ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕ ಸನ್ನದು ಕಡ್ಡಾಯ

Last Updated 18 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮಾ. 1ರಿಂದ ‘ನಾಗರಿಕ ಸನ್ನದು’ ಪ್ರದರ್ಶಿಸುವುದು ಕಡ್ಡಾಯ. ಈ ಸಂಬಂಧ ಸುತ್ತೋಲೆ ಹೊರಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಹೇಳಿದರು.

ನಗರದ ವೆನ್ಲಾಕ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, 2007ರ ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ ಕಾನೂನು ಪ್ರಕಾರ ನಾಗರಿಕ ಸನ್ನದು ಪ್ರದರ್ಶನ ಕಡ್ಡಾಯ. ಆಸ್ಪತ್ರೆಯಲ್ಲಿನ ಚಿಕಿತ್ಸೆ, ಸೌಲಭ್ಯ ಲಭ್ಯತೆ, ವಿವಿಧ ಪರೀಕ್ಷೆಗಳಿಗೆ ಶುಲ್ಕ ಸಹಿತ ಎಲ್ಲ ವಿವರಗಳ ಪಟ್ಟಿಯನ್ನೂ ಜನರಿಗೆ ಕಾಣುವಂತೆ ಪ್ರದರ್ಶಿಸಬೇಕು. ಇದನ್ನು ಪಾಲಿಸದ ಸಂಸ್ಥೆಗಳಿಗೆ ಆರು ತಿಂಗಳ ಸಜೆ ಮತ್ತು ದಂಡ ವಿಧಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡಲು ಸರ್ಕಾರಿ ವೈದ್ಯರೂ ಇರುತ್ತಾರೆ. ಅಂಥ ಆಸ್ಪತ್ರೆಗಳು ಅಲ್ಲಿ ಬರುವ ಸರ್ಕಾರಿ ವೈದ್ಯರ ವಿವರ ಪ್ರದರ್ಶಿಸಬೇಕು ಎಂದರು.
ಇಂದು ವರದಿ: ಸ್ನಾತಕೋತ್ತರ ವೈದ್ಯ ಮತ್ತು ಬಿಡಿಎ ತರಗತಿಗಳ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ನಡೆದ ಅವ್ಯಹಾರಕ್ಕೆ ಸಂಬಂಧಿಸಿ ಮೂವರು ಸದಸ್ಯರ ವಿಚಾರಣಾ ಸಮಿತಿಯ ವರದಿ ಶನಿವಾರ ಸಂಜೆ ಕೈಸೇರಲಿದೆ. ಕೈಗೊಳ್ಳುವ ಕ್ರಮಗಳನ್ನು ಅಲ್ಲಿ ತಿಳಿಸುವೆ ಎಂದು ಸಚಿವರು ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ನಂತರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT