ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ ನಾಳೆಯಿಂದ

Last Updated 10 ಏಪ್ರಿಲ್ 2013, 5:57 IST
ಅಕ್ಷರ ಗಾತ್ರ

ಮೈಸೂರು: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಯ 9ನೇ ವಾರ್ಷಿಕೋತ್ಸವ ಅಂಗವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಪಾಠಶಾಲೆ ಆವರಣದ ಸಿಹಿಕನಸು ರಂಗಮಂದಿರದಲ್ಲಿ `ನಾಗತಿಹಳ್ಳಿ ಸಂಸ್ಕೃತಿ ಹಬ್ಬ-2013' ಕಾರ್ಯಕ್ರಮವನ್ನು ಏ.11ರಿಂದ ಏ.14ರವರೆಗೆ ಆಯೋಜಿಸಲಾಗಿದೆ.

ಏ.11ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಅವರು ನೂರು ಪುಸ್ತಕಗಳನ್ನು `ನಮ್ಮ ಗ್ರಂಥಾಲಯ'ಕ್ಕೆ ಉಚಿತವಾಗಿ ನೀಡಲಿದ್ದಾರೆ. ಗ್ರಾಮಸ್ಥರ ಪರವಾಗಿ ಪುಸ್ತಕಗಳನ್ನು `ಪುಸ್ತಕಮನೆ' ಖ್ಯಾತಿಯ ಹರಿಹರಪ್ರಿಯ ಅವರು ಸ್ವೀಕರಿಸಲಿದ್ದಾರೆ. ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಕೆ.ಆರ್.ರಾಮಕೃಷ್ಣ ಮತ್ತು ಪ್ರೊ.ಎಂ.ಕೃಷ್ಣೇಗೌಡ ಆಗಮಿಸಲಿದ್ದಾರೆ. ರಾತ್ರಿ 8 ಗಂಟೆಗೆ ಜಿ.ಎಸ್.ನವೀನ್ ರಚನೆ ಮತ್ತು ನಿರ್ದೇಶನದ `ಉದ್ಭವ ಮೂರ್ತಿ' ನಾಟಕವನ್ನು ನಾಗತಿಹಳ್ಳಿ ಪ್ರಾಥಮಿಕ ಶಾಲೆಯ ಅಭಿವ್ಯಕ್ತಿ ಕಿರಿಯರ ಕಲಾಸಂಘದ ಮಕ್ಕಳು ಅಭಿನಯಿಸ ಲಿದ್ದಾರೆ.

ಏ.12ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕರ್ನಾಟಕದ ವಿವಿಧ ಜನಪದ ಕಲಾಪ್ರಕಾರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಆದರ್ಶ ರೈತ ಮಹಿಳೆ ಲಕ್ಷ್ಮೀದೇವಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳ ಲಿದ್ದಾರೆ. ಸಂಜೆ 5 ಗಂಟೆಯ ಕಾರ್ಯಕ್ರಮಕ್ಕೆ ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, ಜಾನಪದ ಲೋಕದ ಅಧ್ಯಕ್ಷ ಟಿ. ತಿಮ್ಮೇಗೌಡ, ಸಾಮಾಜಿಕ ಭದ್ರತೆ ನಿರ್ದೇಶಕ ಡಾ.ಮನು ಬಳಿಗಾರ ಭಾಗವಹಿಸ ಲಿದ್ದಾರೆ.

ಸಂಜೆ 7 ಗಂಟೆಗೆ ಪುತ್ತೂರು ನರಸಿಂಹ ನಾಯಕ್ ತಂಡದಿಂದ ಕನ್ನಡ ಗೀತೆಗಳ ಗಾಯನ ನಡೆಯಲಿದೆ. ರಾತ್ರಿ 8 ಗಂಟೆಗೆ ಬಿ.ಜಿ.ರಾಮಕೃಷ್ಣ ನಿರ್ದೇಶನದ `ಮಳೆ ಮಾಂತ್ರಿಕ' ನಾಟಕವನ್ನು ರಂಗನಿರಂತರ ತಂಡ ಅಭಿನಯಿಸಲಿದೆ. ಏ.13ರ ಶನಿವಾರ ನೇತ್ರ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಸಂಜೆ 5 ಗಂಟೆಯ ಕಾರ್ಯಕ್ರಮಕ್ಕೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮತ್ತು ಸಾಹಿತಿ ಕುಂ.ವೀರಭದ್ರಪ್ಪ ಆಗಮಿ ಸಲಿದ್ದಾರೆ. ರಾತ್ರಿ 8 ಗಂಟೆಗೆ ಮಂಡ್ಯ ರಮೇಶ್ ನಿರ್ದೇಶನದ `ರತ್ನಪಕ್ಸಿ' ನಾಟಕವನ್ನು ಮೈಸೂರಿನ ನಟನ ತಂಡ ಅಭಿನಯಿಸಲಿದೆ.

ಏ.14ರ ಭಾನುವಾರ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಸರಳ ವಿವಾಹ ಕಾರ್ಯಕ್ರಮ ಏರ್ಪಡಿಸ ಲಾಗಿದ್ದು, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅವರು ಕುವೆಂಪು ಅವರ ಮಂತ್ರಮಾಂಗಲ್ಯವನ್ನು ಬೋಧಿಸ ಲಿದ್ದಾರೆ. ಅತಿಥಿಗಳಾಗಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಲೇಖಕರಾದ ಡಾ.ಮೊಗಳ್ಳಿ ಗಣೇಶ್, ಬಿ.ಚಂದ್ರೇಗೌಡ ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಚಂದ್ರಶೇಖರ ಕಂಬಾರ ವಿರಚಿತ `ಶಿವರಾತ್ರಿ' ನಾಟಕವನ್ನು ಪ್ರಯೋಗರಂಗ ತಂಡದವರು ಅಭಿನಯಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT