ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳನಳಿಸುವ ಬೆಳೆಗೆ ಪೂಜೆ

Last Updated 12 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ಹೊಳೆಹೊನ್ನೂರು: `ಭೂಮಿ ಹುಣ್ಣಿಮೆ~ ಹಬ್ಬವನ್ನು ಈ ಭಾಗದಲ್ಲಿ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.

ಈ ವರ್ಷ ಸುರಿದ ಮಳೆಯಿಂದಾಗಿ ಭದ್ರಾ ಅಣೆಕಟ್ಟು ತುಂಬಿದ್ದು, ಬತ್ತ, ಅಡಿಕೆ, ತೆಂಗು ಮುಂತಾದ ನೀರಾವರಿ ಬೆಳೆಗಳು ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿವೆ.

ಭೂಮಿಯನ್ನು ಈ ದಿನಗಳಲ್ಲಿ ಗರ್ಭಿಣಿ ಎಂದು ಭಾವಿಸುತ್ತಾ, ಸೀಮಂತ ಮಾಡುವ ಕಾರ್ಯದ ಮೂಲಕ ಸಂಭ್ರಮ ಹಂಚಿಕೊಳ್ಳುವ ಮಹಿಳೆಯರ ಮಾನವೀಯ ಮನೋಭಾವನೆ ಮೆಚ್ಚುವಂತಹದ್ದು. ಭೂಮಿ ತಾಯಿಗೆ ವಿವಿಧ ರೀತಿಯ ಅಲಂಕಾರ ಮಾಡಿ, ಸವಿಯಾದ ಅಡುಗೆ ಮಾಡಿ ಚರಗವನ್ನು ಭೂತಾಯಿಗೆ ಅರ್ಪಿಸುವ  ಮೂಲಕ ಕುಟುಂಬ ಸಮೇತ ಸಾಮೂಹಿಕ ಬೋಜನ ಮಾಡಿ ಬಯಕೆ ತೀರಿಸುವ ಪಾರಂಪರಿಕ ಆಚರಣೆಯನ್ನು ಈ ಭಾಗದ ಜನ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT