ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರಿಗೆ ಕೀರ್ತಿಚಕ್ರ, 21 ಮಂದಿಗೆ ಶೌರ್ಯ ಚಕ್ರ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಹೊಸದಿಲ್ಲಿ, (ಐಎಎನ್‌ಎಸ್): ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಕೀರ್ತಿಚಕ್ರ’ಕ್ಕೆ ಐವರು ಯೋಧರು  ಪಾತ್ರರಾಗಿದ್ದು ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ಶೌರ್ಯ ಚಕ್ರ’ಕ್ಕೆ 21 ಮಂದಿ ಪಾತ್ರರಾಗಿದ್ದಾರೆ.

ಈ ಬಾರಿಯ ‘ಅಶೋಕಚಕ್ರ’ ಪ್ರಶಸ್ತಿಗೆ ಯಾವುದೇ ಹೆಸರನ್ನು ಶಿಫಾರಸು ಮಾಡಿಲ್ಲವಾದರೂ ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹತರಾದ ಸೇನೆಯ ವೈದ್ಯಾಧಿಕಾರಿ ಮೇಜರ್ ಲೈಶ್‌ರಾಮ್ ಜ್ಯೋತಿನ್ ಸಿಂಗ್ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು. ಬುಧವಾರ ನಡೆಯಲಿರುವ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಈ ಶೌರ್ಯಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಕೋಮು ಸಾಮರಸ್ಯ ಪ್ರಶಸ್ತಿ: ಈ ಬಾರಿಯ ರಾಷ್ಟ್ರೀಯ ಕೋಮು ಸಾಮರಸ್ಯ ಪ್ರಶಸ್ತಿಗೆ ದಿಲ್ಲಿ ಮೂಲದ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಆಚಾರ್ಯ ಲೋಕೇಶ್ ಮುನಿ ಅವರು ಆಯ್ಕೆಯಾಗಿದ್ದಾರೆ. ಶಾಂತಿ ಮತ್ತು ಅಹಿಂಸೆಯನ್ನು ಪ್ರಚಾರಪಡಿಸುವಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT