ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ವೆಂಕಟರಮಣ ದೇವಸ್ಥಾನ ಉದ್ಘಾಟನೆ ಇಂದು

Last Updated 8 ಜೂನ್ 2011, 7:05 IST
ಅಕ್ಷರ ಗಾತ್ರ

ಕೆರೂರ: ಪಟ್ಟಣದ ಹಳೆಪೇಟೆ ಬಡಾವಣೆಯಲ್ಲಿರುವ ಸುಮಾರು 300 ವರ್ಷಗಳ ಇತಿಹಾಸದ ವೆಂಕಟರಮಣ ದೇವಾಲಯದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಜೂನ್ 8ರಂದು ನಡೆಸಲಾಗುತ್ತಿದೆ.

ಪಟ್ಟಣದ ಈರಣ್ಣ ಪತ್ತಾರ ಅವರ ಮನೆಯಿಂದ ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭಮೇಳದೊಂದಿಗೆ ಲಕ್ಷ್ಮೀದೇವಿಯ ಮೂರ್ತಿಯನ್ನು ದೇವಸ್ಥಾನಕ್ಕೆ ತರುವರು. ನಂತರ ಧಾರ್ಮಿಕ ವಿಧಿವಿಧಾನದಂತೆ ಪೂಜೆ, ಅಭಿಷೇಕ ಹಾಗೂ ಇನ್ನಿತರ ಕಾರ್ಯಕ್ರಮ ಜರುಗುವವು.

9ರಂದು ವೆಂಕಟರಮಣ ದೇವಾಲಯದಲ್ಲಿ ಕ್ಷೀರಾಭಿಷೇಕ, ಹೋಮ, ಹವನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 10ರಂದು ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆನಂದಾಚಾರ್ಯ ಪಂಢರೀ ಅವರ ಸಮ್ಮುಖದಲ್ಲಿ ಲಕ್ಷ್ಮೀದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆ, ಗಣಹೋಮ, ಭಜನೆ, ಸಂಕೀರ್ತನೆ, ಮಹಾಪ್ರಸಾದ ನಡೆಯುತ್ತದೆ.

ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಮಲ್ಲಪ್ಪಜ್ಜ ಘಟ್ಟದ, ಬಿ.ಬಿ. ನಿಲುಗಲ್, ಎಚ್.ಜಿ. ಘಟ್ಟದ, ಆರ್.ಎನ್. ಶೆಟ್ಟರ, ನಾರಾಯಣ ದೇಸಾಯಿ, ರಾಮಕೃಷ್ಣ ಕಂದಕೂರ, ಶಿವಪುತ್ರಪ್ಪ ಯಂಡಿಗೇರಿ, ಎಂ.ವಿ. ಸಾಲಿಮಠ, ಡಿ.ಪಿ. ಅಮಲಝರಿ ಅವರ ಸಹಕಾರದಿಂದ ದೇವಸ್ಥಾನ ಕಾಮಗಾರಿ ಪೂರ್ಣಗೊಳ್ಳಲು ಸಹಾಯಕವಾಗಿದೆ.

ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರು ಒಂದು ಲಕ್ಷ ರೂಪಾಯಿ ಅನುದಾನ ನೀಡಿದ್ದು, ದೇಗುಲದ ಸೌಂದರ್ಯ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ವಿಠ್ಠಲರಾವ್ ನಾನಾವಟೆ ತಿಳಿಸಿದರು.
ವೆಂಕಟರಮಣನ ಪ್ರತಿಷ್ಠಾಪನೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಲ್ಲದೆ ಸುತ್ತಲಿನ ಜಿಲ್ಲೆಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT