ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಫೇಸ್‌ಬುಕ್‌ನಲ್ಲಿ ಇಲ್ಲ!

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ತಮನ್ನಾ ಕಾಲಿವುಡ್‌ನಲ್ಲಿ ಕಾಣಿಸಿಕೊಂಡು ಸುಮಾರು ಒಂದು ವರ್ಷವಾಗುತ್ತಿದೆ. ಆಕೆ ಧನುಷ್ ಜತೆ `ವೆಂಗೈ~ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಅಲ್ಲಿಂದೀಚೆಗೆ ಆಕೆಯ ಸದ್ದೇ ಇರಲಿಲ್ಲ.

`ಟಾಲಿವುಡ್‌ನಲ್ಲಿ ಬ್ಯುಸಿ ಇದ್ದಿದ್ದರಿಂದ ಕಾಲಿವುಡ್ ಚಿತ್ರಗಳಲ್ಲಿ ನಟಿಸಲಾಗುತ್ತಿಲ್ಲ. ಹಾಗಾಗಿ ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಿಲ್ಲ~ ಎನ್ನುವ ತಮನ್ನಾ, ಫೇಸ್‌ಬುಕ್‌ನಲ್ಲಿ ತಮ್ಮ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಕಿಡಿಕಾರಿದ್ದಾರೆ.

ತಮನ್ನಾಗೆ ಈಗೀಗ ತಲೆ ಚಿಟ್ಟುಹಿಡಿಯುತ್ತಿದೆಯಂತೆ. ಕಾರಣ ಕೇಳಿದರೆ ಆಕೆ ಹೇಳುವುದು ಹೀಗೆ...

`ಮಾಡಲು ಕೆಲಸವಿಲ್ಲದ ಕೆಲವು ಕುಚೇಷ್ಟೆ ವ್ಯಕ್ತಿಗಳು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ನನ್ನ ನಕಲಿ ಫ್ರೊಫೈಲ್ ಸೃಷ್ಟಿಸಿದ್ದಾರೆ. ಇದು ನನಗೆ ಹೋದಲ್ಲೆಲ್ಲಾ ಇರಿಸು ಮುರಿಸು ತರುತ್ತಿದೆ. ಇದರಿಂದಾಗಿ ನನ್ನ ಅಭಿಮಾನಿಗಳು, ಸ್ನೇಹಿತರು ನಾನು ಫೇಸ್‌ಬುಕ್‌ನಲ್ಲಿ ಇದ್ದೇನೆ ಎಂದು ನಿಜವಾಗಿ ನಂಬಿಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಹೇಳುವುದಿಷ್ಟು: ನಾನು ಇದುವರೆಗೂ ಫೇಸ್‌ಬುಕ್‌ನ ಸಖ್ಯ ಬಳಸಿಲ್ಲ. ನಾನು ಫೇಸ್‌ಬುಕ್‌ನಲ್ಲಿ ಇಲ್ಲ!~
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT