ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಬಾಲ, ಕಿವಿಗೆ ಕತ್ತರಿ ಶಿಕ್ಷಾರ್ಹ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ ( ಪಿಟಿಐ): ವೈದ್ಯಕೀಯ ಕಾರಣ ಹೊರತುಪಡಿಸಿ ನಾಯಿಗಳ ಬಾಲ ಹಾಗೂ ಕಿವಿ ಕತ್ತರಿಸುವುದು ಕ್ರೌರ್ಯವಾಗಿದ್ದು, ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಪ್ರಾಣಿ ದಯಾ ಸಂಘ (ಎಡಬ್ಲುಬಿಐ) ಹೇಳಿದೆ.

ಈ ಕ್ರೂರ ಪದ್ಧತಿಯನ್ನು ಶೀಘ್ರವೇ ನಿಲ್ಲಿಸುವಂತೆ ಮಂಡಳಿಯು ಪಶುವೈದ್ಯ ಮಂಡಳಿಗೆ ಸಲಹೆ ನೀಡಿದೆ. ಅಲ್ಲದೆ ಶ್ವಾನ ಪ್ರದರ್ಶನಗಳಿಗೆ ಬಾಲ ಹಾಗೂ ಕಿವಿಗಳನ್ನು ಕತ್ತರಿಸಿದ ನಾಯಿಗಳನ್ನು ತೆಗೆದುಕೊಂಡು ಹೋಗದಿರುವಂತೆ ಶ್ವಾನಗೃಹಗಳಿಗೆ ಅದು ಸೂಚನೆ ನೀಡಿದೆ.
`ನಾಯಿಗಳ ಬಾಲ ಹಾಗೂ ಕಿವಿಗಳನ್ನು ಕತ್ತರಿಸುವುದು 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ~ ಎಂದು ಎಡಬ್ಲುಬಿಐ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಡಾ. ಆರ್.ಎಂ.ಖರ್ಬ್ ಹೇಳಿದ್ದಾರೆ.
ಹುಟ್ಟಿ ಎರಡು-ಮೂರು ದಿನಗಳಾದ ನಾಯಿಮರಿಗಳ (ಬಾಕ್ಸರ್, ಡಾಬರ್‌ಮನ್, ಗ್ರೇಟ್ ಡೇನ್ಸ್ ಮತ್ತಿತರ ತಳಿಗಳ ನಾಯಿಗಳು) ಬಾಲ ಹಾಗೂ ಕಿವಿ ಕತ್ತರಿಸುವುದನ್ನು ವಿರೋಧಿಸಿ ಭಾರತೀಯ ಪ್ರಾಣಿ ರಕ್ಷಣಾ ಸಂಸ್ಥೆ (ಎಫ್‌ಐಎಪಿಒ) ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಖರ್ಬ್ ಈ ಮೇಲಿನ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT