ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿಮ್ಮ ಮನೆಗೆ ಬಂದ ಸೊಸೆ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನೆಂಟರು ಬಂದರೆ ಮನೆಯವರು ಊಟ ಹಾಕುವುದು ಸಂಪ್ರದಾಯ. ಅಂತೆಯೇ ನಾನು ನಿಮ್ಮ ಮನೆಗೆ `ಸೊಸೆ~ಯಾಗಿ ಬಂದಿದ್ದೇನೆ. ಊಟ ಹಾಕುವುದು ನಿಮಗೆ ಬಿಟ್ಟದ್ದು~

ವಿಧಾನ ಪರಿಷತ್ತಿನಲ್ಲಿ ಬುಧವಾರ ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ `ನಮಗೆ ಈವರೆಗೆ ಮುಖ್ಯಮಂತ್ರಿಗಳು ಊಟ ಬಿಡಿ ಕನಿಷ್ಠ ಟೀ ಕೂಡ ಕೊಡಿಸಿಲ್ಲ~ ಎಂದು ಛೇಡಿಸಿದಾಗ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನೀಡಿದ ಉತ್ತರ ಇದು.

`ನಿಮ್ಮ ಮನೆಗೆ `ಸೊಸೆ~ಯಾಗಿ ಬಂದಿದ್ದೇನೆ. ನೀವೇ ಊಟ ಹಾಕಿಸಿ ಬಿಡಿ~ ಎಂದು ಮುಖ್ಯ ಮಂತ್ರಿಗಳು ಹಾಸ್ಯ ಚಟಾಕಿ ಹಾರಿಸಿದರು. ಕೊನೆಗೆ ಊಟ ಕೊಡಿಸೋಣ ಎನ್ನುವ ರೀತಿ ಸನ್ನೆ ಮಾಡುತ್ತಾ ಮುಗುಳ್ನಗುತ್ತಲೇ ಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT