ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ, ತರಬೇತಿ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ತ್ರಿತ್ರಯರ ರಾಗ
ಶ್ರೀರಾಮ ಲಲಿತಾ ಕಲಾ ಮಂದಿರದ ಆಶ್ರಯದಲ್ಲಿ ಡಾ.ಆರ್.ಕೆ.ಶ್ರೀಕಂಠನ್ ನಡೆಸಿಕೊಡುತ್ತಿರುವ `ತ್ರಿತ್ರಯರ (ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಮತ್ತು ಶ್ಯಾಮಶಾಸ್ತ್ರಿ) ರಾಗ ಸಂಯೋಜನೆ ಕುರಿತ ಕಾರ್ಯಾಗಾರ ಶುಕ್ರವಾರ ಮುಕ್ತಾಯವಾಗಲಿದೆ. ಸ್ಥಳ: ಶ್ರೀರಾಮ ಲಲಿತಾ ಕಲಾ ಮಂದಿರ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಮಾಹಿತಿಗೆ: 2671 0766.

ಸಂಗೀತ ತರಬೇತಿ
ಯಲಹಂಕ ಉಪನಗರದ ಶ್ರೀ ಕನಕ ಸಂಗೀತ ವಿದ್ಯಾಲಯ ಮಕ್ಕಳು ಹಾಗೂ ವಯಸ್ಕರಿಗಾಗಿ ಉಚಿತ ಸಂಗೀತ ತರಬೇತಿ ನೀಡಲಿದೆ. 

ಇಲ್ಲಿ ನಂದಾಬಾಯಿ ಮೋಹನದಾಸ ಧಾರವಾಡಕರ ಅವರು ಹಿಂದುಸ್ತಾನಿ, ಶಾಸ್ತ್ರೀಯ, ಲಘು ಸಂಗೀತ ಹಾಗೂ ದೇವರ ನಾಮಗಳನ್ನು ಹೇಳಿಕೊಡುತ್ತಾರೆ.

ಶ್ರೀ ಕನಕ ಸಂಗೀತ ವಿದ್ಯಾಲಯದ ಸಂಸ್ಥಾಪಕರಾದ ನಂದಾಬಾಯಿ ಮೋಹನದಾಸ ಧಾರವಾಡಕರ ಅವರು ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕೃತರು. ಹಿಂದುಸ್ತಾನಿ ಗಾಯನದಲ್ಲಿ ನಾಡಿನಾದ್ಯಂತ ತಮ್ಮ ಛಾಪು ಮೂಡಿಸಿದ ಅಭಿಜಾತೆ.

ಮೈಸೂರು ದಸರಾ, ಹಂಪಿ ಉತ್ಸವದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಕಛೇರಿ ನಡೆಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಇವರ ಕಂಠ ಸಿರಿಗೆ ಹೊರ ರಾಜ್ಯ ಜನರೂ ಮನಸೋತಿದ್ದಾರೆ. ಇವರ ಕಲೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. 

ಸ್ಥಳ: ಶಿವರಾಮು ನಿಲಯ, ನಂ.2324, ಎಂಐಜಿ 3ನೇ ಹಂತ, 4ನೇ ವಾರ್ಡ್, ಅಂಚೆ ಕಚೇರಿ ಎದುರು, ಯಲಹಂಕ ಉಪನಗರ. ನೋಂದಣಿಗೆ ಸೆ.20 ಕೊನೆಯ ದಿನ. ಮಾಹಿತಿಗೆ: 94830 06669. 

ನಾಸಿರುದ್ದೀನ್ ನಾಟಕ
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಪ್ರಸ್ತುತಪಡಿಸುವ `ಆರ್ಮ್ಸ ಅಂಡ್ ದಿ ಮೆನ್~ ಇಂಗ್ಲಿಷ್ ನಾಟಕ ಸೆ.16ರಂದು ಪ್ರದರ್ಶನಗೊಳ್ಳಲಿದೆ.  ನಾಟಕದಲ್ಲಿ ನಾಸೀರುದ್ದೀನ್ ಷಾ, ರತ್ನಾ ಪಾಠಕ್ ಷಾ, ರಣ್‌ದೀಪ್ ಹೂಡಾ, ಶಿವಾನಿ ಟಂಕಸಾಲೆ, ಅಮಿತ್ ಸೈಯಲ್ ಮತ್ತು ಸಾಹಿಲ್ ವಹಿದ್ ಹಾಗೂ ಫಯೆಜ್ ಜಲಲಿ ಇದ್ದಾರೆ.
ಸ್ಥಳ: ಚೌಡಯ್ಯ ಸ್ಮಾರಕ ಭವನ. ಸಂಜೆ 7.30. ಟಿಕೆಟ್ ಹಾಗೂ ಮತ್ತಿತರ ಮಾಹಿತಿಗೆ: 2341 4681/82/83.

ಬಾಲೆಖಾನ್ ಸ್ಮರಣೆ
ಸಿತಾರ್ ಮಾಂತ್ರಿಕ ಉಸ್ತಾದ್ ಬಾಲೆಖಾನ್ ಸ್ಮಾರಕ  ಟ್ರಸ್ಟ್‌ನ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ `ಸ್ಮರಣೆ 2011~ ಸಂಗೀತ ಸಮ್ಮೇಳನ ನಡೆಯಲಿದೆ.

ಒಂದೇ ವೇದಿಕೆಯಲ್ಲಿ ಮೂರು ಪೀಳಿಗೆಯ ಕಲಾವಿದರ ಕಾರ್ಯಕ್ರಮ ಇದರ ಮತ್ತೊಂದು ವಿಶೇಷ. ಖ್ಯಾತ ಪಿಟೀಲು ವಾದಕಿ  ಡಾ. ಎನ್.ರಾಜಂ, ಅವರ ಮಗಳಾದ ಡಾ. ಸಂಗೀತಾ ಶಂಕರ ಮತ್ತು ಮೊಮ್ಮಕ್ಕಳಾದ ರಾಗಿಣಿ ಮತ್ತು ನಂದಿನಿ ಶಂಕರ್ ಅವರು ಪಿಟೀಲು ವಾದನದ ಸುಧೆ ಹರಿಸಲಿದ್ದಾರೆ. ಇವರಿಗೆ ಪಂಡಿತ್ ವಿಶ್ವನಾಥ ನಾಕೋಡ ತಬಲಾ ಸಾಥ್ ನೀಡಲಿದ್ದಾರೆ.

ಸಂಜೆ ಖ್ಯಾತ ಒಡಿಸ್ಸಿ ನೃತ್ಯಪಟು ರಶ್ಮಿರಾಜ್ ಭುವನೇಶ್ವರಿ ಅವರಿಂದ ಒಡಿಸ್ಸಿ ನೃತ, ಬಿನೋದ ಪಾಂಡಾ ಗಾಯನ, ಬುದ್ಧನಾಥ ಸ್ವಾಯನ್, ಸೌಮ್ಯ ಜೋಷಿ ಹಾಗೂ ಸಂದೀಪ ಕುಂದ ಪಕ್ಕವಾದ್ಯ ರಂಜಿಸಲಿದೆ. ಟ್ರಸ್ಟ್‌ನ ಕಾರ್ಯಚಟುವಟಿಕೆಗೆ ದೇಣಿಗೆ ಸಂಗ್ರಹಣೆ ಕಾರ್ಯಕ್ರಮದ ಉದ್ದೇಶ. ದೇಣಿಗೆ ಪಾಸ್‌ಗೆ: 96320 33600, 98861 55663.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT