ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು

ಶುಭದಿನದ ಮ್ಯಾಜಿಕ್: ಎಲ್ಲಾ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ಕಣಕ್ಕೆ
Last Updated 15 ಏಪ್ರಿಲ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: ಯುಗಾದಿ ಕಳೆದು ಐದನೇ ದಿನವಾದ ಸೋಮವಾರ ಅತ್ಯಂತ ಶುಭ ದಿನ ಎಂಬ ನಂಬಿಕೆಯನ್ನು ಎಲ್ಲ ಪಕ್ಷಗಳ ಬಹುತೇಕ ಅಭ್ಯರ್ಥಿಗಳು ಹೊಂದಿದ್ದರಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 30 ಜನ ನಾಮಪತ್ರ ಸಲ್ಲಿಸಿದರು.

ಎಲ್ಲಾ 28 ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿ ಮುಂದೆಯೂ ಸೋಮವಾರ ಜನಸಾಗರ ಕಂಡುಬಂತು. ಬಿಜೆಪಿಯ ಎಸ್.ಸುರೇಶಕುಮಾರ್, ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಡಾ.ಸಿ.ಎನ್.ಅಶ್ವಥನಾರಾಯಣ, ಕೆಜೆಪಿಯ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ನ ಬಿ.ಕೆ. ಚಂದ್ರಶೇಖರ್, ಕೃಷ್ಣ ಬೈರೇಗೌಡ, ಜೆಡಿಎಸ್‌ನ ಸುಭಾಷ್ ಭರಣಿ ಸೇರಿದಂತೆ ನಾಲ್ಕೂ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಪ್ರತಿಯೊಂದು ಕ್ಷೇತ್ರದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೋಮವಾರವೇ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ಅಭ್ಯರ್ಥಿಗಳು ತಮ್ಮ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಚುನಾವಣಾ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಆದರೆ, ನಾಮಪತ್ರ ಸಲ್ಲಿಕೆಗೆ ಐವರು ಹೋಗಲಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಪ್ರತಿಯೊಂದು ಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿ ಮುಂದೂ ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದರಿಂದ ಸಾರ್ವಜನಿಕರೂ ಪದರಾಡುವಂತಾಯಿತು.

ಶಿವಾಜಿನಗರದಿಂದ ನಿರ್ಮಲ್ ಸುರಾನಾ (ಬಿಜೆಪಿ), ಅಬ್ಬಾಸ್ ಅಲಿ ಬೋಹ್ರಾ (ಜೆಡಿಎಸ್), ಐ.ಆರ್. ಪೆರುಮಾಳ್ (ಕೆಜೆಪಿ), ಕೆ.ಪಿ. ಅಬುಸಾಬ್, ಎಂ.ವಿಶ್ವನಾಥ್ (ಪಕ್ಷೇತರ), ಶಾಂತಿನಗರದಿಂದ ಎನ್.ಎ. ಹ್ಯಾರೀಸ್ (ಕಾಂಗ್ರೆಸ್), ಕೆ. ವಾಸುದೇವಮೂರ್ತಿ (ಜೆಡಿಎಸ್), ಭಾನುಪ್ರಕಾಶ್, ಪ್ರಭು ಬಾಸ್ಕೊ (ಪಕ್ಷೇತರ), ಗಾಂಧಿನಗರದಿಂದ ದಿನೇಶ್ ಗುಂಡೂರಾವ್ (ಕಾಂಗ್ರೆಸ್), ಪಿ.ಸಿ. ಮೋಹನ್ (ಬಿಜೆಪಿ), ಸುಭಾಷ್ ಭರಣಿ (ಜೆಡಿಎಸ್), ಕೆ.ಪ್ರಸನ್ನ,  ವಿ.ನಾಗರಾಜ್ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ರಾಜಾಜಿನಗರದಿಂದ ಎಸ್.ಸುರೇಶಕುಮಾರ್ (ಬಿಜೆಪಿ), ಶೋಭಾ ಕರಂದ್ಲಾಜೆ (ಕೆಜೆಪಿ), ಮಂಜುಳಾ ನಾಯ್ಡು (ಕಾಂಗ್ರೆಸ್), ಎಸ್.ಟಿ. ಆನಂದ್ (ಜೆಡಿಎಸ್), ಹರಿಶಾರಾಧ್ಯ (ಬಿಎಸ್‌ಆರ್ ಕಾಂಗ್ರೆಸ್), ರೂಪಾರಾಣಿ (ಲೋಕಸತ್ತಾ), ಎಂ.ರಕ್ಷಿತ್ (ಪಕ್ಷೇತರ), ಚಾಮರಾಜಪೇಟೆಯಿಂದ ಬಿ.ವಿ. ಗಣೇಶ್ (ಬಿಜೆಪಿ), ಜಮೀರ್ ಅಹ್ಮದ್ ಖಾನ್ (ಜೆಡಿಎಸ್), ಅಫ್ಸರ್ ಪಾಷಾ ಮತ್ತು ಉಸ್ಮಾನ್ ಬೇಗ್ (ಎಸ್‌ಡಿಪಿಐ), ಸಿಬಿಕೆ ರಾಮಾ, ಎಂ. ಸುಬ್ರಮಣಿ, ಸಯ್ಯದ್ ಅಸ್ಲಮ್ (ಪಕ್ಷೇತರ) ಉಮೇದುವಾರಿಕೆ ಸಲ್ಲಿಸಿದ್ದಾರೆ.

ಚಿಕ್ಕಪೇಟೆಯಿಂದ ಆರ್.ವಿ. ದೇವರಾಜ್ (ಕಾಂಗ್ರೆಸ್), ಬಿ.ಜಿ. ಉದಯ್ (ಬಿಜೆಪಿ), ಎಂ.ಸಿ. ನಾರಾಯಣಗೌಡ (ಜೆಡಿಎಸ್), ಅಸ್ಗರ್ ಎಂ. (ಪಕ್ಷೇತರ), ಕೆ.ಆರ್. ಪುರದಿಂದ ಎನ್.ಎಸ್. ನಂದೀಶ್ ರೆಡ್ಡಿ (ಬಿಜೆಪಿ), ಬಿ.ಎ. ಬಸವರಾಜು (ಕಾಂಗ್ರೆಸ್), ಎಂ.ಎಲ್. ಅನುಪಮಾ (ಜೆಡಿಎಸ್), ಮಹಾಲಕ್ಷ್ಮಿ ಲೇಔಟ್‌ನಿಂದ ಎಸ್. ಹರೀಶ್ (ಬಿಜೆಪಿ), ಮಲ್ಲೇಶ್ವರದಿಂದ ಡಾ.ಸಿ.ಎನ್. ಅಶ್ವತ್ಥನಾರಾಯಣ (ಬಿಜೆಪಿ), ಬಿ.ಕೆ. ಶಿವರಾಂ (ಕಾಂಗ್ರೆಸ್), ಎನ್. ಕುಮಾರ್ (ಕೆಜೆಪಿ), ಜೆ. ಮಂಜುನಾಥ್ (ಬಿಎಸ್‌ಆರ್ ಕಾಂಗ್ರೆಸ್), ಡಾ. ಮೀನಾಕ್ಷಿ ಭರತ್ (ಲೋಕಸತ್ತಾ) ನಾಮಪತ್ರ ಸಲ್ಲಿಸಿದ್ದಾರೆ.

ಹೆಬ್ಬಾಳದಿಂದ ಸಿ.ಮುನಿಕೃಷ್ಣ (ಕೆಜೆಪಿ), ಶ್ರೀಧರ್ ಪಬ್ಬಿಶೆಟ್ಟಿ (ಲೋಕಸತ್ತಾ), ಎನ್. ಮಾಧವ ರಾಜು, ಶಬ್ಬೀರ್ ಪಾಷಾ, ಎನ್.ಕೆ.ರವಿಕುಮಾರ್ (ಪಕ್ಷೇತರ), ಪುಲಕೇಶಿನಗರದಿಂದ ಬಿ.ಪ್ರಸನ್ನಕುಮಾರ್ (ಕಾಂಗ್ರೆಸ್), ಅಖಂಡ ಶ್ರೀನಿವಾಸಮೂರ್ತಿ (ಜೆಡಿಎಸ್), ಎ.ಹೇಮಲತಾ (ಎಸ್‌ಡಿಪಿಐ), ಸರ್ವಜ್ಞನಗರದಿಂದ ಕೆ.ಜೆ ಜಾರ್ಜ್ (ಕಾಂಗ್ರೆಸ್), ಪದ್ಮನಾಭರೆಡ್ಡಿ (ಬಿಜೆಪಿ), ಫಿಲಿಪ್ ಮರಿಯನ್ (ಪಕ್ಷೇತರ), ಗೋವಿಂದರಾಜನಗರದಿಂದ ಪ್ರಿಯಾಕೃಷ್ಣ (ಕಾಂಗ್ರೆಸ್), ಎಚ್.ರವೀಂದ್ರ (ಬಿಜೆಪಿ), ಪಿ.ದೊಡ್ಡಯ್ಯ (ಕೆಜೆಪಿ) ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಸವನಗುಡಿಯಿಂದ ಬಿ.ಕೆ. ಚಂದ್ರಶೇಖರ್ (ಕಾಂಗ್ರೆಸ್), ಎಲ್.ಎ. ರವಿ ಸುಬ್ರಹ್ಮಣ್ಯ (ಬಿಜೆಪಿ), ಕೆ.ಬೈರೇಗೌಡ (ಕೆಜೆಪಿ), ಡಾ.ಎಂ.ಎನ್. ನಾಗೇಶ್, ಟಿ.ಕೆ. ಪ್ರೇಮಕುಮಾರ್, ಶಿವಕುಮಾರ್ (ಪಕ್ಷೇತರ), ಪದ್ಮನಾಭನಗರದಿಂದ ಎಲ್.ಎಸ್. ಚೇತನಗೌಡ (ಕಾಂಗ್ರೆಸ್), ಡಾ.ಎಂ.ಆರ್.ವಿ ಪ್ರಸಾದ್ (ಜೆಡಿಎಸ್), ಸುಮಿತ್ರಾ ಅಯ್ಯಂಗಾರ್ (ಲೋಕಸತ್ತಾ), ಬಿ.ಟಿ.ಎಂ. ಲೇಔಟ್‌ನಿಂದ ರವಿಕೃಷ್ಣ ರೆಡ್ಡಿ (ಲೋಕಸತ್ತಾ), ಬೊಮ್ಮನಹಳ್ಳಿಯಿಂದ ಸಿ.ನಾಗಭೂಷಣ (ಕಾಂಗ್ರೆಸ್), ಎಂ.ಸತೀಶ್ ರೆಡ್ಡಿ (ಬಿಜೆಪಿ), ಆರ್.ಶರಶ್ಚಂದ್ರ (ಜೆಡಿಎಸ್), ಎಸ್.ಟಿ. ಶ್ರೀನಿವಾಸ್ (ಬಿಎಸ್‌ಆರ್ ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.

ಯಲಹಂಕದಿಂದ ಎಸ್.ಆರ್. ವಿಶ್ವನಾಥ್ (ಬಿಜೆಪಿ), ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ (ಕಾಂಗ್ರೆಸ್), ಎ.ರವಿ (ಬಿಜೆಪಿ), ಹನುಮಂತೇಗೌಡ (ಜೆಡಿಎಸ್), ಯಶವಂತಪುರದಿಂದ ಎಸ್.ಟಿ. ಸೋಮಶೇಖರ್ (ಕಾಂಗ್ರೆಸ್), ಟಿ.ಎನ್. ಜವರಾಯಿ ಗೌಡ (ಜೆಡಿಎಸ್), ದಾಸರಹಳ್ಳಿಯಿಂದ ಎಸ್. ಮುನಿರಾಜು (ಬಿಜೆಪಿ), ಬಿ.ಅಂದಾನಪ್ಪ (ಜೆಡಿಎಸ್), ಜಿ. ಮರಿಸ್ವಾಮಿ (ಕೆಜೆಪಿ), ಎ.ಅಂತೋನಿ, ಎಚ್.ದೇವರಾಜ್, ಎಂ.ಬಿ ಗೋವಿಂದೇಗೌಡ, ಎನ್. ಮಂಜುನಾಥ್ (ಪಕ್ಷೇತರ) ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಹದೇವಪುರದಿಂದ ಅರವಿಂದ ಲಿಂಬಾವಳಿ (ಬಿಜೆಪಿ), ಎ.ಸಿ. ಶ್ರೀನಿವಾಸ್ (ಕಾಂಗ್ರೆಸ್), ಎನ್.ಗಣೇಶ್ ಎ.ಶಿವಕುಮಾರ್, ವೆಂಕಟರಾಮಯ್ಯ, (ಪಕ್ಷೇತರ), ಬೆಂಗಳೂರು ದಕ್ಷಿಣದಿಂದ ಎಂ.ಕೃಷ್ಣಪ್ಪ (ಬಿಜೆಪಿ), ಪ್ರಭಾಕರ್ ರೆಡ್ಡಿ (ಜೆಡಿಎಸ್), ಸುಂದರಪ್ಪ (ಜೆಡಿಯು), ಆಶಿಶ್ ಕಪೂರ್, ಜಿ.ಎ. ಗ್ರೇಗರಿ, ಕೆ.ಗುರುರಾಜು, ಮುರಳಿ ಮೋಹನ್ (ಪಕ್ಷೇತರ), ಆನೇಕಲ್‌ನಿಂದ ಆರ್.ಕೃಷ್ಣಮೂರ್ತಿ (ಕೆಜೆಪಿ), ವೈ.ಸಿ. ಚಿನ್ನಪ್ಪ, ಚಿನ್ನಪ್ಪ ವೈ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT