ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಬೂತ್ ಸಮಿತಿ ಚುನಾವಣೆ

Last Updated 17 ಸೆಪ್ಟೆಂಬರ್ 2011, 8:55 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹಾಗೂ ಪಕ್ಷದಲ್ಲಿ ಆಂತರಿಕ ಪ್ರಜಾ ಪ್ರಭುತ್ವ ಬೆಳೆಸುವ ರಾಹುಲ್ ಗಾಂಧಿ ಅವರ ಕನಸಿನಂತೆ ಯುವ ಕಾಂಗ್ರೆಸ್‌ನ ಬೂತ್ ಮಟ್ಟದ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾ ಗು ತ್ತಿದೆ ಎಂದು ಯುವ ಕಾಂಗ್ರೆಸ್  ಚುನಾವಣಾಧಿಕಾರಿ ರಾಮ ರಾವ್ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಯುವ ಕಾಂಗ್ರೆಸ್‌ಗೆ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಂದರ್ಭ ಅವರು ಮಾತ ನಾಡಿದರು. ಈ ಚುನಾವಣೆಯಲ್ಲಿ ಆಯ್ಕೆ ಯಾದವರು ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆ ಪದಾಧಿಕಾರಿಗಳನ್ನು ಆಯ್ಕೆ ಮಾಡ ಬಹುದು ಹಾಗೂ ಚುನಾವಣೆಗೂ ಸ್ಪರ್ಧಿಸ ಬಹುದಾಗಿದೆ  ಎಂದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಸುಬ್ಬರಾಜು, ದುರ್ಗರಾಜು, ತಾಲ್ಲೂಕು ಘಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶು ಮಂತ್, ಎಐಸಿಸಿ ಸದಸ್ಯೆ ಬಿ.ಸಿ. ಗೀತಾ, ಅಲ್ಪಸಂಖ್ಯಾತರ ವಿಭಾಗದ ಟಿ.ವಿ.ರಾಜು, ತಾಲ್ಲೂಕು ಕಾಂಗ್ರೆಸ್ ಘಟಕದ ಮಹಿಳಾ ಅಧ್ಯಕ್ಷೆ ಮೀನಾಕ್ಷಿ ಕಾಂತ್‌ರಾಜ್,ಮುಖಂ ಡರಾದ ಕೆ.ಅಬುಬಕರ್, ಬಿ.ಎಸ್.ಸುಬ್ರಹ್ಮಣ್ಯ ಇದ್ದರು. ತಾಲ್ಲೂಕಿನ 45 ಬೂತ್‌ಗಳಿಂದ ತಲಾ ಒಂದು ಬೂತ್‌ನಿಂದ 5ಜನರಂತೆ 84 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು 875 ಸದಸ್ಯರು ಮತದಾನ ಮಾಡಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT