ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಪಂಚಮಿಗೆ ಭರದ ಸಿದ್ಧತೆ

Last Updated 22 ಜುಲೈ 2012, 4:25 IST
ಅಕ್ಷರ ಗಾತ್ರ

ಹುಮನಾಬಾದ್:  ನಾಗಪಂಚಮಿ ಹಬ್ಬದ ಸಂಬಂಧ ಹುಮನಾಬಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ.

ತಮ್ಮ  ಅಚ್ಚುಮೆಚ್ಚಿನ ಹಬ್ಬವಾದ ನಾಗಪಂಚಮಿ ಪ್ರಯುಕ್ತ ಪುಟ್ಟ ಬಾಲಕಿಯರಿಂದ ಹಿಡಿದು ಮಧ್ಯ ವಯಸ್ಸಿನ ಎಲ್ಲರೂ ಹಬ್ಬದಂದು ಧರಿಸುವ ಆಕರ್ಷಕ ಸಿದ್ಧ ಉಡುಪು, ಅಲಂಕಾರಕ್ಕೆ ಬೇಕಾಗುವ ಮೆಹೆಂದಿ, ಬಳೆ, ಕಿವಿ ಓಲೆ, ಪಾದರಕ್ಷೆ  ಮೊದಲಾದ ಸಾಮಗ್ರಿಗಳ ಲೆಟೆಸ್ಟ್ ಮಾಡಲ್‌ಗಳು ಯಾರ ಅಂಗಡಿಯಲ್ಲಿ ಸಿಗುತ್ತವೆ ? ಇದು ಯಾರ ಅಂಗಡಿಯಲ್ಲಿ ತೆಗೆದುಕೊಂಡೆ ? ಭಾಳ್ ಚೆನ್ನಾಗಿದೆ. ಆ ಅಂಗಡಿಯಲ್ಲಿ ಇನ್ನೂ ಆ ಐಟಂ ಇವೆಯಾ ?
ಎಂಬ ಬಗ್ಗೆ ಮನೆಯಲ್ಲೇ ತಿಳಿದುಕೊಂಡು ಗೆಳತಿಯರ ಬಳಗದ ಜೊತೆಗೆ ಹೊಸದಾಗಿ ತೆರೆದುಕೊಂಡ ಲೇಡಿಸ್ ಫ್ಯಾಶನ್ ಸ್ಟೋರ್ಸ್‌ಗಳಿಗೆ ಮುಗಿ ಬೀಳುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

ಪಟ್ಟಣದ ಹಿಡುಗಿಯರು ಪ್ರತಿಷ್ಟೆಗಾಗಿ ಭಾರೀ ಶೋರೋಂಗಳಿಗೆ ತೆರಳಿದರೇ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದ ಹಳ್ಳಿ ಹುಡುಗಿಯರು ಫೂಟ್‌ಪಾಟ್ ಮೇಲಿನ ಲೇಡಿಸ್ ಫ್ಯಾಶನ್ ಅಂಗಡಿಗಳಲ್ಲಿ ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ.

ಚಿಣ್ಣರು, ಯುವತಿಯರು ಕೆಲಸ ಮೇಲಿನದಾದರೇ ಮಧ್ಯ ವಯಸ್ಸಿನವರು ವೃದ್ಧರು ನಾಗಪಂಚಮಿ ಹಬ್ಬದಂದು ಪೂಜೆಗೆ ಬೇಕಾಗುವ ಜೋಳದ ಅಳ್ಳು ಮತ್ತು ಕಡಲೆ ಹುರಿಸುವುದು, ಅಳ್ಳಿಟ್ಟು ಸಿದ್ಧಪಡಿಸುವುದು, ಹತ್ತಿಯಿಂದ ಬತ್ತಿ ಸಿದ್ಧಪಡಿಸುವುದು, ನಾಗಪ್ರತಿಮೆ ಖರೀದಿಸುವುದು, ಪೂಜೆಗೆ ಬೇಕಾಗುವ ಹೊಸ ಕೊಪ್ಪಸ ಖರೀದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇನ್ನೂ ಪಂಚಮಿ ದಿನ ಚಿಣ್ಣರು ಜೋಕಾಲಿ ಕಟ್ಟುವಂತೆ ತಮ್ಮಂದಿಗೆ ಕಿರಿಕಿರಿ ಮಾಡುವುದನ್ನು ತಿಳಿದು ಮುಂಚಿತವಾಗಿಯೇ ಜೋಕಾಲಿ ಕಟ್ಟುವುದಕ್ಕಾಗಿ ಹಗ್ಗ ಖರೀದಿ ಮೊದಲಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇನ್ನೂ ಕೆಲವರು ಬೇರೆ ಊರುಗಳಲ್ಲಿ ಇರುವ ತಮ್ಮ ಅಕ್ಕ ತಂಗಿಯರನ್ನು ಕರೆದುಕೊಂಡು ಬರುವ, ಮತ್ತು ಇಲ್ಲಿಂದ ಬೇರೆ ಊರಿಗೆ ಕಳಿಸುವ ಕೆಲಸದಲ್ಲಿ ತೊಡಗಿರುವುದು ಇನ್ನೂ ಹಲವೆಡೆ ದೂರದ ಊರಲ್ಲಿ ಇರುವವರು ಮತ್ತು ದೂರದ ಸಂಬಂಧಿಗಳಿಗೆ ಕುಪ್ಪಸ ಕಳಿಸುವಲ್ಲಿ ನಿರತರಾಗಿದ್ದಾರೆ.

ಇನ್ನೂ ಹಬ್ಬದಂದು ಪೂಜೆ ಇರುವ ಸಂಬಂಧ ಪಟ್ಟಣದ ಶಿವಪೂರ, ಹಣಕುಣಿ ಬೇಸ್, ಚಿದ್ರಿ ಪೆಟ್ರೊಲ್ ಬಂಕ್, ರಥ ಮೈದಾನ, ಪುಠಾಣಿ ಗಲ್ಲಿ, ನಗರೇಶ್ವರ ದೇವಸ್ಥಾನ, ಹತ್ತಿ ಕಟ್ಟೆ ಮೊದಲಾದ ಕಡೆ ಸ್ಥಾಪಿಸಲ್ಪಟ್ಟ ನಾಗ ದೇವಾಲಯಗಳನ್ನು ಅಲಂಕರಿಸುವ ಕಾರ‌್ಯದಲ್ಲಿ ನಿರತರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT