ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕಗಳಿಗೂ ಚುನಾವಣಾ ನೀತಿ ಸಂಹಿತೆ ಬಿಸಿ

Last Updated 11 ಏಪ್ರಿಲ್ 2014, 5:14 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಚುನಾವಣಾ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ಕ್ರಮಗಳು ಸಾಕಷ್ಟು ಬಾರಿ ಜನ ಸಾಮನ್ಯರ ನೆಮ್ಮದಿಗೂ ಭಂಗ ತರುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಹಾದು ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿ ರಾಜ್ಯ ಹಣಕಾಸು ಆಯೋಗ ಮತ್ತು ಶಾಸಕರ ನಿಧಿಯಿಂದ ನಿರ್ಮಿಸಿರುವ ಒಂದು ತಂಗುದಾಣ ಹಾಗೂ ನ್ಯಾಯಾಲಯದ ಸಮೀಪ ನಿರ್ಮಿಸಿರುವ ಬಸ್ ನಿಲ್ದಾಣವಿದೆ.

ಪ್ರಸ್ತುತ ನಡೆಯುವ ಲೋಕಸಭಾ ಚುನಾವಣೆ ನೆಪದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣದಿಂದ ಬಸ್ ತಂಗುದಾಣದಲ್ಲಿರುವ ಶಾಸಕರ ಹೆಸರಿನ ನಾಮ ಫಲಕವನ್ನು ಬಿಳಿವಸ್ತ್ರದಿಂದ ಮುಚ್ಚಲಾಗಿದೆ. ಅಲ್ಲದೆ ತಂಗುದಾಣಕ್ಕೆ ಒದಗಿಸಿರುವ ವಿದು್ಯತ್ ಸಂಪರ್ಕವನ್ನು ಕಡಿತಗೊಳಿಸುವುದರಿಂದ ರಾತ್ರಿ ವೇಳೆ ಬಸ್ ಗಾಗಿ ಕಾಯಬೇಕಾದ ಮಹಿಳೆಯರು ಮಕ್ಕಳು, ಸಾರ್ವಜನಿಕರು ಕತ್ತಲಲ್ಲಿ ನಿಂತು ಪರದಾಡುವಂತಾಗಿದೆ.ಹಾಗಾಗಿ ಆಯೋಗದ ಈ ಕ್ರಮವನ್ನು ಸಾರ್ವಜನಿಕರು ದೂರಿದ್ದಾರೆ.

ಇಷ್ಟಕ್ಕೂ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ  ನಿರ್ಮಿತಗೊಳ್ಳುವ ಸಾರ್ವಜನಿಕ ಕಟ್ಟಡ ಕಾಮಗಾರಿಗಳಿಗೆ ಜನಪ್ರತಿನಿಧಿಗಳ ಹೆಸರು ಮತ್ತು ಭಾವ ಚಿತ್ರ ಬಳಸುವುದನ್ನು ಮುಂಚಿತವಾಗಿಯೇ ಸರ್ಕಾರ ಮತ್ತು ಆಯೋಗದ ಮಟ್ಟದಲ್ಲಿಯೇ ನಿರ್ಬಂಧಿಸಿದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.

ಸರ್ಕಾರ ದಿಂದ ಆಗುವ ಕಾಮಗಾರಿಗಳಿಗೆ ಆಯಾ ಜನಪ್ರತಿನಿಧಿಗಳ ಹೆಸರು ಬಳಸುವುದರ ಬಗ್ಗೆ ಹಿಂದಿ ನಿಂದ ಲೂ ಅಪಸ್ವರವಿದೆ. ಸಾರ್ವಜನಿಕರ ಅಪಸ್ವರಕ್ಕೆ ಯಾವುದೇ ರಾಜಕೀಯ ಪಕ್ಷಗಳು ಹೊರತಾಗಿಲ್ಲ. ಆದರೆ ಇಂತಹ ಅವಾಂತರಗಳಿಗೆ ಅವಕಾಶ ನೀಡುವ ಸರ್ಕಾರ ಮತ್ತು ಚುನಾವಣಾ ಆಯೋಗಗಳು ನಂತರ ಕೈಗೊಳ್ಳಬೇಕಾದ ವೆಚ್ಚಗಳ ಕಡೆಗೂ ಗಮನಹರಿಸ ಬೇಕಾಗಿದೆ.

ಮಾದರಿ ನೀತಿ ಸಂಹಿತೆಯಡಿ ಕೆಲವು ನಾಮಫಲಕಗಳ ಹೆಸರನ್ನು ಮುಚ್ಚುವುದರಿಂದ ಯಾವುದೇ ಪ್ರಯೋಜನ ವಿಲ್ಲ. ದಿನನಿತ್ಯದಲ್ಲಿ ಜನಪ್ರತಿನಿಧಿಗಳನ್ನು ಜನ ಗಮನಿಸುತ್ತಿರುತ್ತಾರೆ. ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೆ ತರುವುದಾದರೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಭಾಷಣ ಮಾಡುವುದನ್ನು, ಮಾಧ್ಯಮ ಗಳಲ್ಲಿ ಬರುವ ಅವರ ಭಾವಚಿತ್ರವನ್ನು  ನಿರ್ಬಂಧಿಸಬೇಕಾಗುತ್ತದೆ.

ನಾಮ ಫಲಕ­ಗಳನ್ನು ಮುಚ್ಚುವುದು ಅನವಶ್ಯಕ ವೆಚ್ಚವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತ ಮತದಾರರು. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಇಂತಹ ವಿಚಾರಗಳ ಬಗ್ಗೆ ಕ್ರಮ ಕೈಗೊಳ್ಳುವತ್ತ ಗಮನಹರಿಸುವ ಬದಲು ಇಂತಹ ವಿಷಯಗಳಿಗೆ ಸೂಕ್ತ ನಿಯಮಾವಳಿ ರೂಪಿಸುವ ಅವಶ್ಯಕತೆಯಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT