ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಶಾಂತಿದೂತ: ಅಲಿ ಜಫರ್

ಬೊಂಬಾಟ್ ಬಾಲಿವುಡ್
Last Updated 28 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪಾಕಿಸ್ತಾನಿ ಗಾಯಕ ಮತ್ತು ನಟ ಅಲಿ ಜಫರ್ ತಮ್ಮನ್ನು `ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಶಾಂತಿದೂತ' ಎಂದು ಬಣ್ಣಿಸಿಕೊಂಡಿದ್ದಾರೆ.

2003ರಲ್ಲಿ `ಶರಾರತ್' ಚಿತ್ರಕ್ಕೆ ಹಾಡುವ ಮೂಲಕ ಬಾಲಿವುಡ್ ಪ್ರವೇಶಿಸಿದ ಅಲಿ ಜಫರ್ `ತೇರೆ ಬಿನ್ ಲಾಡೆನ್' ಚಿತ್ರದಲ್ಲಿ ಹಾಡಿ, ನಟನೆಯನ್ನೂ ಮಾಡಿದರು. ನಂತರ `ಲವ್ ಕ ದಿ ಎಂಡ್', `ಮೇರೆ ಬ್ರದರ್ ಕಿ ದುಲ್ಹನ್', `ಲಂಡನ್ ಪ್ಯಾರಿಸ್ ನ್ಯೂಯಾರ್ಕ್' ಚಿತ್ರಗಳಲ್ಲಿ ನಟಿಸಿದರು.

ಇದೀಗ ಅವರು ನಟಿಸಿರುವ `ಛಶ್ಮೆ ಬದ್ದೂರ್', `ಅಮೀನ್ ಕಿ ಆಶಾ', `ಕಿಲ್ ದಿಲ್', `ಗೋಲ್‌ಮಾಲ್ 4', `ತೇರೆ ಬಿನ್ ಲಾಡೆನ್-3' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. `ಛಶ್ಮೆ ಬದ್ದೂರ್' ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ.

`ನನ್ನನ್ನು ಬಾಲಿವುಡ್ ಸೋದರನಂತೆ ಸ್ವೀಕರಿಸಿದೆ. ನನಗೆ ಪಾಕಿಸ್ತಾನ ಎಷ್ಟು ಮುಖ್ಯವೋ ಭಾರತವೂ ಅಷ್ಟೇ ಮುಖ್ಯ. ನನ್ನ ಪ್ರತಿಭೆಗೆ ವೇದಿಕೆ ನೀಡಿದ ಭಾರತೀಯರ ಮನಸ್ಸು ದೊಡ್ಡದು' ಎಂದು ಅಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT