ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶುಗಳ ಮಾರಾಟ ಪತ್ತೆ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಹೆಣ್ಣು ಶಿಶುಗಳನ್ನು ತಂದೆಯೇ ಬೇರೆಯವರಿಗೆ ನೀಡಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ತಾಲ್ಲೂಕಿನ ನಾಗೇನಹಳ್ಳಿ ತಾಂಡಾದ ನಾಗಮಣಿ ಹಾಗೂ ಗಂಗಾಧರ ನಾಯ್ಕ ದಂಪತಿಗೆ ಈಗಾಗಲೇ ನಾಲ್ಕು ಹೆಣ್ಣು ಮಕ್ಕಳಿದ್ದು, ನ. 27ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು.

ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುವ ಬಾಬು ಹಾಗೂ ಶಿಶುವಿನ ತಂದೆ ಗಂಗಾಧರ ಸೇರಿಕೊಂಡು ಒಂದು ಹೆಣ್ಣು ಮಗು­ವನ್ನು ಹಿಂದೂಪುರದ ಗಂಗರಾಜು ಎಂಬುವರಿಗೆ ನ. 28ರಂದು ರಾತ್ರಿ ನೀಡಿದ್ದಾರೆ. ಮತ್ತೊಂದು ಮಗು­ವನ್ನು ನ.30ರಂದು ತಾಲ್ಲೂಕಿನ ಕಿಲಾರ್ಲಹಳ್ಳಿ ಗ್ರಾಮದ ಆಂಜನೇಯ­­ನಾಯ್ಕ ಎಂಬುವರಿಗೆ ನೀಡಿ­ದ್ದಾರೆ. ಮಕ್ಕಳನ್ನು ಹಣಕ್ಕೆ ಮಾರಾಟ ಮಾಡ­ಲಾ­ಗಿದೆ ಎಂದು ಮೂಲಗಳು ತಿಳಿಸಿವೆ.

ಮಕ್ಕಳನ್ನು ಕಾನೂನು ಬಾಹಿರವಾಗಿ ಬೇರೆಯ­ವರಿಗೆ ನೀಡಿರುವ ವಿಚಾರ ತಿಳಿದ ಶಿಶು ಅಭಿವೃದ್ಧಿ ಯೋಜನಾ­ಧಿಕಾರಿ ಉಷಾ ಅವರು ತಿರುಮಣಿ ಪೊಲೀಸರ ಸಹಾಯದೊಂದಿಗೆ ಹಿಂದೂಪುರ, ತುಮ­ಕೂರಿ­ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ವಶಕ್ಕೆ ತೆಗೆದು­ಕೊಂಡಿ­ದ್ದಾರೆ. ಮಕ್ಕಳನ್ನು ಗುರುವಾರ ಮಕ್ಕಳ ಕಲ್ಯಾಣ ಸಮಿತಿ­ಗೆ ಒಪ್ಪಿಸಲಾಯಿತು. ಗಂಗಾಧರ, ಮಗುವನ್ನು ಅನ್ಯರಿಗೆ ನೀಡಲು ಸಹಕರಿಸಿದ ಸರ್ಕಾರಿ ಆಸ್ಪತ್ರೆಯ ಸ್ವೀಪರ್ ಬಾಬು ಅವರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT