ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ಝೈಲೊ ರಾಜ್ಯದ ಮಾರುಕಟ್ಟೆಗೆ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ ಅಂಡ್ ಮಹೀಂದ್ರಾ ಬಹು ನಿರೀಕ್ಷಿತ  ಮಹೀಂದ್ರಾ ಝೈಲೊದ (ಎಂಯುವಿ)  ನವೀಕೃತ ಮಾದರಿಯನ್ನು ರಾಜ್ಯದ ಮಾರುಕಟ್ಟೆಗೆ  ಬಿಡುಗಡೆ ಮಾಡಿತು.

ಈ ನವೀಕೃತ ಮಾದರಿಯಲ್ಲಿ ಒಟ್ಟು 50 ಹೊಸ ಬದಲಾವಣೆ ಅಳವಡಿಸಲಾಗಿದೆ.  ದೀಪ ಬೆಳಗಿಸುವ, ಆರಿಸುವ, ಬಾಗಿಲು ಲಾಕ್ ಮಾಡುವುದು, ತೆಗೆಯುವುದಕ್ಕೆ ಧ್ವನಿ ಆಧಾರಿತ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ.  

ಹೊಸ ಬಾಹ್ಯ ನೋಟ ಮತ್ತು ಒಳಾಂಗಣ ವಿನ್ಯಾಸ ಹೊಂದಿರುವ ವಾಹನವನ್ನು ಗ್ರಾಹಕರ ಅಗತ್ಯಗಳನ್ನು ಆಧರಿಸಿ ಅಳವಡಿಸಲಾಗಿದೆ.

ಸಾಕಷ್ಟು ಸ್ಥಳಾವಕಾಶ, ಆರಾಮದಾಯಕ ಅನುಕೂಲಗಳಿಗೆ   ಒತ್ತು ನೀಡಲಾಗಿದೆ.  ಹೊಸ ನವೀಕೃತ ವಾಹನವು ಐದು ಮಾದರಿಗಳಲ್ಲಿ ಮತ್ತು 6 ಬಣ್ಣಗಳಲ್ಲಿ ಲಭ್ಯವಿದೆ. ಆರಂಭಿಕ ಮಾದರಿಯ ಎಕ್ಸ್‌ಷೋರೂಂ ಬೆಲೆ ್ಙ 7.37 ಲಕ್ಷ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT