ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವಕ್ಕೆ ಸಂಭ್ರಮದ ಸಮಾಪನ

Last Updated 8 ಅಕ್ಟೋಬರ್ 2011, 10:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಆರಂಭಗೊಂಡಿದ್ದ ನವರಾತ್ರಿ ಉತ್ಸವಕ್ಕೆ ಗುರುವಾರ ತೆರೆಬಿದ್ದಿದೆ. ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ವಿಗ್ರಹಗಳ ಮೆರವಣಿಗೆ ಗುರುವಾರ ರಾತ್ರಿ ನಡೆದಿದೆ.

ಬಾಳೆಹೊನ್ನೂರು: ಮೃತ್ಯುಂಬಿಕ ಉತ್ಸವ
ಬಾಳೆಹೊನ್ನೂರು:
ಇಲ್ಲಿನ ಮೃತ್ಯುಂಬಿಕ ಹಾಗೂ ಮಾರಿಕಾಂಬ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ, ಪಟ್ಟಣದಲ್ಲಿ ಮೃತ್ಯುಂಬಿಕ ದೇವಿ ಹಾಗೂ ಮಾರಿಕಾಂಬ ಉತ್ಸವ ಗುರುವಾರ ವಿಜೃಂಭಣೆ ನಡೆಯಿತು.

ದೇವಿ ವಿಗ್ರಹವನ್ನು ಪಲ್ಲಕ್ಕಿಯಲ್ಲಿಟ್ಟು ಉತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಭದ್ರಾನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಲಾಯಿತು. ನಂತರ ವಿಜಯೋತ್ಸವ ಮೆರವಣಿಗೆ ನಡೆಯಿತು. ಬಳಿಕ ದೇವಸ್ಥಾನದ ಆವರಣದ ಬನ್ನಿ ಮಂಟಪದಲ್ಲಿ ಬನ್ನಿ ಪೂಜೆ ನಡೆಯುವುದ ರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.

ಅಲಗೇಶ್ವರ: ನವರಾತ್ರಿ ಸಂಭ್ರಮ
ಕೊಪ್ಪ:
ತಾಲ್ಲೂಕು ಅಲಗೇಶ್ವರ ಎಸ್ಟೇಟಿನ ಚಾಮುಂಡೇಶ್ವರಿ ದೇವಿ ದೇಗುಲದಲ್ಲಿ ನವರಾತ್ರಿ ಉತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೇವಸ್ಥಾನವನ್ನು ವಿದ್ಯುತ್ ದೀಪ ಹಾಗೂ ಹಣತೆಗಳನ್ನು ಬೆಳಗಿಸಿ ಅಲಂಕೃತಗೊಳಿಸಲಾಗಿತ್ತು. ದಿನಂಪ್ರತಿ ದೇವಿಗೆ ವಿವಿಧ ಅಲಂಕಾರಗಳಿಂದ ಶೃಂಗರಿಸಲಾಗಿತ್ತು. ಭಕ್ತಾಧಿಗಳಿಂದ ದಿನಂಪ್ರತಿ ಪೂಜೆ, ಧಾರ್ಮಿಕ ವಿಧಿವಿಧಾನ ನಡೆದವು. 

 ಇದೇ ವೇಳೆ ತೋಟದ ಆಸ್ಪತ್ರೆಯಲ್ಲಿ ಔಷಧಿ ತಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀರಾಮ್ ಅವರನ್ನು ಸನ್ಮಾನಿಸಲಾಯಿತು. ತೋಟದ ವ್ಯವಸ್ಥಾಪಕ ಸುಧಾಕತಶೆಟ್ಟಿ, ಎಸ್.ಭಾಸ್ಕರ್, ಸತ್ಯನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT