ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಬೆಲೆ ಕಡಿಮೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

* ಏರಿಕೆ ಅನಿವಾರ್ಯವಾಗಿತ್ತೇ?
ಹೌದು. ಹಾಲಿನ ಉತ್ಪಾದನಾ ವೆಚ್ಚ ಏರುತ್ತಿದೆ. ರೈತರ ಕಷ್ಟ ನೋಡಲಾಗದೆ ಈ ತೀರ್ಮಾನಕ್ಕೆ ಬರಬೇಕಾಯಿತು.

* ದರ ಹೆಚ್ಚು ಮಾಡಿ ಎಂದು ಹೈನುಗಾರರು ಕೇಳಿದ್ದರೆ?
ಜಿಲ್ಲಾ ಒಕ್ಕೂಟಗಳ ಮೂಲಕ ರೈತರು ಹಾಲಿನ ದರ ಹೆಚ್ಚು ಮಾಡಿ ಎಂದು ಮನವಿ ಮಾಡಿದ್ದರು. ಬೇರೆ ರಾಜ್ಯಗಳಲ್ಲಿ ರೈತರಿಗೆ ಹೈನುಗಾರಿಕೆ ಪ್ರಮುಖ ಆದಾಯವಾಗಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಜೀವನಾಧಾರ.

* ಗ್ರಾಹಕರಿಗೆ ಹೊರೆ ಆಗಿದೆ ಅನ್ನಿಸುವುದಿಲ್ಲವೆ?
ಖಾಸಗಿ ಕಂಪೆನಿಗಳ ಹಾಲಿನ ಬೆಲೆ ನೋಡಿ (ಬಾಕ್ಸ್ 4). ಹೊರ ರಾಜ್ಯಗಳ ಸಹಕಾರ ಸಂಘಗಳ ದರವನ್ನು ಹೋಲಿಸಿ. ನಂದಿನಿ ಹಾಲಿನ ಬೆಲೆಯೇ ಕಡಿಮೆ. ನಾವು ಹೆಚ್ಚು ಲಾಭ ಇರಿಸಿಕೊಂಡಿಲ್ಲ.

* ಆಡಳಿತ ವೆಚ್ಚ ಕಡಿಮೆ ಮಾಡುತ್ತಿರಾ?
ನಮ್ಮ ಲಾಭಾಂಶವೇ ಅತ್ಯಂತ ಕಡಿಮೆ. ನಾವು ಲೀಟರ್‌ಗೆ ರೂ. 2.50 ರಿಂದ 3ರಲ್ಲಿ ಸಂಸ್ಥೆಯನ್ನು ನಿರ್ವಹಣೆ ಮಾಡ್ತಿದ್ದೇವೆ. ಉಳಿದ ಕಡೆ ಈ ಪ್ರಮಾಣ ಲೀಟರ್‌ಗೆ ರೂ. 6ರಿಂದ 10 ಇದೆ. ಪ್ರತಿ ಸಲ ದರ ಏರಿಕೆ ಮಾಡಿದಾಗ ಹೈನುಗಾರ, ಗ್ರಾಹಕ, ಸಂಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡೇ ತೀರ್ಮಾನ ಮಾಡ್ತೀವಿ.

ಎ.ಎಸ್.ಪ್ರೇಮನಾಥ್ (ಕೆಎಂಎಫ್ ಎಂಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT