ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿಗೆ ಬಂದ ವಿಷಕಾರಿ ಹಾವುಗಳು ಮರಳಿ ಕಾಡಿಗೆ

Last Updated 12 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಹುನಗುಂದ: ವಿಷಕಾರಿ ಹಾವುಗಳು ಈ ಭಾಗದಲ್ಲಿ ಕಾಣುವುದು ಅಪರೂಪ ಮತ್ತು ವಿಸ್ಮಯವೂ ಕೂಡ. ಆದರೆ ಬುಧವಾರ ರಾತ್ರಿ ಇಲ್ಲಿನ ನವನಗರ ನಿಸರ್ಗ ಹೋಟೆಲ್‌ನಲ್ಲಿ ಭಾರಿ ವಿಷಕಾರಿ ಕಡಂಬಳ (ಕ್ರೇಟ್) ಮತ್ತು ಸಮೀಪದ ಬಿಂಜವಾಡಗಿ ಗ್ರಾಮದ ಬ್ಯಾಳಿಯವರ ತೋಟದ ಮನೆಯಲ್ಲಿ ಉರಿಮಂಡಲ (ರೆಸಲ್ಸ್ ವೈಪರ್) ಹಾವುಗಳು ಸಿಕ್ಕಿವೆ. ಇವುಗಳನ್ನು ಕೇವಲ ಒಂದು ಗಂಟೆಯೊಳಗೆ ಉರಗ ರಕ್ಷಕ ಶ್ರೀಶೈಲ ಹೊಸಮನಿ (ಕಾರ್ತಿಕ್) ಹಿಡಿದು ರಾತ್ರಿಯೇ ಕಾಡಿಗೆ ಬಿಟ್ಟಿದ್ದಾರೆ.

ಈ ಬಗ್ಗೆ ತಮ್ಮ ಹಾವು ಹಿಡಿಯುವ ಅನುಭವದ ಕ್ಷಣಗಳನ್ನು `ಪ್ರಜಾವಾಣಿ~ ಯೊಂದಿಗೆ ಹಂಚಿಕೊಂಡ ಶ್ರೀಶೈಲ, ಕಡಂಬಳ (ಕ್ರೇಟ್) ಹಾವು ಈ ಭಾಗದಲ್ಲಿ ಸಿಗುವುದು ಅಪರೂಪ ಮತ್ತು ಕಡಿಮೆ. ಈಗಾಗಲೇ ಸುಮಾರು 299 ವಿವಿಧ ಬಗೆಯ ಹಾವುಗಳನ್ನು ಹಿಡಿದಿರುವ ವಿಶೇಷ ಅನುಭವ ತಮಗಿದೆ. ಈ ಹಾವು ನಾಗರಹಾವಿಗಿಂತ ಸುಮಾರು ಮೂರುಪಟ್ಟು ವಿಷಕಾರಿ. ಇದು ಸಂಪೂರ್ಣ ನಿಶಾಚರಿ. ಅಷ್ಟೊಂದು ಆಕ್ರಮಣಕಾರಿಯಲ್ಲ. ಆದರೆ ತುಂಬಾ ಸೌಮ್ಯ ಸ್ವಭಾವದ್ದು. ಇದರ ಮೈಬಣ್ಣ ಸಂಪೂರ್ಣ ಕರ‌್ರಗೆ, ಮೈಮೇಲೆ ಬಿಳಿಪಟ್ಟಿಗಳು ಇರುತ್ತವೆ. ಇದರ ಉದ್ದ ಸಾಮಾನ್ಯವಾಗಿ ಐದು ಅಡಿವರೆಗೆ ಇರುತ್ತದೆ. ತಮಗೆ ಸಿಕ್ಕದ್ದು ಮರಿಯಾಗಿದ್ದು ಇದು ಎರಡು ಅಡಿ ಉದ್ದ ಇತ್ತು~ ಎಂದರು.

ಈ ಭಾಗದಲ್ಲಿ ಸಿಕ್ಕ ನಾಗರ ಹಾವು, ಕೇರೆ ಹಾವು, ಮಣ್ಣುಮುಕ್ಕ ಹಾವು, ಹಸುರು ಬೆನ್ನೇಣು ಹಾವು, ನೀರಹಾವು, ಸಾಮಾನ್ಯ ತೋಳಹಾವು, ಚೌಕಳಿ ಬೆನ್ನೇಣು ಹಾವು, ಆಭರಣ ಹಾವು, ಹಸುರು ಹಾವುಗಳನ್ನು ಈಗಾಗಲೇ ಹಿಡಿದಿರುವ ಶ್ರೀಶೈಲ ತಾಲ್ಲೂಕಿನ ಶಾಲಾ-ಕಾಲೇಜುಗಳಲ್ಲಿ ಉರಗ ಸಂರಕ್ಷಣೆಯ ಬಗ್ಗೆ ಪ್ರಾತ್ಯಕ್ಷಿಕೆ, ಫೋಟೋ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

ತುಂಬಾ ಅಪಾಯಕಾರಿ ಕಾರ್ಯದಲ್ಲಿ ತೊಡಗಿದ ಇವರು ಸುಮಾರು ಮೂರ‌್ನಾಲ್ಕು ವರ್ಷಗಳಿಂದ ಹಾವು ಹಿಡಿತವನ್ನು ಮಾಡುತ್ತಿದ್ದಾರೆ. ಆದರೆ ಸೂಕ್ತ ಬೆಂಬಲ ನೀಡುವ ಹಾಗೂ ಗುರುತಿಸುವ ಕಾರ್ಯವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT