ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕೋತ್ಸವಕ್ಕೆ ಚಾಲನೆ

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರಭಾಗ ದಲ್ಲಿರುವ ಬಹುಮುಖಿ ಕಲಾತ್ಮಕ ಚಟುವಟಿಕೆಗಳ ತಾಣ  ರವೀಂದ್ರ ಕಲಾ ಕ್ಷೇತ್ರಕ್ಕೆ ಸುವರ್ಣ ಸಂಭ್ರಮ. ಈ ಐತಿ ಹಾಸಿಕ ಸಂದರ್ಭವನ್ನು ನೆನಪಿಸಿ ಕೊಳ್ಳುವ ಸಲುವಾಗಿಯೇ ಹವ್ಯಾಸಿ ರಂಗ ತಂಡ ‘ನಾಟಕ ಬೆಂಗ್ಳೂರು’ ಆಯೋಜಿಸಿದ್ದ ‘ಬೆಂಗಳೂರು ನಾಟ ಕೋತ್ಸವ’ಕ್ಕೆ  ಭಾನುವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.

ರಂಗಭೂಮಿ ಕಲಾವಿದರು, ಜನಪದ ಕಲಾವಿದರು ಹಾಡು, ನೃತ್ಯ ಪ್ರದ ರ್ಶಿಸುವ ಮೂಲಕ ಉತ್ಸವಕ್ಕೆ ಮೆರುಗು ನೀಡಿದರು. ಕಂಸಾಳೆ, ವೀರಗಾಸೆ, ಭೂತಕೋಲ ಪ್ರಕಾರಗಳನ್ನು ಒಳ ಗೊಂಡ ಹೊಸ  ಶೈಲಿಯ ಜನಪದ ನೃತ್ಯ ಪ್ರದರ್ಶನಗೊಂಡಿತು. ಧರೋಜಿ ಈರಮ್ಮ ಕಲಾತಂಡ   ‘ಹಗಲು ವೇಷ’ ಪ್ರಸ್ತುತ ಪಡಿಸಿತು.

ಉತ್ಸವಕ್ಕೆ ಚಾಲನೆ ನೀಡಿದ ರಂಗ ಕರ್ಮಿ ಪ್ರಸನ್ನ, ‘ರವೀಂದ್ರ ಕಲಾಕ್ಷೇತ್ರ ಕೇವಲ ಒಂದು ಕಟ್ಟಡವಲ್ಲ. ಪ್ರತಿಯೊಬ್ಬ ಕಲಾವಿದನ ಬದುಕಿನ ನಿರ್ಣಾಯಕ ಕ್ಷೇತ್ರ’ ಎಂದು ಬಣ್ಣಿಸಿದರು. ‘ಹವ್ಯಾಸಿ ರಂಗತಂಡವೆಂಬುದು ಸೂಕ್ತ ಪದವಲ್ಲ. ಈ ರಂಗತಂಡಗಳಿಗೆ ನಾಟಕವೆಂಬುದು ಕೇವಲ ಹವ್ಯಾಸವಲ್ಲ, ಅದರಾಚೆಗೆ ರಂಗಭೂಮಿಯನ್ನು ಉನ್ನತೀಕರಿಸುವ ಉದ್ದೇಶ ಹೊಂದಿದೆ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳ  ನಡುವೆ ರಂಗಭೂಮಿ ಅರಳ ಬೇಕು. ರಂಗತಂಡಗಳು ಇನ್ನಾದರೂ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯವಾದ ಛಾಪು ಮೂಡಿಸಬೇಕಿದೆ. ಆಗ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ’ ಎಂದರು. ರಂಗನಿರಂತರ ಸಿ.ಜಿ.ಕೆ. ರಾಷ್ಟ್ರೀಯ ರಂಗೋತ್ಸವದ ಲಾಂಛನ ಬಿಡುಗಡೆ ಮಾಡಲಾಯಿತು. ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಲೇಖಕಿ ಡಾ.ವಿಜಯಾ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಉಪಸ್ಥಿತರಿದ್ದರು. ಡಿ. 2 ರಿಂದ 11ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಸಂಸ ಬಯಲು ರಂಗ ಮಂದಿರದಲ್ಲಿ ವಿವಿಧ ಹವ್ಯಾಸಿ ತಂಡ ಗಳಿಂದ ನಾಟಕ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT