ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ ನಮನ-2011 ನಾಳೆಯಿಂದ

Last Updated 6 ಜೂನ್ 2011, 6:35 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸ್ಥಳೀಯ ಶ್ರೀ ಕೃಷ್ಣ ಪಾರಿಜಾತ ಕಲಾ ಸಂಘ ಮಹಾಲಿಂಗಪುರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಪಾರಿಜಾತ ಕಲಾ ಕೇಸರಿ ಲಿಂ.ಮುರಿಗೆಪ್ಪ ಸೋರಗಾವಿಯವರ 14ನೇ ಪುಣ್ಯಸ್ಮರಣೆ ಅಂಗವಾಗಿ ರಾಜ್ಯ ಮಟ್ಟದ “ನಾದ ನಮನ-2011” ಸಂಗೀತೋತ್ಸವ ಇದೇ ದಿ. 7 ಮತ್ತು 8 ರಂದು ಇಲ್ಲಿಯ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೌರವಾಧ್ಯಕ್ಷ ಸಿದಗಿರೆಪ್ಪ ಬೆಳಗಲಿ ಹಾಗೂ ಸಂಚಾಲಕ ಜಿ.ಎಸ್. ಗೊಂಬಿ ತಿಳಿಸಿದರು.

ದಿ. 7ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಶ್ರೀ  ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು, ಬೀಳಗಿಯ ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಅಧ್ಯಕ್ಷತೆ  ವಹಿಸುವರು.

  ಜಮಖಂಡಿ ಉಪವಿಭಾಗಾಧಿಕಾರಿ ಡಾ. ಕೆ.ರಾಜೇಂದ್ರ ಉದ್ಘಾಟಿಸುವರು. ಹೊಸಪೇಟೆಯ ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ,  ತಹಸೀಲ್ದಾರ ಶಂಕರಗೌಡ ಸೋಮನಾಳ, ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಮಹಾಜನ, ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಸದಾನಂದ ಕೊಣ್ಣೂರ, ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೆಶ ಕೋಟಿ ಅತಿಥಿಗಳಾಗಿ ಆಗಮಿಸುವರು.

ದಿ.8 ರಂದು ಮುಂಜಾನೆ 10 ಗಂಟೆಗೆ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ “ಶ್ರೀ ಕೃಷ್ಣ ಪಾರಿಜಾತ ಪರಂಪರೆ ಅಂದು ಇಂದು” ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಡಾ.ಬಸವರಾಜ ಮಲಶೆಟ್ಟಿ, ಡಾ.ಶ್ರೀರಾಮ ಇಟ್ಟಣ್ಣವರ, ಡಾ.ಸಿ.ಕೆ. ನಾವಲಗಿ, ಡಾ.ಅಶೋಕ ನರೋಡೆ, ಪ್ರೊ.ದೇವೇಂದ್ರ ಬಿಸ್ವಾಗರ, ಡಾ.ಆಶಾರಾಣಿ ಚಿನಗುಂಡಿ, ಸಾಹಿತಿ ಸಿದ್ದು ದಿವಾಣ, ಈಶ್ವರಚಂದ್ರ ಬೆಟಗೇರಿ,ಅಣ್ಣಾಜಿ ಪಡತಾರೆ, ಪ್ರೊ ಗಂಗಾಧರ ಅವಟೇರ ಅತಿಥಿ ಉಪನ್ಯಾಸ ನೀಡಲಿದ್ದಾರೆ.

ಸಂಜೆ 5 ಗಂಟೆಗೆ “ನಾದ ನಮನ-2011” ಸಂಗೀತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಣ್ಣ ನೀರಾವರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ  ಉದ್ಘಾಟಿಸಲಿದ್ದು ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸದ ಪಿ.ಸಿ. ಗದ್ದಿಗೌಡರ, ಪುರಸಭೆ ಅಧ್ಯಕ್ಷ ಪ್ರಕಾಶ ಅರಳೀಕಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಹಾದೇಪ್ಪ ಹಟ್ಟಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ರಾಜ್ಯ ಸಕ್ಕರೆ ಮಹಾಮಂಡಳದ ಅಧ್ಯಕ್ಷ ಆರ್.ಟಿ. ಪಾಟೀಲ, ರನ್ನ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಂಡಳಿ ಸದಸ್ಯ ಅಶೋಕಗೌಡ ಪಾಟೀಲ, ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರ ಶೆಟ್ಟರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.   ಪಾರಿಜಾತೋತ್ಸವದ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಾಡಿನ ಹಿರಿಯ ಚಿತ್ರ ಕಲಾವಿದ ಮಹಾದೇವ ಕವಿಶೆಟ್ಟಿಯವರು ಈಚೆಗೆ ತಮ್ಮ 68ನೇ ವಯಸ್ಸಿನಲ್ಲಿಯೂ ಹಿಮಾಲಯವನ್ನೆಲ್ಲ ಸಂಚರಿಸಿ ರಚಿಸಿದ ವರ್ಣಚಿತ್ರಗಳ ಪ್ರದರ್ಶನ ಎರಡು ದಿನಗಳ ಕಾಲ ಶ್ರೀ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದೆ.

ಕಲಾಸಕ್ತರು ಪ್ರದರ್ಶನದ ಪ್ರಯೋಜನ ಪಡೆಯಲು ಕೋರಲಾಗಿದೆ. ಹಿರಿಯ ಪರಿಜಾತ ಕಲಾವಿದ ಪಂಡಿತ ಬಡಿಗೇರ ಹಾಗೂ ದಾದನಟ್ಟಿ ಕಾಶಿಬಾಯಿ ತಂಡದವರಿಂದ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನಗಳಿವೆ. ಹಿರಿಯ ಪಾರಿಜಾತ ಕಲಾವಿದರಾದ ಲಕ್ಷ್ಮಣ ಗೊಲಭಾವಿ, ಚಂದು ಆಲೂರ, ರೇಣುಕಾಬಾಯಿ ಮಾಲಾಪುರ ಮತ್ತು ಮಾಲಾಬಾಯಿ ಹಿಡಕಲ್‌ರನ್ನು ಪಾರಿಜಾತೋತ್ಸವ ಸಮಿತಿ ಪರವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಧ್ವಜಕ್ಕೆ ಅವಮಾನ : ಖಂಡನೆ
ಹುನಗುಂದ: ನವನಗರದಲ್ಲಿರುವ  ಕಂದಾಯ  ಇಲಾಖೆ ಸಿಬ್ಬಂದಿ ವಸತಿಗೃಹಗಳ ಹಿಂದೆ ಕನ್ನಡಧ್ವಜ ಎಸೆದಿರುವುದನ್ನು ಕನ್ನಡ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಮುಖಂಡ   ಮಹಾಂತೇಶ ಹಳ್ಳೂರ ಹಾಗೂ ಬಸವರಾಜ ಬಡಿಗೇರ ಖಂಡಿಸಿದ್ದಾರೆ. 

 ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಸರ್ಕಾರಿ ಸಿಬ್ಬಂದಿಯೇ ಅವುಗಳನ್ನು ಬಳಸಿ ಎಸೆದಿರುವ ಸಾಧ್ಯತೆ ಇದೆ. ಅಧಿಕಾರಿಗಳು ಕನ್ನಡ ಧ್ವಜದ ಬಗ್ಗೆ ಸಿಬ್ಬಂದಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 ಸೋರಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT