ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯಗಳ ಕೊರತೆಗೆ ಭಕ್ತಿಯೇ ಕಾರಣ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜನರಲ್ಲಿ ಧಾರ್ಮಿಕ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೂ ನಾಣ್ಯಗಳ ಕೊರತೆಗೂ ನೇರ ಸಂಬಂಧವಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನಾಣ್ಯಗಳ ಕೊರತೆ ಹೆಚ್ಚು. ಇಲ್ಲಿ ಅತಿ ಹೆಚ್ಚು ದೇವಸ್ಥಾನಗಳಿವೆ. ಜೊತೆಗೆ ದೈವ - ಭೂತ ಸ್ಥಾನಗಳು, ನಾಗ ಬನಗಳೂ ಇವೆ. ಇಲ್ಲಿನ ಹುಂಡಿ, ಕಾಣಿಕೆ ಡಬ್ಬಿಗಳಲ್ಲಿ ಭಾರೀ ಪ್ರಮಾಣದ ನಾಣ್ಯಗಳು ಶೇಖರವಾಗುತ್ತವೆ.
 
ಮೂರು ತಿಂಗಳು, ಕೆಲವೆಡೆ  ವರ್ಷಕ್ಕೊಮ್ಮೆ ಕಾಣಿಕೆ ಹುಂಡಿಗಳನ್ನು ತೆರೆಯುವುದರಿಂದ ಈ ಅವಧಿಯಲ್ಲಿ ಅವು ಚಲಾವಣೆ ಇಲ್ಲದೆ ಒಂದೆಡೆ ಸಂಗ್ರಹವಾಗಿರುತ್ತವೆ. ಇದರಿಂದಾಗಿ ಸದಾ ನಾಣ್ಯಗಳ ಕೊರತೆ ಇರುತ್ತದೆ.

ಕರಾವಳಿ ಜಿಲ್ಲೆಗಳಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ `ಮುಡಿಪು~ ಕಟ್ಟಿಡುವ ಪದ್ಧತಿ ಇದೆ. ಇತರ ಜಿಲ್ಲೆಗಳಲ್ಲೂ ಈ ಪದ್ಧತಿ ಇರಬಹುದು. ಕೆಲವರಂತೂ ಹಿತ್ತಾಳೆ ಬಿಂದಿಗೆ ಅಥವಾ ಹಂಡೆಯನ್ನು ಸೀಲ್ ಮಾಡಿ ಹುಂಡಿಯಾಗಿಸುತ್ತಾರೆ.

ಕುಟುಂಬದ ಸದಸ್ಯರೆಲ್ಲ ಮುಡಿಪು ಹಂಡೆಯನ್ನು ಪೂಜಿಸಿ ಅದರೊಳಕ್ಕೆ  ನಾಣ್ಯಗಳನ್ನು ಹಾಕುತ್ತಾರೆ. ಒಂದು ವರ್ಷಕ್ಕೆ ಕನಿಷ್ಠ ಒಂದು ಸಾವಿರ ನಾಣ್ಯಗಳು ಹುಂಡಿ ಸೇರುತ್ತವೆ. 10 ವರ್ಷಕ್ಕೊಮ್ಮೆ ತಿರುಪತಿಗೆ ಸಾಗಿಸುವ ಈ ಹುಂಡಿಗಳಲ್ಲಿ ಭಾರೀ ಸಂಖ್ಯೆಯ ನಾಣ್ಯಗಳು ಇರುತ್ತವೆ. ಹೀಗೆ ಹುಂಡಿಗಳಲ್ಲಿ ಹಣ ಸಂಗ್ರಹವಾಗುವುದರಿಂದ ಸಾರ್ವಜನಿಕರಿಗೆ ಚಿಲ್ಲರೆ ಅಭಾವ ಉಂಟಾಗುತ್ತದೆ.

ಈ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ದೇವಸ್ಥಾನ ಹಾಗೂ ಖಾಸಗಿ ಹುಂಡಿಗಳನ್ನು ವಾರಕ್ಕೊಮ್ಮೆ ತೆರೆದು ನಾಣ್ಯಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡುವ ಪದ್ಧತಿ ರೂಢಿಗೆ ಬಂದರೆ ನಾಣ್ಯಗಳ ಕೊರತೆ ನೀಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT