ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವದ ಪ್ರಶ್ನೆ: ನುಣುಚಿಕೊಂಡ ದೋನಿ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋಲು ಕಂಡು ಟೀಕೆಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ನಾಯಕ ಸ್ಥಾನಕ್ಕೆ ಸಂಬಂಧಿಸಿದಂತೆ ಬುಧವಾರ ಸಾಕಷ್ಟು ಪ್ರಶ್ನೆಗಳು ತೂರಿ ಬಂದವು. ಆದರೆ, ಈ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಅವರು ನುಣುಚಿಕೊಂಡರು.

`ನಾಯಕತ್ವ ಸ್ಥಾನ ಕುರಿತಂತೆ ಪ್ರಶ್ನೆಗಳು ಬರಲಿವೆ ಎಂಬುದು ನನಗೆ ಗೊತ್ತು. ಆದರೆ, ಈಗ ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಗುರುವಾರ ಟ್ವೆಂಟಿ-20 ಪಂದ್ಯವಿದೆ. ಆ ಪಂದ್ಯದ ಮೇಲಷ್ಟೇ ನಮ್ಮ ಗಮನ' ಎಂದು ದೋನಿ ಕರುರುವಾಕ್ಕಾಗಿ ನುಡಿದರು.

`ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಹಿಂದೆ ಏನಾಗಿ ಹೋಯಿತು ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅಗತ್ಯವಿಲ್ಲ. ಪ್ರಸ್ತುತ ಏನಾಗುತ್ತಿದೆ ಎಂಬುದು ಮುಖ್ಯ. ನಮ್ಮ ಮುಂದಿರುವುದು ಟಿ-20 ಮಾದರಿ. ಟೆಸ್ಟ್ ಪಂದ್ಯಕ್ಕಿಂತ ಟಿ-20 ತುಂಬಾ ವಿಭಿನ್ನವಾದದ್ದು. ಆದ್ದರಿಂದ ಮುಗಿದು ಹೋದ ಟೆಸ್ಟ್ ಸರಣಿಯ ಬಗ್ಗೆ ಯೋಚಿಸುವುದಿಲ್ಲ' ಎಂದು ಮಹಿ ಸ್ಪಷ್ಟವಾಗಿ ಹೇಳಿದರು.

`ಯುವಆಟಗಾರರಾದ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಭವಿಷ್ಯವಿದೆ. ಅದರಲ್ಲೂ ವಿಶೇಷವಾಗಿ ಸ್ಪಿನ್ ಬೌಲರ್‌ಗಳು ವಿಕೆಟ್ ಪಡೆಯಬಲ್ಲರು' ಎಂದರು. ಸಚಿನ್ ನಿವೃತ್ತಿ ನಿರ್ಧಾರ ಕುರಿತು ಎತ್ತಿದ ಪ್ರಶ್ನೆಗೆ `ಅದು ಸದ್ಯಕ್ಕೆ ಅಗತ್ಯವಿಲ್ಲ' ಎಂದಷ್ಟೇ ಚುಟುಕಾಗಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT