ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಹಿಂಪಡೆಯಲು ಕೊನೇ ದಿನ

ನಗರಸಭೆ ಚುನಾವಣೆ: 24 ನಾಮಪತ್ರ ತಿರಸ್ಕೃತ
Last Updated 14 ಡಿಸೆಂಬರ್ 2013, 9:52 IST
ಅಕ್ಷರ ಗಾತ್ರ

ಮಡಿಕೇರಿ: ನಗರಸಭೆಯ 23 ವಾರ್ಡ್‌ಗಳಿಗೆ ಸಲ್ಲಿಕೆಯಾಗಿದ್ದ 127 ನಾಮಪತ್ರಗಳಲ್ಲಿ 24 ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರ ಹಿಂಪಡೆಯಲು ಮೊದಲ ದಿನವಾದ ಶುಕ್ರವಾರ ಇಬ್ಬರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಶನಿವಾರದವರೆಗೆ (ಡಿ.14) ನಾಮಪತ್ರ ಹಿಂಪಡೆಯಲು ಅವಕಾಶವಿರುವುದರಿಂದ ಆ ನಂತರವೇ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ.

ವಾರ್ಡ್‌ 22 ಹಾಗೂ 23ರಲ್ಲಿ ಇಬ್ಬಿಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಸ್‌ಡಿಪಿಐ, ಒಬ್ಬೊಬ್ಬ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದಿದೆ. 22ನೇ  ವಾರ್ಡ್‌ಗೆ ನಾಮಪತ್ರ ಸಲ್ಲಿಸಿದ್ದ ಫಜಲುಲ್ಲಾ ಅವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದು, ಇದೇ ಪಕ್ಷದ ಮತ್ತೊಬ್ಬ ಅಭ್ಯರ್ಥಿಯಾಗಿದ್ದ ಅಮಿನ್‌ ಮೊಹಿಸಿನ್‌ ಅವರು ಮುಂದುವರಿಯಲಿದ್ದಾರೆ.

ಇದೇ ರೀತಿ 23ನೇ ವಾರ್ಡ್‌ನಲ್ಲಿ ನಾಮಪತ್ರ ಸಲ್ಲಿಸಿದ್ದ ಖಲೀಲ್‌ ಅವರು ಹಿಂದಕ್ಕೆ ಸರಿದಿದ್ದು, ಇದೇ ಪಕ್ಷದ ಮನ್ಸೂರ್‌ ಅವರು ಕಣದಲ್ಲಿ ಉಳಿದಿದ್ದಾರೆ.

ಕಾಂಗ್ರೆಸ್‌–ಬಿಜೆಪಿ
ನಗರಸಭೆಯ ಎಲ್ಲ 23 ವಾರ್ಡ್‌ಗಳಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರ ಯಾವ ನಾಮಪತ್ರಗಳು ತಿರಸ್ಕೃತಗೊಂಡಿಲ್ಲ. ಅಲ್ಲದೇ, ಯಾವ ಅಭ್ಯರ್ಥಿಯೂ ನಾಮಪತ್ರ ಹಿಂದಕ್ಕೆ ಪಡೆದಿಲ್ಲ.

ತಿರಸ್ಕೃತ: ಜೆಡಿಎಸ್‌ ಪಕ್ಷದಿಂದ ಸಲ್ಲಿಕೆಯಾಗಿದ್ದ 23 ನಾಮಪತ್ರಗಳಲ್ಲಿ 2 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 21 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಎಸ್‌ಡಿಪಿಐ ಪಕ್ಷದ ನಾಲ್ಕು, ಸಮಾಜವಾದಿ ಪಕ್ಷದ 16 ಹಾಗೂ ಇತರೆ 2 ಸೇರಿದಂತೆ ಒಟ್ಟು 24 ನಾಮಪತ್ರಗಳು ತಿರಸ್ಕೃತಗೊಂಡಿವೆ. 

ಸೂಕ್ತ ದಾಖಲೆಗಳಿಲ್ಲದ್ದಕ್ಕೆ ತಿರಸ್ಕೃತ
ವಿವಿಧ ಪಕ್ಷಗಳ ಒಟ್ಟು 24 ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರದ ಜೊತೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸದಿರುವುದರಿಂದ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಐದು ಜನ ಸೂಚಕರ ಹೆಸರುಗಳನ್ನು ನೀಡಿರಲಿಲ್ಲ. ಹೀಗಾಗಿ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ತಹಶೀಲ್ದಾರ್‌ ಕುಂಞಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT