ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ದಾ, ಗಾದಿ, ಚಾಪು ಮೇಲೆ ಅಂಬಾರಿ...

Last Updated 18 ಸೆಪ್ಟೆಂಬರ್ 2013, 6:49 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರುವ ಆನೆಗೆ ಭಾರ ಆಗಬಾರದು ಎನ್ನುವ ಸಲುವಾಗಿ ಅನೇಕ ಸಿದ್ಧತೆಗಳು ನಗರದ ಅಂಬಾ ವಿಲಾಸ ಅರಮನೆಯಲ್ಲಿ ನಡೆಯುತ್ತಿವೆ.

ಇದಕ್ಕಾಗಿ ಅಂಬಾರಿ ಹೊರಿಸುವ ಮೊದಲು ತೆಂಗಿನ ನಾರಿನ ನಮ್ದಾ ಎನ್ನುವುದನ್ನು ಹಾಕಲಾಗುತ್ತದೆ. ಇದರ ಮೇಲೆ ಗಾದಿ. ಆಮೇಲೆ ಚಾಪು ಹಾಕಲಾಗುತ್ತದೆ. ದಸರಾ ಮೆರವಣಿಗೆ ಮುಗಿಯುವವರೆಗೂ ಅಂಬಾರಿ ಹೊತ್ತ ಆನೆಗೆ ಆಯಾಸವಾಗಬಾರದು ಎನ್ನುವ ಸಲುವಾಗಿ ಹಾಕುವ ವಸ್ತುಗಳು ಇವು.

ಈಗಾಗಲೇ ಕಳೆದ ವರ್ಷದ ನಮಾ್ದ, ಗಾದಿ ಹಾಗೂ ಚಾಪುಗಳನ್ನು ವಿವಿಧ ಆನೆಗಳಿಗೆ ಹಾಕಿ ನಿತ್ಯ ಬೆಳಿಗ್ಗೆ ತಾಲೀಮು ನಡೆಸಲಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆಯ ದಿನ ಹಾಕುವ ಹೊಸ ನಮ್ದಾ, ಗಾದಿ ಹಾಗೂ ಚಾಪುಗಳನ್ನು ಸಿದ್ಧಗೊಳಿಸುವ ಕಾರ್ಯ ಮಂಗಳವಾರದಿಂದ ಆರಂಭಗೊಂಡಿತು.

ನಿವೃತ್ತ ಮಾವುತ ಪಾಷಾ ಅವರ ನೇತೃತ್ವದಲ್ಲಿ ಮಾವುತ ಅಕ್ರಂ ಹಾಗೂ ಇತರರು ನಮಾ್ದ ತಯಾರಿಸುತ್ತಿದ್ದಾರೆ. ‘ಪ್ರತಿ ನಮ್ದಾಕ್ಕೆ 20 ಕಿಲೋ ತೆಂಗಿನ ನಾರು ಬೇಕು. ಮೊದಲು ದಪ್ಪವಾದ ಖಾಕಿ ಬಟ್ಟೆ ಹಾಸಿ, ಅದರ ಮೇಲೆ ಗುಣಮಟ್ಟದ ತೆಂಗಿನ ನಾರನ್ನು ಹಾಕುತ್ತೇವೆ. 6 ಅಡಿ ಉದ್ದ ಹಾಗೂ 4 ಅಡಿ ಅಗಲದ ನಮಾ್ದ ಸಿದ್ಧಗೊಳಿಸಲು ಬೆಳಿಗ್ಗೆ ಶುರು ಮಾಡಿದರೆ ಸಂಜೆಯ ಹೊತ್ತಿಗೆ ಒಂದು ನಮ್ದಾ ಸಿದ್ಧಗೊಳ್ಳುತ್ತದೆ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಗಳ್ಳುವ 12 ಆನೆಗಳಿಗೂ ನಮ್ದಾ ಹೊಲಿಯುತ್ತೇವೆ. ಪ್ರತಿ ನಮ್ದಾ ತೂಕ 30–40 ಕಿಲೋ ಇರುತ್ತದೆ’ ಎಂದು ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ದಾಗಳು ಸಿದ್ಧಗೊಂಡ ಮೇಲೆ ಗಾದಿಗಳ ಸಿದ್ಧತೆಯಲ್ಲಿ ಅವರು ತೊಡಗುತ್ತಾರೆ. ದಪ್ಪವಾದ ಖಾಕಿಯ ಬಟ್ಟೆಯ ಮೇಲೆ ಕೆರೆಯಲ್ಲಿ ಬೆಳೆದ ಜೊಂಡನ್ನು ಬಳಸುತ್ತಾರೆ. ಇದಕ್ಕೂ ಮೊದಲು ತಂದ ಜೊಂಡನ್ನು ಬಿಸಿಲಲ್ಲಿ ಒಣಗಿಸುತ್ತಾರೆ. ಗಾದಿಗೆ ಸಮತೋಲನ ಮತ್ತು ಗಟಿ್ಟಯಾಗಿ ನಿಲ್ಲುವ ಸಲುವಾಗಿ ಮರದ ಕಡಿ್ಡಗಳನ್ನು ಅಲ್ಲಲ್ಲಿ ಹಾಕುತ್ತಾರೆ. ಜತೆಗೆ, ಗೋಣಿತಾಟುಗಳನ್ನೂ ಬಳಸುತ್ತಾರೆ. ಹೀಗೆ ಪ್ರತಿ ಗಾದಿ 150 ಕಿಲೋ ತೂಕ ಇರುತ್ತವೆ. ಇವುಗಳು 6 ಅಡಿ ಉದ್ದ ಹಾಗೂ 6 ಅಡಿ ಅಗಲ ಇರುತ್ತವೆ. ಆದರೆ, ಈ ಗಾದಿಗಳಿಗೆ ಹಚ್ಚು ಬಳಸುವುದಿಲ್ಲ. ‘ಹತ್ತಿಯು ಸರಿಹೊಂದುವುದಿಲ್ಲ. ಒಂದು ವೇಳೆ ಹತ್ತು ಬಳಸಿದರೆ ಅಂಬಾರಿ ಕೂಡಿಸಿದ ಕೂಡಲೇ ಚಪ್ಪಟೆಯಾಗುವ ಸಾಧ್ಯತೆಗಳೇ ಹೆಚ್ಚು’ ಎನ್ನುತ್ತಾರೆ ಪಾಷಾ.

ಇವುಗಳು ಸಿದ್ಧಗೊಂಡ ಮೇಲೆ ಚಾಪು ಎನ್ನುವ ನಮ್ದಾ ರೀತಿಯ ಹಾಸಿಗೆಯನ್ನು ತಯಾರಿಸುತ್ತಾರೆ. ಅಂಬಾರಿಯು ಸಮನಾಗಿ ಕುಳಿತುಕೊಳ್ಳುವ ಸಲುವಾಗಿ ಚಾಪು ಬಳಸುತ್ತಾರೆ. ಇವು 4 ಅಡಿ ಉದ್ದ ಹಾಗೂ 4 ಅಡಿ ಅಗಲ ಇರುತ್ತವೆ. ಇವುಗಳನ್ನು ಕೂಡಾ ತೆಂಗಿನ ನಾರಿನಿಂದ ಸಿದ್ಧಪಡಿಸುತ್ತಾರೆ.

‘ತಾಲೀಮು ಶುರುವಾದ ದಿನದಿಂದ ಕಳೆದ ವರ್ಷದ ನಮ್ದಾ, ಗಾದಿ ಹಾಗೂ ಚಾಪು ಹಾಕಿ ಮರದ ತೊಟ್ಟಿಲು ಕೂಡಿಸಲಾಗುತ್ತದೆ. ಈ ತೊಟ್ಟಿಲಿನಲ್ಲಿ 350–400 ಕಿಲೋ ತೂಕದ ಮರಳಿನ ಮೂಟೆಗಳಿರುತ್ತವೆ. ಇವುಗಳನ್ನು ಹೊರುವ ಅಭ್ಯಾಸ ಆನೆಗಳಿಗೆ ಆಗಲಿ ಎನ್ನುವ ಸಲುವಾಗಿ ನಿತ್ಯ ಅರಮನೆಯಿಂದ ಮೆರವಣಿಗೆ ಅಂತ್ಯವಾಗುವ ಬನಿ್ನಮಂಟಪದವರೆಗೆ ಹೋಗಿಬರುತ್ತಿವೆ. ಪ್ರತಿ ದಿನ ಒಂದೊಂದು ಆನೆ ಮೇಲೆ ತೊಟ್ಟಿಟಲು ಕಟ್ಟಲಾಗುತ್ತದೆ. ಕೆಲವೇ ದಿನಗಳಲ್ಲಿ ಚಿನ್ನದ ಅಂಬಾರಿ ಹೋಲುವ ಮರದ ಹೌರಾವನ್ನು ಅಭ್ಯಾಸ ಮಾಡಿಸುತ್ತೇವೆ. ಈ ಎಲ್ಲವೂ ಆನೆಗಳನ್ನು ಮಾನಸಿಕವಾಗಿ ಸಿದ್ಧಗೊಳಿಸುವುದಾಗಿದೆ’ ಎನ್ನುತ್ತಾರೆ ಗಜಪಡೆಯ ವೈದ್ಯ ಡಾ.ನಾಗರಾಜ್‌. 

23ಕ್ಕೆ ಇನ್ನೊಂದು ಗಜಪಡೆ
ಈಗಾಗಲೇ 6 ಆನೆಗಳ ಪಡೆಯೊಂದು ನಗರದ ಅಂಬಾ ವಿಲಾಸ ಅರಮನೆಯಲ್ಲಿ ಬೀಡುಬಿಟ್ಟದೆ. ಇನೊ್ನಂದು ಗಜಪಡೆ ಸೆ. 23ರಂದು ಆಗಮಿಸಲಿದೆ.

ಇದರಲ್ಲಿ ತಿತಿಮತಿಯಿಂದ ದುರ್ಗಾಪರಮೇಶ್ವರಿ ಹಾಗೂ ಗೋಪಾಲಸಾ್ವಮಿ ಬರುತ್ತವೆ. ದುಬಾರೆ ಆನೆ ಶಿಬಿರದಿಂದ ಹರ್ಷ, ವಿಕ್ರಂ, ವಿಜಯಾ, ಪ್ರಶಾಂತ್‌ ಹಾಗೂ ಗೋಪಿ ಆನೆಗಳು ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT