ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಯೋಜನೆ ಫಲಿಸಿತು: ತ್ರಿವೇದಿ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮಧ್ಯಮ ವೇಗ ಮತ್ತು ವೇಗದ ಬೌಲರ್‌ಗಳನ್ನು ಮಾತ್ರ ಕಣಕ್ಕಿಸಿದ ನಮ್ಮ ನಿರ್ಧಾರಕ್ಕೆ ತಕ್ಕ ಫಲ ಲಭಿಸಿತು ಎಂದು ರಾಜಸ್ತಾನ ರಾಯಲ್ಸ್ ತಂಡದ ಬೌಲರ್ ಸಿದ್ಧಾರ್ಥ್ ತ್ರಿವೇದಿ ಹೇಳಿದ್ದಾರೆ.

`ಇದು ನಮ್ಮ ಯೋಜನೆಯಾಗಿತ್ತು. ಇದೇ ಕಾರಣದಿಂದ ಗೆಲುವು ಲಭಿಸಿದೆ. ಅಂತಿಮ ಇಲೆವೆನ್‌ನಲ್ಲಿ ಸ್ಪಿನ್ನರ್‌ಗಳಿಗೆ ಸ್ಥಾನ ನೀಡದೆ, ಕೇವಲ ವೇಗದ ಬೌಲರ್‌ಗಳನ್ನು ಮಾತ್ರ ಕಣಕ್ಕಿಳಿಸಿದ್ದು ನೆರವಾಯಿತು' ಎಂದು ಸೋಮವಾರ ರಾತ್ರಿ ನಡೆದ ಪಂದ್ಯದ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ 19 ರನ್‌ಗಳಿಂದ ನೈಟ್ ರೈಡರ್ಸ್ ವಿರುದ್ಧ ಜಯ ಪಡೆದಿತ್ತು. ಗೆಲುವಿಗೆ 145 ರನ್‌ಗಳ ಗುರಿ ಬೆನ್ನಟ್ಟಿದ್ದ ರೈಡರ್ಸ್ 19 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟಾಗಿತ್ತು. ಸಿದ್ಧಾರ್ಥ್ ತ್ರಿವೇದಿ (23ಕ್ಕೆ 3), ಕೆವೊನ್ ಕೂಪರ್ (15ಕ್ಕೆ 3) ಮತ್ತು ರಾಹುಲ್ ಶುಕ್ಲಾ (28ಕ್ಕೆ 2) ಸಮರ್ಥ ಬೌಲಿಂಗ್ ಮೂಲಕ ರಾಯಲ್ಸ್ ಗೆಲುವಿಗೆ ಕಾರಣರಾಗಿದ್ದರು.

`ಇಂತಹ ಪಿಚ್‌ನಲ್ಲಿ ಬೌಲ್ ಮಾಡುವುದನ್ನು ನಾನು ಆನಂದಿಸುವೆ. ಚೆಂಡಿಗೆ ಅಲ್ಪ ಬೌನ್ಸ್ ಲಭಿಸುತ್ತಿತ್ತು. ಎಲ್ಲವೂ ನಮ್ಮ ಯೋಜನೆಯಂತೆ ನಡೆಯಿತು. ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆದರೆ ಎದುರಾಳಿಗಳ ಮೇಲೆ ಒತ್ತಡ ಹೇರಬಹುದು ಎಂಬ ವಿಶ್ವಾಸ ನಮಗಿತ್ತು' ಎಂದು ತ್ರಿವೇದಿ ನುಡಿದಿದ್ದಾರೆ.

ಎಯೊನ್ ಮಾರ್ಗನ್ ಮತ್ತು ರಜತ್ ಭಾಟಿಯಾ ಉತ್ತಮ ಜೊತೆಯಾಟದ ಸೂಚನೆ ನೀಡಿದ ಸಂದರ್ಭ ನಮಗೆ ಅಲ್ಪ ಆತಂಕ ಎದುರಾಗಿತ್ತು ಎಂದು ಅವರು ತಿಳಿಸಿದ್ದಾರೆ. ಮಾರ್ಗನ್ 38 ಎಸೆತಗಳಲ್ಲಿ 51 ರನ್ ಪೇರಿಸಿದ್ದರು.

`ನಾವು ಆರಂಭದಿಂದಲೇ ಎದುರಾಳಿಗಳ ಮೇಲೆ ಒತ್ತಡ ಹೇರಿದ್ದೆವು. ಆದರೆ ಮಾರ್ಗನ್ ಅತ್ಯುತ್ತಮವಾಗಿ ಆಡಿದರು. ಅವರು ಭಾಟಿಯಾ (12) ಜೊತೆ ಸೇರಿಕೊಂಡು ಉತ್ತಮವಾಗಿ ಆಡುತ್ತಿದ್ದಾಗ ಅಲ್ಪ ಒತ್ತಡ ಉಂಟಾದದ್ದು ನಿಜ' ಎಂದಿದ್ದಾರೆ.

ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್  ಮತ್ತು ಜಾಕ್ ಕಾಲಿಸ್ ಅಲ್ಪ ಅಂತರದಲ್ಲಿ ಔಟಾದ ಕಾರಣ ನಮ್ಮ ಕೆಲಸ ಸುಲಭವಾಯಿತು ಎಂದು ತ್ರಿವೇದಿ ಅಭಿಪ್ರಾಯಪಟ್ಟರು.

                                                       ಸ್ಕೋರ್ ವಿವರ

ರಾಜಸ್ತಾನ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144
ಕೋಲ್ಕತ್ತ ನೈಟ್ ರೈಡರ್ಸ್: 19 ಓವರ್‌ಗಳಲ್ಲಿ 125
ಮನ್ವಿಂದರ್ ಬಿಸ್ಲಾ ಬಿ ರಾಹುಲ್ ಶುಕ್ಲಾ  01
ಗೌತಮ್ ಗಂಭೀರ್ ಸಿ ಯಾಗ್ನಿಕ್ ಬಿ ಸಿದ್ಧಾರ್ಥ್ ತ್ರಿವೇದಿ 22
ಜಾಕ್ ಕಾಲಿಸ್ ಸಿ ಯಾಗ್ನಿಕ್ ಬಿ ರಾಹುಲ್ ಶುಕ್ಲಾ  00
ಮನೋಜ್ ತಿವಾರಿ ಎಲ್‌ಬಿಡಬ್ಲ್ಯು ಬಿ ತ್ರಿವೇದಿ  14
ಎಯೊನ್ ಮಾರ್ಗನ್ ಬಿ ಕೆವೊನ್ ಕೂಪರ್  51
ಯೂಸುಫ್ ಪಠಾಣ್ ಸಿ ಯಾಗ್ನಿಕ್ ಬಿ ಕೆವೊನ್ ಕೂಪರ್ 00
ಲಕ್ಷ್ಮಿರತನ್ ಶುಕ್ಲಾ ಸಿ ಶುಕ್ಲಾ ಬಿ ಸಿದ್ಧಾರ್ಥ್ ತ್ರಿವೇದಿ  02
ರಜತ್ ಭಾಟಿಯಾ ಸಿ ಬಿನ್ನಿ ಬಿ ಶಾನ್ ಟೇಟ್  12
ಬ್ರೆಟ್ ಲೀ ಸಿ ಶುಕ್ಲಾ ಬಿ ಎಸ್. ಶ್ರೀಶಾಂತ್  05
ಶಮಿ ಅಹ್ಮದ್ ಸಿ ರಹಾನೆ ಬಿ ಕೆವೊನ್ ಕೂಪರ್  05
ಸುನಿಲ್ ನಾರಾಯಣ್ ಔಟಾಗದೆ  02
ಇತರೆ: (ಲೆಗ್‌ಬೈ-5, ವೈಡ್-6)  11
ವಿಕೆಟ್ ಪತನ: 1-19 (ಬಿಸ್ಲಾ; 2.2), 2-20 (ಕಾಲಿಸ್; 2.3), 3-40 (ತಿವಾರಿ; 6.1), 4-43 (ಗಂಭೀರ್; 6.5), 5-44 (ಪಠಾಣ್; 7.3), 6-56 (ಶುಕ್ಲಾ; 10.6), 7-90 (ಭಾಟಿಯಾ; 14.1), 8-103 (ಲೀ; 15.3), 9-122 (ಮಾರ್ಗನ್; 18.1), 10-125 (ಶಮಿ; 18.6)
ಬೌಲಿಂಗ್: ಎಸ್. ಶ್ರೀಶಾಂತ್ 4-0-25-1, ಶಾನ್ ಟೇಟ್ 4-0-29-1, ರಾಹುಲ್ ಶುಕ್ಲಾ 3-0-28-2, ಕೆವೊನ್ ಕೂಪರ್ 4-0-15-3, ಸಿದ್ಧಾರ್ಥ್ ತ್ರಿವೇದಿ 4-0-23-3

ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 19 ರನ್ ಗೆಲುವು
ಪಂದ್ಯಶ್ರೇಷ್ಠ: ಸಿದ್ಧಾರ್ಥ್ ತ್ರಿವೇದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT