ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಾಯಕ' ಸ್ಥಾನಕ್ಕೆ ಎಸ್.ಪಿ.ಮಿಶ್ರಾ ವಿದಾಯ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ತಂಡದ `ಆಟವಾಡದ ನಾಯಕ'ರಾಗಿದ್ದ    ಎಸ್.ಪಿ.ಮಿಶ್ರಾ ಡೇವಿಸ್ ಕಪ್‌ನ ಈ ಹಣಾಹಣಿ ಬಳಿಕ ವಿದಾಯ ಹೇಳಿದರು. ಈ ಪೈಪೋಟಿಯಲ್ಲಿ 5-0ರಲ್ಲಿ ಗೆಲ್ಲುತ್ತಿದ್ದಂತೆ ಭಾರತದ ಎಲ್ಲಾ ಆಟಗಾರರು ಮಿಶ್ರಾ ಅವರನ್ನು ಎತ್ತಿ ಹಿಡಿದು ಸಂಭ್ರಮಿಸಿದರು.

`ಆರು ವರ್ಷಗಳಿಂದ ನಾನು ಭಾರತ ಡೇವಿಸ್ ಕಪ್ ತಂಡದ ನಾಯಕನಾಗಿ ಕಾರ್ಯನಿಭಾಯಿಸಿದ್ದೇನೆ. ಈ ಅವಧಿಯಲ್ಲಿ ಎರಡು ಬಾರಿ ವಿಶ್ವ ಗುಂಪಿಗೆ ಹೋಗಿದ್ದೆವು. ಹಲವು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದೇನೆ. ಎಲ್ಲಾ ಆಟಗಾರರು ನನಗೆ ಅತ್ಯುತ್ತಮ ಸಹಕಾರ ನೀಡಿದರು' ಎಂದು ಮಿಶ್ರಾ ಭಾನುವಾರ ತಿಳಿಸಿದರು.

`ಇಂಡೊನೇಷ್ಯಾ ಎದುರು 5-0 ಗೆಲುವು ಸಾಧಿಸುವ ಮೂಲಕ ಆಟಗಾರರು ನನಗೆ ಅತ್ಯುತ್ತಮ ಉಡುಗೊರೆ ನೀಡಿದ್ದಾರೆ. ಗೆಲುವಿನ ನಿರೀಕ್ಷೆ ಇತ್ತು.  ಇಷ್ಟು ಸುಲಭವಾಗಿ ಗೆದ್ದ್ದ್ದಿದಕ್ಕೆ ಆಟಗಾರರಿಗೆ ಧನ್ಯವಾದಗಳು' ಎಂದರು.

`ಆಟಗಾರರು ಈಗ ಯುವ ನಾಯಕರ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಯುವ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ವಿಶ್ವ ಗುಂಪಿಗೆ ಹೋಗುವ ಸಾಮರ್ಥ್ಯ ಇವರಲ್ಲಿದೆ. ಭಾರತದ ಡೇವಿಸ್ ಕಪ್ ಹಣಾಹಣಿ ಇನ್ನು ಫೆಬ್ರುವರಿಯಲ್ಲಿ ನಡೆಯಲಿದೆ' ಎಂದು ಅವರು ನುಡಿದರು.

ಸನಮ್ ಬದಲು ಯೂಕಿ ಅವರನ್ನು ಆಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, `ಶನಿವಾರ ಡಬಲ್ಸ್ ವೇಳೆ ಸನಮ್‌ಗೆ ಗಾಯವಾಗಿತ್ತು. ಆದರೂ ಭಾನುವಾರ ಮಧ್ಯಾಹ್ನದವರೆಗೆ ಅವರು ಆಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೆವು. ಆಟಗಾರರ ಪಟ್ಟಿ ನೀಡಲು 15 ನಿಮಿಷ ಇದ್ದಾಗ ಸನಮ್ ಗಾಯ ಮತ್ತಷ್ಟು ಹೆಚ್ಚಾಯಿತು. ಹಾಗಾಗಿ ಹೋಟೆಲ್‌ನಲ್ಲಿಯೇ ಇದ್ದ ಸೋಮದೇವ್‌ಗೆ ತುರ್ತಾಗಿ ದೂರವಾಣಿ ಕರೆ ಮಾಡಿದೆ. ಅವರಿನ್ನೂ ಸಿದ್ಧರಾಗಿರಲಿಲ್ಲ. ಆದರೆ ತಕ್ಷಣವೇ ಕೋರ್ಟ್‌ಗೆ ಆಗಮಿಸಿ ಅದ್ಭುತ ಪ್ರದರ್ಶನ ತೋರಿದರು' ಎಂದರು.

`ನಾಯಕರು ಹಾಗೂ ಸಹ ಆಟಗಾರರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದರು. ಅದನ್ನು ಉಳಿಸಿಕೊಂಡ ತೃಪ್ತಿ ನನಗಿದೆ. ಎರಡು ಪಂದ್ಯಗಳಲ್ಲಿಯೂ ಖುಷಿಯಿಂದ ಆಡಿದೆ. ಇದೊಂದು ಅತ್ಯುತ್ತಮ ಅನುಭವ. ಇದು ಮುಂದಿನ ಪಂದ್ಯಗಳಿಗೆ ಸಹಾಯಕ್ಕೆ ಬರಲಿದೆ' ಎಂದು ಯೂಕಿ ಭಾಂಬ್ರಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT