ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೂ ಅವಕಾಶ ನೀಡಿ: ಸಿಪಿಐ

Last Updated 8 ಏಪ್ರಿಲ್ 2014, 6:08 IST
ಅಕ್ಷರ ಗಾತ್ರ

ತುಮಕೂರು: ಹೋರಾಟ ಮಾಡು­ತ್ತಲೇ ಚುನಾವಣಾ ಕಣಕ್ಕೆ ಬಂದಿರುವ ಸಿಪಿಐ ಅಭ್ಯರ್ಥಿ ವಿ.ಚಿನ್ನಪ್ಪ ಅವರಿಗೆ ಕಾರ್ಮಿಕ ಮುಖಂಡ ಎಂದು ಕರೆಸಿಕೊಳ್ಳಲು ಇಷ್ಟವಂತೆ.

*ಪ್ರಚಾರಕ್ಕೆ ನಿಮ್ಮ ಸಿದ್ಧತೆ?
ಚುನಾವಣೆಯಲ್ಲಿ ಎಡಪಕ್ಷಗಳು ಒಂದಾಗಿವೆ. ಕಾರ್ಯಕರ್ತರ ಸಂಖ್ಯೆ ಹೆಚ್ಚಿದೆ. ಸಂಘಟನೆ ಮುಖಂಡರು ಮನೆಮನೆಗೆ ಭೇಟಿ ನೀಡಲಿದ್ದಾರೆ. ಉಳಿದಂತೆ ಬಹಿರಂಗ ವಾಹನ­ದಲ್ಲಿ ಪ್ರವಾಸ ಮಾಡಲಾಗುವುದು.

*ಮತದಾರರಿಗೆ ನಿಮ್ಮ ಭರವಸೆ?
ಎಲ್ಲ ತಾಲ್ಲೂಕುಗಳಲ್ಲಿಯೂ ಶೀತಲ ಘಟಕ (ಕೋಲ್ಡ್‌ ಸ್ಟೋರೆಜ್‌) ಸ್ಥಾಪನೆ, ಜಿಲ್ಲೆಗೆ ಸರ್ಕಾರಿ ಎಂಜಿನಿಯ­ರಿಂಗ್‌ ಕಾಲೇಜು ತರುವುದು, ಸರ್ಕಾರಿ ಗೋಮಾಳ ರಕ್ಷಣೆ.

*ಏಕೆ ಚುನಾವಣೆಗೆ    ಸ್ಪರ್ಧಿಸಿದ್ದೀರಿ ?
ಯುವಕರು, ರೈತರು, ಕಾರ್ಮಿಕರ ಗರಿಷ್ಠ ಮತಗಳನ್ನು ಪಡೆಯುವುದೇ ನಮ್ಮ ಗುರಿ. ಕೋಲ್ಡ್‌ ಸ್ಟೋರೆಜ್‌ ಮೂಲಕ ರೈತರಿಗೆ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮೂಲಕ ಮಧ್ಯಮ ವರ್ಗ, ಕಾರ್ಮಿಕರ ಮಕ್ಕಳಿಗೆ ಅನುಕೂಲ ಕಲ್ಪಿಸುವುದು ನನ್ನ ಲಕ್ಷ್ಯ.

*ನಿಮಗೆ ತಿಳಿದಿರುವಂತೆ ಜಿಲ್ಲೆಯ ಸಮಸ್ಯೆ?
ಜಿಲ್ಲೆಯಲ್ಲಿ ತೆಂಗು ಬೆಳೆಗೆ ನೀರಿಲ್ಲದೆ ಇರುವಂತಹ ಸ್ಥಿತಿ ಇದೆ. ಪರಮಶಿವಯ್ಯ ವರದಿ ಜಾರಿ, ರೈಲ್ವೆ ಸಂಪರ್ಕದಲ್ಲಿಯೂ ಜಿಲ್ಲೆ ಹಿಂದೆ ಉಳಿದಿದೆ. ಕೈಗಾರಿಕಾ ವಲಯ­ಗಳಿ­ದ್ದರೂ ರಾಜಧಾನಿಗೆ ಕೆಲಸಕ್ಕೆ ಹೋಗುವ ಕಾರ್ಮಿಕ ಸಂಖ್ಯೆ ಕಡಿಮೆ­ಯಾಗಿಲ್ಲ. ಪಟ್ಟಿ ಮಾಡುತ್ತ ಹೋದರೆ ಪಟ್ಟಿ ಇನ್ನಷ್ಟು ದೊಡ್ಡದಾಗುತ್ತದೆ.

*ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಿತಿ?
ಜಿಲ್ಲೆಯಲ್ಲಿ ವಿದ್ಯುತ್‌ ಅಭಾವ ಜಾಸ್ತಿ ಇದೆ. ಉತ್ಪಾದನೆ ಕಡಿಮೆ­ಯಾಗು­ತ್ತಿದೆ. ಬೆಳ್ಳಾವಿಯಲ್ಲಿದ್ದ ಕೊನಾರ್ಕೋ ವಿದ್ಯುತ್‌ ಘಟಕವನ್ನು ಇಲ್ಲಿಯೇ ಉಳಿಸಿಕೊಂಡಿದ್ದಿದ್ದರೆ, ಜಿಲ್ಲೆಯಲ್ಲಿ ಇಷ್ಟು ವಿದ್ಯುತ್‌ ಅಭಾವ ಉಂಟಾಗುತ್ತಿರಲಿಲ್ಲ. ಕೊನಾರ್ಕೋ ಘಟಕ ಉಳಿಸಿಕೊಳ್ಳಲು ಆಗಿನ ಇಂಧನ ಸಚಿವರು ಸಹಕಾರ ನೀಡಲಿಲ್ಲ.

*ಕಾರ್ಮಿಕರಾಗಿ ನಿಮ್ಮ ಹೋರಾಟ?
ಕಟ್ಟಡ ಕಾರ್ಮಿಕ ಮದುವೆಗೆ ₨ 50 ಸಾವಿರ, ವಿದ್ಯಾಭ್ಯಾಸಕ್ಕೆ ಸಹಾಯ, ಆಕಸ್ಮಿಕ ಮರಣ ಹೊಂದಿದ್ದ ಕಾರ್ಮಿಕ ಕುಟುಂಬಗಳಿಗೆ ₨ 1 ಲಕ್ಷ ಸಹಾಯ ನೀಡು­ವಂತೆ ಮಾಡಿದ್ದು ನನ್ನ ಸಾಧನೆ. ಜಿಲ್ಲೆಯಲ್ಲಿ 3500ಕ್ಕೂ ಹೆಚ್ಚು ಕಾರ್ಮಿಕರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದು ಅವರಿಗೆ ಭದ್ರತೆ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ.

ವಿ.ಚಿನ್ನಪ್ಪ (59)

ಪಕ್ಷ            : ಸಿಪಿಐ
ವಿದ್ಯಾರ್ಹತೆ  : ಐಟಿಐ, ಎಟಿಎಸ್
ವಾಸ          : ವಕ್ಕೋಡಿ ಗೊಲ್ಲರಹಟ್ಟಿ, ಬೆಳ್ಳಾವಿ ತಾಲ್ಲೂಕು
ವೃತ್ತಿ          :  ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT