ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಣ ಸರಳೀಕರಣಕ್ಕೆ ಆಗ್ರಹ

Last Updated 2 ಜುಲೈ 2013, 5:56 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕಿನ ನಾಗರಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಕಾರ್ಡ್‌ಗಳ ನವೀಕರಣ ಪದ್ಧತಿ ಸರಳೀಕರಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಲಿಂಗಸುಗೂರಿನಲ್ಲಿ ಸೋಮವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು.

ಪಡಿತರ ಕಾರ್ಡ್ ನವೀಕರಣಕ್ಕೆ ವಿದ್ಯುತ್ ಸಂಪರ್ಕದ ಆರ್.ಆರ್. ನಂಬರ ಕೇಳುತ್ತಿದ್ದು, ಗುಡಿಸಲು ಹಾಗೂ ಭಾಗ್ಯಜ್ಯೋತಿ ಫಲಾನುಭವಿಗಳಿಗೆ ಮೀಟರ್ ಆರ್‌ಆರ್ ನಂಬರ ನೀಡಿಲ್ಲ. ಕೆಲ ಮನೆಗೆ ಜೆಸ್ಕಾಂ ಆರ್.ಆರ್. ನಂಬರ ನೀಡದೆ ಹೋಗಿರುವುದು ಪಡಿತರ ಕಾರ್ಡ್ ಸಿಗದೇ ವಂಚಿತರಾಗುವಂಥ ಸ್ಥಿತಿ ಬಂದಿದೆ ಎಂದು ತಹಸೀಲ್ದಾರ ಮಹಾಜನ ಅವರಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ಕೆ.ಎಸ್. ಶಿವಾನಂದ, ಹನುಮಂತ ಕಾರಲಕುಂಟಿ, ಗುರುಪಾದಪ್ಪ ನಾಯಿಕೊಡಿ, ಪರಶುರಾಮ ಹಲ್ಕಾವಟಗಿ, ಬಸಮ್ಮ, ಅಮರೇಶ, ಹುಲಿಗೆಮ್ಮ, ಪಾರ್ವತಿ, ಈರಮ್ಮ, ಮಲ್ಲಮ್ಮ, ದುರುಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT