ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಪ್ರಶಸ್ತಿ ಗೆದ್ದ ಆಳ್ವಾಸ್ ತಂಡ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡವು ಶನಿವಾರ ಇಲ್ಲಿ ನಡೆದ 48ನೇ ರಾಜ್ಯ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ನ ನಾಲ್ಕು ವಿಭಾಗಗಳಲ್ಲಿ ತಂಡ ಪ್ರಶಸ್ತಿ ಗೆದ್ದು ವಿಜೃಂಭಿಸಿತು.

ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಮತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಮಹಿಳೆ ಯರು (8.ಕಿ.ಮೀ), 20 ವರ್ಷದೊಳಗಿನ ಬಾಲಕಿ ಯರು, 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿ ಯರ ವಿಭಾಗದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಪಾರಮ್ಯ ಮೆರೆದ ಬೆಂಗ ಳೂರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) 12 ಕಿ.ಮೀ ವಿಭಾಗದ ಚಾಂಪಿಯನ್ ತಂಡ ವಾಗಿ ಹೊರಹೊಮ್ಮಿತು. ಎಂಇಜಿಯ ವಿ. ಇಮ್ಯಾನುವಲ್ (39ನಿ, 06.99 ಸೆ) ಮತ್ತು ಮೂಡ ಬಿದರೆಯ ಆಳ್ವಾಸ್ ಸಂಸ್ಥೆಯ ಕೆ.ಎಂ. ಅರ್ಚನಾ (31ನಿ, 24.82ಸೆ;) ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಬರಿಗಾಲಲ್ಲಿ ಓಡಿ ಗೆದ್ದ ಬಾಲಕಿ:
ಮೈಸೂರು ಜಿಲ್ಲೆಯ ಕುರಬೂರಿನ ಎಂ. ಮಂಜುಳಾ (ಕಾಲ: 13ನಿ, 56.5ಸೆ) 18 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಬರಿಗಾಲಿನಲ್ಲಿಯೇ ಓಡಿ ಪ್ರಥಮ ಸ್ಥಾನ ಗೆದ್ದು ಅಚ್ಚರಿ ಮೂಡಿಸಿದರು.

ಫಲಿತಾಂಶಗಳು: ಪುರುಷರು (12 ಕಿ.ಮೀ): ವಿ. ಇಮ್ಯಾನುವಲ್ (ಎಂಇಜಿ ಬೆಂಗಳೂರು)–1, ಕೃಷ್ಣಪ್ಪ ಬಿ. ಸಂತಿ (ಎಸ್‌ಎಐ ಧಾರವಾಡ)–2, ಬಿ. ಶ್ರೀನು (ಎಂಇಜಿ ಬೆಂಗಳೂರು)–3, ಎಂ. ನಂಜುಂಡಪ್ಪ (ದಿ ಪೇಸ್‌ಮೇಕರ್, ಬೆಂಗಳೂರು)–4, ಶ್ರೀಧರ್ ಭಜಂತ್ರಿ (ಎಂಇಜಿ ಬೆಂಗಳೂರು)–5, ಎಸ್. ಮಣಿಕಂಠನ್ (ಎಂಇಜಿ ಬೆಂಗಳೂರು)–6, ಎ. ಮಾಣಿಕ್ಕಂ (ಎಂಇಜಿ ಬೆಂಗಳೂರು)–7, ಆರ್‌.ಆರ್. ಜುಬಿನ್‌ ಶಾ (ಎಂಇಜಿ ಬೆಂಗ  ಳೂರು)–8,  ಕಾಲ: 39ನಿ, 06.99ಸೆ;  ತಂಡ ಪ್ರಶಸ್ತಿ: ಮದ್ರಾಸ್ ಎಂಜಿನಿಯರಿಂಗ್ ಗ್ರುಪ್ ಬೆಂಗಳೂರು (ಎಂಇಜಿ, 15 ಅಂಕಗಳು).

ಬಾಲಕರು: 20 ವರ್ಷದೊಳಗಿನವರು (8 ಕಿ.ಮೀ): ಹರ್ಷದ್ ಆರ್. ಮಾತ್ರೆ (ಯುವ ಕ್ಲಬ್, ಬೆಂಗಳೂರು)–1, ಪ್ರವೀಣ ಜೆ. ಕಂಬಾಳ (ಅರ್ಜುನ ಟ್ರ್ಯಾಕ್ ಅ್ಯಂಡ್ ಫೀಲ್ಡ್)–2, ಪರಸಪ್ಪ ಎಂ. ಹಳಿಜೋಳ –3, ಲಿಂಗರಾಜ ಹಳಿಯಾಳ  –4, ಗಂಗಪ್ಪ ಬಿ. ತಂಬೂರ್ –5 (ಮೂವರು ಎಸ್‌ಎಐ ಧಾರವಾಡ), ಎಸ್. ಸಂಜೀವಕುಮಾರ್ (ಆಳ್ವಾಸ್ ಕಾಲೇಜು, ಮೂಡಬಿದರೆ)–6 ಕಾಲ: 25ನಿ, 37.88ಸೆ;  ತಂಡ ಪ್ರಶಸ್ತಿ: ಎಸ್‌ಎಐ ಧಾರವಾಡ .

18 ವರ್ಷದೊಳಗಿನವರು (6ಕಿ.ಮೀ): ಶಿವಂ ಪಟೇಲ್ (ಬೆಂಗಳೂರು)–1, ವಿಕಾಸ್(ಬೆಂಗಳೂರು)–2, ಎ. ಅರ್ಜುನ್ (ಚಿತ್ರದುರ್ಗ)–3, ಲೋಕಾ (ಡಿವೈಎಸ್‌ಎಸ್‌ ಬೆಂಗಳೂರು)–4, ಎಚ್‌.ಎನ್. ತ್ರಿಶೂಲ್ (ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದರೆ)–5, ವಿ. ಸುದರ್ಶನ್ (ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡಬಿದರೆ)–6.  ಕಾಲ:   ತಂಡ ಪ್ರಶಸ್ತಿ: ಆಳ್ವಾಸ್ ಸಂಸ್ಥೆ  (25 ಅಂಕಗಳು).

16 ವರ್ಷದೊಳಗಿನವರು (3 ಕಿ.ಮೀ): ಎಸ್‌.ಎಂ. ಗೋಪಾಲ–1, ಎನ್‌.ಎಚ್‌. ತಿಮ್ಮಣ್ಣ –2, ಲಕ್ಷ್ಮಣ –3 (ಮೂವರು ಡಿವೈಎಸ್‌ಎಸ್‌ ವಿದ್ಯಾನಗರ ಬೆಂಗಳೂರು), ಎಸ್‌. ಪ್ರವೀಣಕುಮಾರ್ (ಎವೈಎಸ್ ಸ್ಪೋರ್ಟ್ಸ್‌ ಕ್ಲಬ್ ಬೆಂಗಳೂರು)–4, ಟಿ.ಪಿ. ಈಶ್ವರಚಂದ್ರ (ತಿಪಟೂರು ಸ್ಪೋರ್ಟ್ಸ್‌ ಕ್ಲಬ್ ತುಮಕೂರು)–5, ರಾಜು ಯಮನಪ್ಪ  ವದ್ದರ್ (ಡಿವೈಎಸ್‌ಎಸ್‌ ವಿದ್ಯಾನಗರ ಬೆಂಗಳೂರು)–6, ಕಾಲ: 9ನಿ, 30.10ಸೆ; ತಂಡ ಪ್ರಶಸ್ತಿ: ಡಿವೈಎಸ್‌ಎಸ್‌ ವಿದ್ಯಾನಗರ (12 ಅಂಕ).

ಮಹಿಳೆಯರು: 8 ಕಿ.ಮೀ: ಕೆ.ಎಂ. ಅರ್ಚನಾ–1, ಎ.ಎಸ್. ಸುಜಾತಾ –2,  ಕವಿತಾ ವಿ ಹಿರೇಮಠ–3 (ಮೂವರು ಆಳ್ವಾಸ್ ಮೂಡಬಿದರೆ), ಶ್ರದ್ಧಾರಾಣಿ ದೇಸಾಯಿ (ಡಿವೈಎಸ್‌ಎಸ್ ಮೈಸೂರು) –4, ಎಂ.ವಿ. ಸೌಮ್ಯ –5, ಎಂ.ಎನ್. ಅಖಿಲಾ –6 (ಇಬ್ಬರೂ ಆಳ್ವಾಸ್, ಮೂಡಬಿದರೆ), ಕಾಲ: 31ನಿ, 24.82ಸೆ; ತಂಡ ಪ್ರಶಸ್ತಿ: ಆಳ್ವಾಸ್ ಸಂಸ್ಥೆ, ಮೂಡಬಿದರೆ (11 ಅಂಕಗಳು).

20 ವರ್ಷದೊಳಗಿನವರು (6 ಕಿ.ಮೀ): ಬಿ.ಕೆ. ಸುಪ್ರಿತಾ –1, ಅಕ್ಷತಾ –2 (ಇಬ್ಬರೂ  ಆಳ್ವಾಸ್ ಮೂಡಬಿದರೆ ), ಎಂ. ಸುವರ್ಣ (ಶಿವಮೊಗ್ಗ)–3, ಎ. ಶ್ರೇಯಾ (ಆಳ್ವಾಸ್ ಮೂಡಬಿದರೆ)–4, ಕೆ.ಆರ್. ಮೇಘನಾ (ಮೈಸೂರು ಜಿಲ್ಲೆ)–5, ಕೆ. ಸೌಮ್ಯ (ಆಳ್ವಾಸ್ ಮೂಡಬಿದರೆ)–6, ಕಾಲ: 24ನಿ, 29.10ಸೆ; ತಂಡ ಪ್ರಶಸ್ತಿ:  ಆಳ್ವಾಸ್ ಸಂಸ್ಥೆ ಮೂಡಬಿದರೆ (13 ಅಂಕ),

18 ವರ್ಷದೊಳಗಿನವರು (4 ಕಿ.ಮೀ): ಎಂ. ಮಂಜುಳಾ (ಕುರಬೂರು ಮೈಸೂರು)–1, ಸಿ. ಪೂರ್ಣಿಮಾ (ಮೈಸೂರು)–2, ಎ.ಎ. ಲಿಖಿತಾ  (ಆಳ್ವಾಸ್ ಮೂಡಬಿದರೆ)–3, ಶ್ರದ್ಧಾ ಶೆಟ್ಟಿ (ಆಳ್ವಾಸ್ ಮೂಡಬಿದರೆ)–4, ಎಚ್.ಡಿ. ಶ್ರುತಿ (ಆಳ್ವಾಸ್)–5, ಎಚ್‌.ಎಸ್. ಸಿಂಚನಾ (ಆಳ್ವಾಸ್)–6 ಕಾಲ: 13ನಿ, 56.5ಸೆ; ತಂಡ ಪ್ರಶಸ್ತಿ: ಆಳ್ವಾಸ್ ಮೂಡಬಿದರೆ (18 ಅಂಕಗಳು).

16 ವರ್ಷ (3 ಕಿ.ಮೀ): ಜಯಲಕ್ಷ್ಮೀ (ಆಳ್ವಾಸ್ ಮೂಡಬಿ ದರೆ)–1, ಅಶ್ವಿನಿ (ಮೈಸೂರು)–2, ಪಿ. ಸಿಂಧು (ಮೈಸೂರು)–3, ಕೆ.ಎಂ. ಮಾನ್ಯ (ಡಿವೈಎಸ್‌ಎಸ್‌ ವಿದ್ಯಾನಗರ, ಬೆಂಗಳೂರು)–4, ಎಂ. ಸಹನಾ (ಮೈಸೂರು)–5, ಕೆ.ಜೆ. ದೀಪ್ತಿ (ಆಳ್ವಾಸ್ ಮೂಡಬಿ ದರೆ)–6. ಕಾಲ: 10ನಿ, 41.22ಸೆ, ತಂಡ ಪ್ರಶಸ್ತಿ: ಮೈಸೂರು ಜಿಲ್ಲೆ (17 ಅಂಕಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT