳಿರಬೇಕು.

ಈಶಾನ್ಯದಲ್ಲಿ ದೇವರ ಕೋಣೆ, ಅದರ ಮುಂಭಾಗ ಚಾವಡಿ, ಆಗ್ನೇಯದಲ್ಲಿ ಅಡುಗೆ ಕೋಣೆ, ಪಕ್ಕದಲ್ಲಿ ಊಟದ ಕೋಣೆ, ನೈರುತ್ಯ ಮತ್ತು ಪಶ್ಚಿಮದಲ್ಲಿ ನಾಲ್ಕು ಮಲಗುವ ಕೋಣೆ ಇರಬೇಕು. ಛಾವಣಿಗೆ ಮಂಗಳೂರು ಹೆಂಚು ಹೊದಿಸಬೇಕು. ಅದರ ಕೆಳಗೆ ತುಳುನಾಡು ಶೈಲಿಯ ಮರದ ಹಲಗೆಗಳ ಮುಚ್ಚಿಗೆ ಇರಬೇಕು.
ಒಟ್ಟಿನಲ್ಲಿ ಕಡಿಮೆ ಖರ್ಚಿನ ಅಂದದ ಮನೆ ನನ್ನ ಕುಟುಂಬದ ಆರೋಗ್ಯ ಕಾಪಾಡುವುದರ ಜತೆಗೆ ಅತಿಥಿಗಳ ಮನಸ್ಸಿಗೂ ಮುದ ನೀಡುವಂತಿರಬೇಕು.
-ಸತೀಶ್ ಕುಮಾರ್ ಅಂಡಿಂಜೆ

ಸಾಲದ ಹೊರೆ-ನೆಮ್ಮದಿಗೆ ಬರೆ
ಸಾಲದಲ್ಲಿ ಅಲ್ಲ, ಸ್ವಂತ ದುಡ್ಡಿನಲ್ಲಿಯೇ ಸೂರೊಂದನ್ನು ಮಾಡಿಕೊಳ್ಳುವಾಸೆ. ಪ್ರಕೃತಿಗೆ ಹತ್ತಿರವಾಗಿರುವಂತಹ ಮನೆಯನ್ನು, ಸುತ್ತ ವಿಶಾಲ ಜಾಗ ಬಿಟ್ಟು ಕಟ್ಟಿಕೊಳ್ಳಬೇಕು ಎಂಬ ಆಸೆ.

ಮನೆಯ ಅಂಗಳದಲ್ಲಿ ಕೈತೋಟ, ಅಲ್ಲಿ ಹೂವು, ಅಲಂಕಾರಿಕ ಗಿಡ ಇರಬೇಕು.ಮನೆಯೊಳಕ್ಕೆ ಅಗತ್ಯವಿರುವಷ್ಟು ನೈಸರ್ಗಿಕ ಬೆಳಕು-ಗಾಳಿ ಬರುವಂತೆ ಕಟ್ಟಿಸಿದರೆ ವಿದ್ಯುತ್ ಮಿತವ್ಯಯಕ್ಕೂ ಸಹಕಾರಿ. ವಾಸ್ತುಶಾಸ್ತ್ರದ ವಿನ್ಯಾಸವೋ, ವೈಜ್ಞಾನಿಕ ದೃಷ್ಟಿಕೋನವೋ ಒಂದನ್ನು ಆಯ್ಕೆ ಮಾಡಿಕೊಂಡು ಅದರ ಪ್ರಕಾರವೇ ಮನೆ ಕಟ್ಟಿಸಬೇಕು. 

ಅಧುನಿಕ ಪರಿಕರಗಳನ್ನು ಬಳಸಿಯೂ ಜೇಬಿಗೆ ಹೊರೆಯಾಗದ ರೀತಿ ಮನೆ ಕಟ್ಟಿಸಬೇಕು. ಬಾರಿ ಬಜೆಟ್‌ಗೆ ಹೋದರೆ ಕೈಯಲ್ಲಿದ್ದ ಹಣ ಸಾಲದೇ ಸಾಲ ಮಾಡಿ ಮನೆ ಕಟ್ಟಿಸಿದರೆ ಕೊನೆಗೆ ಆ `ಕನಸಿನ ಮನೆ'ಯನ್ನು ಬಾಡಿಗೆಗೆ ಕೊಟ್ಟೊ, ಮಾರಾಟ ಮಾಡಿಯೋ ಸಾಲ ತೀರಿಸುವ ಸ್ಥಿತಿಗೆ ಬರಬಾರದು.
-ವಿಜಯ್ ಕುಮಾರ್ ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT