ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ತಂದೀತು ನಾಯಿಪಾಡು!

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್, (ಪಿಟಿಐ): ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಇನ್ನು ಮುಂದೆ ನಾಯಿ ಸಾಕುವವರು ಅತ್ಯಂತ ಎಚ್ಚರದಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಅವರ ಬದುಕೇ `ನಾಯಿಪಾಡು~ ಆಗಿ ಬಿಡುವ ಅಪಾಯ ಇದೆ!

ಒಂದು ವೇಳೆ ಇಲ್ಲಿನ ನಾಯಿಗಳು ಯಾರಿಗಾದರೂ ಮಾರಣಾಂತಿಕವಾಗಿ ಕಚ್ಚಿದ್ದೇ ಆದರೆ ಅವುಗಳ ಮಾಲೀಕರು 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ನೆರೆಮನೆಯ ನಾಯಿಯೊಂದು ಕಚ್ಚಿ ಕೊಂದ ಹಿನ್ನೆಲೆಯಲ್ಲಿ ಈ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.

ಇದರ ಅನ್ವಯ, ನಾಯಿಗಳ ಮಾಲೀಕರು ತಮ್ಮ `ಕ್ರೂರ~ ನಾಯಿಗಳನ್ನು ನೆರೆಮನೆಯವರು ಮತ್ತು ದಾರಿಹೋಕರಿಂದ ದೂರವಿರಿಸಬೇಕು.

ಇದುವರೆಗೆ ನಾಯಿ ಮಾಲೀಕರು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಸಣ್ಣ ಪ್ರಮಾಣದ ದಂಡವನ್ನು ಮಾತ್ರ ವಿಧಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT