ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೀಪನ ಸಿನಿಯಾನ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಬಾದ್‌ಶಾ' ಸಿನಿಮಾದಲ್ಲಿ ನಟಿಸಿದ್ದ ತೆಲುಗು ನಟ ನವ್‌ದೀಪ್ ಪಲ್ಲಪೋಲು ಕೈಲೀಗ ಬರೋಬ್ಬರಿ ಆರು ಚಿತ್ರಗಳಿವೆಯಂತೆ.

`ಚಂದಮಾಮ', `ಆರ್ಯ 2' ಚಿತ್ರಗಳು ನವದೀಪ್ ಚಿತ್ರಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದವು. ಅಲ್ಲಿಂದ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ನವದೀಪ್‌ಗೆ ಈಗ ಒಂದರ ಹಿಂದೆ ಒಂದರಂತೆ ಅವಕಾಶಗಳು ಬರುತ್ತಿವೆ. ಈಗ ಅವರು ನಟಿಸಿರುವ ಮೂರು ಚಿತ್ರಗಳು ಬಿಡುಗಡೆಗೆ ಕಾಯುತ್ತಿದ್ದರೆ, ಇನ್ನು ಮೂರು ಚಿತ್ರಗಳು ಪ್ರಾರಂಭದ ಹಂತದಲ್ಲಿವೆ.
 
“ನನ್ನ ಕೈಯಲ್ಲೆಗ ಆರು ಚಿತ್ರಗಳಿವೆ. `ವಸೂಲ್‌ರಾಜಾ', ಬಂಗಾರುಕೋಡಿಪೆಟ್ಟಾ' ಮತ್ತು `ಪೋಗಾ' ಚಿತ್ರಗಳು ಇನ್ನೇನು ತೆರೆಕಾಣಲಿವೆ. ಇನ್ನು ಮೂರು ಚಿತ್ರಗಳ ಚಿತ್ರೀಕರಣ ಈ ತಿಂಗಳ ಅಂತ್ಯದಿಂದ ಶುರುವಾಗಲಿದೆ. ಚಿತ್ರ ನಿರ್ಮಾಪಕರು ನನ್ನ ಮೇಲಿಟ್ಟಿರುವ ನಂಬಿಕೆಗೆ ಚಿರ ಋಣಿ” ಎಂದು ನವದೀಪ್ ಟ್ವಿಟ್ ಮಾಡಿದ್ದಾರೆ.

ಅಂದಹಾಗೆ, ಜೂನಿಯರ್ ಎನ್‌ಟಿಆರ್ ಅಭಿನಯದ `ಬಾದ್‌ಶಾ' ಚಿತ್ರದಲ್ಲಿ ನವ್‌ದೀಪ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಖಳ ಛಾಯೆಯುಳ್ಳ ಪಾತ್ರವೊಂದರಲ್ಲಿ ನವದೀಪ್ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಂತೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT