ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸುರಕ್ಷಿತ: ಸಲೇಹ್ ಘೋಷಣೆ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಸನಾ (ಎಪಿ/ಎಎಫ್‌ಪಿ): ತಾವು ಸುರಕ್ಷಿತವಾಗಿ ಇರುವುದಾಗಿ ಬಂಡುಕೋರರ ಕ್ಷಿಪಣಿ ದಾಳಿಯಿಂದ ಗಾಯಗೊಂಡಿರುವ ಯೆಮನ್‌ನ ಅಧ್ಯಕ್ಷ ಅಲಿ ಅಬ್ದುಲ್ಲ ಸಲೇಹ್ ಸರ್ಕಾರಿ ಸ್ವಾಮ್ಯದ ಟಿ.ವಿಯಲ್ಲಿ ಶನಿವಾರ ದೃಢಪಡಿಸಿದ್ದಾರೆ.

ತಮ್ಮ ಅರಮನೆ ಆವರಣದಲ್ಲಿದ್ದ ಮಸೀದಿಯಲ್ಲಿ ಆಡಳಿತ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ನಡೆದ ಈ ದಾಳಿಯಲ್ಲಿ, ಒಟ್ಟು 7 ಜನ ಸಾವಿಗೀಡಾಗಿರುವುದಾಗಿ ಸಲೇಹ್ ತಿಳಿಸಿದ್ದಾರೆ.

ದಾಳಿಯಲ್ಲಿ ಅಧ್ಯಕ್ಷರೂ ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸರ್ಕಾರಿ ಟಿ.ವಿ ಕೂಡಲೇ ಈ ವರದಿಗಳನ್ನು ಅಲ್ಲಗಳೆದಿತ್ತು.ದಾಳಿಯಿಂದ ಪ್ರಮುಖ ನಾಯಕರು ಗಾಯಗೊಂಡಿರುವುದಾಗಿ ಅಧಿಕೃತ ಸುದ್ದಿಸಂಸ್ಥೆ ಸ್ಪಷ್ಟಪಡಿಸಿದೆ.

 ಸಲೇಹ್ ಅವರ ತಲೆಯ ಹಿಂಭಾಗಕ್ಕೆ ಲಘು ಪೆಟ್ಟು ಬಿದ್ದಿದೆ. ಪ್ರಧಾನಿ ಅಲಿ ಅಹಮದ್ ಮುಜಾವರ್, ಉಪ ಪ್ರಧಾನಿ ಜನರಲ್ ರಷದ್ ಅಲ್ ಅಲಿಮಿ, ಅಧ್ಯಕ್ಷರ ಹಿರಿಯ ಭದ್ರತಾ ಸಲಹೆಗಾರ ಮತ್ತು ಸಂಸತ್‌ನ ಇಬ್ಬರು ಉನ್ನತ ನಾಯಕರು ಗಾಯಾಳುಗಳಾಗಿದ್ದಾರೆ. ಇವರಲ್ಲಿ ಭದ್ರತಾ ಸಲಹೆಗಾರರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT