ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮವರೆಂಬ ಸಹೃದಯತೆ ಬರಲಿ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಮ್ಮ ನಾಡಿನ ಹಲವಾರು (ದೊಡ್ಡ) ಸಾಹಿತಿಗಳು ಮೈಸೂರಿನ ಆರ್.ಕೆ.ನಾರಾಯಣ್ ಅವರ ಕುರಿತು ಪ್ರದರ್ಶಿಸಿರುವ ಸಣ್ಣತನ ಅತ್ಯಂತ ದುರದೃಷ್ಟಕರ.

ಹೃದಯವಂತಿಕೆಯಿಂದ ಕೂಡಿದ ಒಬ್ಬ ಸಾಹಿತಿ ದೇಶ ಕಾಲಗಳನ್ನು ಮೀರಿ ಮತ್ತೊಬ್ಬ ಸಾಹಿತಿ ಬಗ್ಗೆ ಸಂಕುಚಿತ ಭಾವನೆ ಥಳೆಯುವುದು ಅಪರೂಪವೇ ಎಂದು ರಾಜಕಾರಣದಲ್ಲಿರುವ ನಾನು ನಂಬಿದ್ದೆ.

ನಾರಾಯಣ್ ನನ್ನ ವಿದ್ಯಾರ್ಥಿದೆಸೆಯಿಂದಲೇ ಚಿರಪರಿಚಿತರಾಗಿದ್ದರು. ಮೈಸೂರಿನಲ್ಲಿ ಐದಾರು ದಶಕಗಳ ಬದುಕು ಸಾಗಿಸಿದವರು. ಅಂದಿನ ಆಕಾಶವಾಣಿಯ ಸಿಬ್ಬಂದಿಯೊಡನೆ, ಕನ್ನಡದ ಶಾಸ್ತ್ರೀಯ ಸಂಗೀತಗಾರರೊಡನೆ ನಿಕಟ ಸಂಬಂಧ ಇಟ್ಟುಕೊಂಡಿದ್ದರು.

ಅವರ ಹಾಡಿನ ನೂರಾರು ಮುದ್ರಿಕೆಗಳನ್ನು ನಾರಾಯಣ್ ಸಂಗ್ರಹಿಸಿದ್ದರು. ಅವರ ಅಣ್ಣ ಪಟ್ಟಾಭಿ, ತಮ್ಮ ಶ್ರೀನಿವಾಸನ್ (ಉಪಾಧ್ಯಕ್ಷರಾಗಿದ್ದ ಬಿ.ಡಿ.ಜತ್ತಿಯವರ ಆಪ್ತ ಕಾರ್ಯದರ್ಶಿಯಾಗಿದ್ದರು) ಎಲ್ಲರೂ ಅವರ ಮನೆಯಲ್ಲಿ ನನ್ನೊಡನೆ ಕನ್ನಡದಲ್ಲೇ ಮಾತನಾಡುವ ಪರಿಪಾಠವಿತ್ತು.

ವೈಯಕ್ತಿಕ ಅನುಭವದ ಮತ್ತೊಂದು ಮಾತು: ನಾನು (ಮತ್ತು ಕೆಲವು ವರ್ಷಗಳು ನನ್ನ ಪತ್ನಿ ಲಕ್ಷ್ಮಿ) ಇಂಗ್ಲೆಂಡ್‌ನಲ್ಲಿದ್ದ ವರ್ಷಗಳ ಅವಧಿಯಲ್ಲಿ ನಾರಾಯಣ್ ಅವರು ಭೇಟಿ ಕೊಟ್ಟ ಸಂದರ್ಭಗಳಲ್ಲೆಲ್ಲಾ ನಮ್ಮ ಸಂಭಾಷಣೆ ಕನ್ನಡದಲ್ಲೇ ಇರುತ್ತಿತ್ತು.

ಆರ್.ಕೆ.ನಾರಾಯಣ್ ರವರ ಕಾಲ್ಪನಿಕ `ಮಾಲ್ಗುಡಿ   ಯ~ ಬಹುಭಾಗ ಮೈಸೂರಿನ ಚಾಮರಾಜಪುರಂ ರೈಲ್ವೇ ಸ್ಟೇಷನ್‌ನಿಂದ ಮೂಡಿ ಬಂದಿದ್ದು.ಅವರು ಸಾರ್ವಜನಿಕ ಭಾಷಣ ಮಾಡಬೇಕಾದ ಸನ್ನಿವೇಶಗಳಲ್ಲಿ ದೂರವಿರುತ್ತಿದ್ದರು. ಬಹಳ ಪರಿಚಯವಿದ್ದರೂ ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ವೇದಿಕೆಗೆ ನನ್ನ ಆಹ್ವಾನವನ್ನು ಮನ್ನಿಸಲಿಲ್ಲ.

ಕಡಿಮೆ ಸಂಖ್ಯೆಯ ವ್ಯಕ್ತಿಗಳಿದ್ದ ಸಭೆಗಳಲ್ಲೂ ಭಾಗವಹಿಸಿದ್ದು ಕಡಿಮೆ; ಮಾತೂ ತೀರಾ ಅಪರೂಪ. ಪ್ರೊ.ಸಿ.ಡಿ. ನರಸಿಂಹಯ್ಯ, ಪ್ರೊ. ಎಚ್.ಎಚ್. ಅಣ್ಣಯ್ಯಗೌಡ ಅವರ ಒತ್ತಾಯಕ್ಕೆ ಮಣಿದು ಕಾಮನ್‌ವೆಲ್ತ್ ಸಾಹಿತ್ಯ ಅಧ್ಯಯನ ಕೇಂದ್ರದ ಕೆಲವೇ ಕಮ್ಮಟಗಳಲ್ಲಿ ಭಾಗವಹಿಸಿದ್ದು ನನಗೆ ತಿಳಿದ ವಿಷಯ.

ವಿದೇಶೀ ತಜ್ಞರು ಆಗಮಿಸಿದ್ದ ಒಂದು ಸಭೆಗೆ ಪ್ರೊ.ಅಣ್ಣಯ್ಯಗೌಡ ಅವರ ಒತ್ತಾಯ ಪೂರ್ವಕ ಆಹ್ವಾನಕ್ಕೆ ನಾರಾಯಣ್ ನನಗೆ ಹೇಳಿದ್ದು ` ಏನ್ಸಾರ್, ನನ್ನನ್ನ ಮೈಸೂರು ಅಗರಬತ್ತಿ ತರಹ ಅಲ್ಲಿ ತೋರಿಸ್ತಾರಾ?~ 

ಆರ್.ಕೆ. ನಾರಾಯಣ್, ಅನಿತಾ ದೇಸಾಯಿ, ಸಲ್ಮಾನ್ ರಶ್ದಿ, ನೀರದ್ ಚೌಧುರಿ, ಮುಲ್ಕ್ ರಾಜ್ ಆನಂದ್, ವಿಕ್ರಂ ಸೇಠ್, ನೈಪಾಲ್,ಕನ್ನಡದವರೇ ಆದ ಶಶಿ ದೇಶಪಾಂಡೆ, ಅರವಿಂದ ಅಡಿಗ ಇತ್ಯಾದಿ ಅಸಂಖ್ಯಾತ ಸಾಹಿತಿಗಳು ಇಂಗ್ಲಿಷ್ ಭಾಷೆಯಲ್ಲೆೀ ಶ್ರೇಷ್ಠಮಟ್ಟದ ಕಾದಂಬರಿಗಳನ್ನು ರಚಿಸಿದ್ದಾರೆ.

ಇವರೆಲ್ಲಾ ಭಾರತೀಯ ಸಾಹಿತಿಗಳು. ಶಶಿ ದೇಶಪಾಂಡೆ ಮತ್ತು ಅರವಿಂದ ಅಡಿಗ ಹೊರಗಿನವರೇ?ಸ್ಮಾರಕ ಹಾಗಿರಲಿ, ವಿಶ್ವಮಾನ್ಯತೆ ಪಡೆದ ನಮ್ಮ ಈ ಭಾರತೀಯರನ್ನು ನಮ್ಮ ದೇಶದ ಯಾವುದಾದರೂ ರಾಜ್ಯದಲ್ಲಿ ಇವರು ನಮ್ಮವರು ಎನ್ನುವ ಸಹೃದಯತೆ ಕಂಡು ಬರುವ ಸಾಧ್ಯತೆ ಇರಬಹುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT