ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಶತ್ರು ನಾವೇ, ಅಲ್ಲವೇ?

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಧಾನಸೌಧದಲ್ಲೇ ಮಂತ್ರಿಗಳಿಗೆ ಚಪ್ಪಲಿ ಏಟು ಮತ್ತು ಮಲ್ಲೇಶ್ವರದ ಪೊಲೀಸ್ ಠಾಣೆ ಪಕ್ಕದಲ್ಲೇ ಪಾಲಿಕೆ ಸದಸ್ಯರ ಹತ್ಯೆಯಂತಹ ಅಮಾನವೀಯ ಕೃತ್ಯ ನಡೆದಿದೆ. ಹಿಂದೆ ಮಹಾತ್ಮಗಾಂಧಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಕೂಡಾ ಹತ್ಯೆಗೆ ಈಡಾಗಿದ್ದರು.

ಗೃಹಮಂತ್ರಿ ಚಿದಂಬರಂ, ನರೇಂದ್ರ ಮೋದಿ, ಓಮರ್ ಅಬ್ದುಲ್ಲಾರವರುಗಳ ಮೇಲೆ ಚಪ್ಪಲಿ ಎಸೆಯಲಾಗಿತ್ತು. ಈಗಲೂ ಚಿದಂಬರಂ ರಕ್ಷಕರಿಲ್ಲದೆ ಓಡಾಡುತ್ತಾರೆ.

ನಮ್ಮ ಮನೆಗಳಲ್ಲಿ ಕೂಡಾ ನಾವು ಪ್ರಯೋಗಿಸುವ ಪದಗಳಿಂದ ಪ್ರಮಾದಗಳು ಆಗುತ್ತಿವೆ. ಅಪ್ರಿಯವಾದ ಸತ್ಯವನ್ನು ಪ್ರಿಯವಾದ ಅಸತ್ಯವನ್ನೂ ಹೇಳಬಾರದೆಂದು ನಾಣ್ಣುಡಿ ಇದೆ. ಜನಪ್ರತಿನಿಧಿಗಳು ಜನರ ವಿಶ್ವಾಸ ಗಳಿಸಿದರೆ ಯಾವ ಆತಂಕವೂ ಎದುರಾಗದು.

ಸಾಮಾನ್ಯ ಜನ ರಕ್ಷಕರಿಲ್ಲದೇ, ಯಾವ ಹೆದರಿಕೆ ಇಲ್ಲದೆ ಓಡಾಡುವಾಗ, ಚುನಾಯಿತು ಪ್ರತಿನಿಧಿಗಳು ಹೆದರುವುದೇಕೆ? ದೇವಸ್ಥಾನಗಳಿಗೆ ಹೋಗಿ ನಮಗೆ ಅಂತಸ್ತು, ಐಶ್ವರ್ಯ ಕೇಳುವ ಬದಲು ನಮಗೆ ಅಸೂಯೆ, ಅಹಂಕಾರ, ದುರಾಸೆ ಬರದೇ ಇರಲಿ ಎಂದೇಕೆ ಕೇಳುವುದಿಲ್ಲ? ಪ್ರತಿಸ್ಪರ್ಧಿಗಳನ್ನು ಹೀನಾಯವಾಗಿ ಟೀಕೆ ಮಾಡದೆ,

ಅಪ್ರಸ್ತುತ ಮತ್ತು ಅವಾಚ್ಯ ಪದಗಳನ್ನು ಬಳಸದೆ ಬದುಕಲು ಸ್ನೇಹಗಳಿಸಲು ಸಾಧ್ಯವಿಲ್ಲವೇ? ಧರ್ಮಗಳ ಬಗ್ಗೆ ಗರ್ವ, ಗೌರವ, ಶ್ರದ್ಧೆ ಇರುವವರು, ತಮ್ಮ ನಡವಳಿಕೆಗಳ ಬಗ್ಗೆ  ಗಮನವಿಡುವುದಿಲ್ಲವೇಕೆ?

 ಸರ್ವರಿಗೂ ಸದವಕಾಶ ಸೌಲಭ್ಯಗಳು ಸಿಕ್ಕರೆ ವೈಷಮ್ಯ ಇರುತ್ತದೆಯೇ? ಮನೆಗಳಲ್ಲಿ, ರಸ್ತೆಗಳಲ್ಲಿ ಓಡಾಡುವಾಗ ನಮ್ಮ ಅಹಂಕಾರಗಳಿಗೆ ಮಣಿಯದೇ ಕಣ್ಣು, ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಿಕ್ಕವರಿಗೆ ನೋವಾಗುವುದೇ ಎಂದು ಅರಿತು ನಡೆದರೆ ನಮಗೆ ರಕ್ಷಣೆ ಬೇಕಾಗುತ್ತದೆಯೇ?
-.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT