ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ಕನ್ನಂಗಾರ್ ಮಸೀದಿ ಉದ್ಘಾಟನೆ 7ಕ್ಕೆ

Last Updated 1 ಏಪ್ರಿಲ್ 2011, 8:35 IST
ಅಕ್ಷರ ಗಾತ್ರ

ಪಡುಬಿದ್ರಿ: ಪುನರ್‌ನಿರ್ಮಿತ ಕನ್ನಂಗಾರ್ ಜುಮ್ಮಾ ಮಸೀದಿ ಕಟ್ಟಡದ ಉದ್ಘಾಟನೆ ಇದೇ 7ರಂದು ನಡೆಯಲಿದೆ. ಪಡುಬಿದ್ರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಸೀದಿ ಸಮಿತಿ ಅಧ್ಯಕ್ಷ ಎಚ್.ಬಿ.ಮುಹಮದ್ ಮಾಹಿತಿ ನೀಡಿ, ಅವಿಭಜಿತ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಹಾಗೂ ವಿನ್ಯಾಸವುಳ್ಳ ಮಸೀದಿ ಸುಮಾರು ರೂ 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಮಸೀದಿಯ ಎದುರು ರಷ್ಯಾ ಶೈಲಿಯಲ್ಲಿ ದರ್ಗಾ ನಿರ್ಮಿಸಲಾಗಿದೆ ಎಂದರು. 

ಮಸೀದಿಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ನಮಾಜು ಮಾಡಲು ಸ್ಥಳಾವಕಾಶ ಇದೆ. 750 ವರ್ಷಗಳ ಇತಿಹಾಸವುಳ್ಳ ಮಸೀದಿ ಇದಾಗಿದೆ. ಈ ಜಮಾಅತ್‌ನಲ್ಲಿ 750 ಕುಟುಂಬಗಳು ಇವೆ. ಈ ಜಮಾಅತ್ ಅಧೀನದಲ್ಲಿ 7 ಮದ್ರಸಗಳು ಇವೆ ಎಂದರು. ಭರವಸೆ ಮಾತ್ರ: ಆರು ವರ್ಷಗಳಲ್ಲಿ ರೂ 2.5 ಕೋಟಿ ವೆಚ್ಚದಲ್ಲಿ ಊರ ಪರವೂರ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಮಸೀದಿ ನಿರ್ಮಿಸಲಾಗಿದೆ. ಈ ಮೊದಲು ಮಸೀದಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೂ 10 ಲಕ್ಷ  ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ಮಾಜಿ ಸಚಿವ ಜಮೀರ್ ಕೂಡಾ ಭೇಟಿ ನೀಡಿ ರೂ 10 ಲಕ್ಷ ನೀಡುವ ಭರವಸೆ ನೀಡಿದ್ದರು. ಹಣ ಬಂದಿಲ್ಲ ಎಂದು ದೂರಿದರು.

7ರಂದು ಬೆಳಿಗ್ಗೆ 11ಕ್ಕೆ ಪುನರ್‌ನಿರ್ಮಿತ ಮಸೀದಿ ಉದ್ಘಾಟಿಸಲಾಗುವುದು.  8ರಿಂದ 16ವರೆಗೆ ಉರುಸ್: ಉರುಸ್ ಸಮಾರಂಭ ಇದೇ 8ರಿಂದ 16ರವರೆಗೆ ನಡೆಯಲಿದೆ ಎಂದು ಉರುಸ್ ಸಮಿತಿ ಅಧ್ಯಕ್ಷ ಕೆ.ಎಚ್.ಅಬೂಬಕ್ಕರ್ ತಿಳಿಸಿದರು. ಮಸೀದಿ ಸಮಿತಿ ಕಾರ್ಯದರ್ಶಿ ಅಬ್ದುಲ್ ಅಝೀಜ್ ಹೆಜ್ಮಾಡಿ, ಉರುಸ್ ಸಮಿತಿ ಕಾರ್ಯದರ್ಶಿ ಫಕ್ರುದ್ದೀನ್, ಮಸೀದಿ ಸಮಿತಿಯ ಅಬ್ದುಲ್ ಹಮೀದ್, ಟಿ.ಎಂ.ಬಾವ, ಬಿ.ಕೆ.ಮೊಹಮದ್, ಇಬ್ರಾಹಿಮ್ ಖಲೀಲ್, ಕರೀಂ ಬಾವ, ಹನೀಫ್ ಹಾಜಿ, ಮುಹಮದ್, ಮುಹಮದ್ ಹನೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT