ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಕಾನೂನು ಸಾಕ್ಷರತಾ ರಥ

Last Updated 19 ಫೆಬ್ರುವರಿ 2011, 6:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜನಸಾಮಾನ್ಯರಿಗೆ ಪ್ರಾಧಿಕಾರದ ಉದ್ದೇಶಗಳನ್ನು ತಿಳಿಸಲು, ಕಾನೂನು ಅರಿವು ಹಾಗೂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ರಾಜಿ, ಸಂಧಾನದ ಮೂಲಕ ಇತ್ಯರ್ಥಪಡಿಸಲು ಫೆ. 20ರಿಂದ ಮಾರ್ಚ್ 8ರವರೆಗೆ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಎಂ.ಜೋಷಿ ತಿಳಿಸಿದ್ದಾರೆ.
 
20ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅಪರ ಜಿಲ್ಲಾ ನ್ಯಾಯಾಧೀಶರಾದ ಎಸ್. ಸಾವಿತ್ರಿ ವಿನಾಯಕ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಲಿದ್ದಾರೆ. 20ರಿಂದ 22ರವರೆಗೆ ಚಿತ್ರದುರ್ಗ ನಗರ, ಬಾಪೂಜಿ ಪ್ರೌಢಶಾಲೆ, ಎಸ್‌ಜೆಎಂ ಪ್ರೌಢಶಾಲೆ, ಚಿನ್ಮೂಲಾದ್ರಿ ಪ್ರೌಢಶಾಲೆ, ಜ್ಞಾನ ಭಾರತಿ ವಿದ್ಯಾಮಂದಿರ, ಮದಕರಿಪುರ, ಮೆದೇಹಳ್ಳಿ, ಮಠದಕುರುಬರಹಟ್ಟಿ, ಸಿದ್ದಾಪುರ ಹಾಗೂ ಸಿರಿಗೆರೆಯಲ್ಲಿ ಸಂಚರಿಸಲಿದೆ.

ಫೆ. 23ರಿಂದ 25ರವರೆಗೆ ಹೊಳಲ್ಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಹರೇಹಳ್ಳಿ, ಮಲ್ಲಾಡಿಹಳ್ಳಿ, ಚಿಕ್ಕಂದವಾಡಿ, ಚಿಕ್ಕಜಾಜೂರು, ಬಿ.ದುರ್ಗ, ತಿರುಮಲಾಪುರ, ಆವಿನಹಟ್ಟಿ, ಎನ್.ಜಿ.ಹಳ್ಳಿ ಹಾಗೂ ಫೆ. 26ರಿಂದ 28ರವರೆಗೆ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ, ಶ್ರೀರಾಂಪುರ, ಸೋಮಸಂದ್ರ, ಬೆಲಗೂರು, ಗರಗ, ಸೋಮೇನಹಳ್ಳಿ, ಮಲ್ಲಪ್ಪನಹಳ್ಳಿ, ಆನಿವಾಳ, ಮಧುರೆ. ಮಾರ್ಚ್ 1ರಿಂದ 3ರವರೆಗೆ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ, ಲಕ್ಕವ್ವನಹಳ್ಳಿ, ಸಿ.ಎನ್.ಮಾಳಿಗೆ, ಮೇಟಿಕುರ್ಕೆ, ಐಮಂಗಲ, ಜವನಗೊಂಡನಹಳ್ಳಿ, ದಿಂಡಾವರ, ಆದಿವಾಲ ಫಾರ್ಮ್‌ನಲ್ಲಿ ರಥ ಸಂಚರಿಸಲಿದೆ.

4ರಿಂದ 6ರವರೆಗೆ ಚಳ್ಳಕೆರೆಯ ಸರ್ಕಾರಿ ಪದವಿ ಕಾಲೇಜು, ರಾಮಜೋಗಿಹಳ್ಳಿ, ನನ್ನಿವಾಳ, ನಗರಂಗೆರೆ, ಗೋಪನಹಳ್ಳಿ, ಜಡೆಕುಂಟೆ, ವೀರದಿಮ್ಮನಹಳ್ಳಿ, ಮನಮೈನಹಟ್ಟಿ, ನಾಯಕನಹಟ್ಟಿ. 7ರಿಂದ 8ರವರೆಗೆ ಮೊಳಕಾಲ್ಮುರಿನ ಸರ್ಕಾರಿ ಪದವಿ ಕಾಲೇಜು, ಹಾನಗಲ್, ತುಮಕೂರ್ಲಹಳ್ಳಿ, ಗೌರಸಮುದ್ರ, ಹಿರೇಹಳ್ಳಿ, ತಳಕು, ಓಬಣ್ಣನಹಳ್ಳಿ, ತಮ್ಮೇನಹಳ್ಳಿ, ಜೆ.ಬಿ.ಹಳ್ಳಿ, ಸಿದ್ದಾಪುರದಲ್ಲಿ ಸಾಕ್ಷರತಾ ರಥ ಸಂಚರಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ವಾರ್ಷಿಕೋತ್ಸವ: ಹಿರಿಯೂರು ತಾಲ್ಲೂಕು ಹೊಸಯಳನಾಡಿನ ಸರ್ಕಾರಿ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ಫೆ. 19ರಂದು ನಡೆಯಲಿದೆ.  ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಅವರನ್ನು ಸನ್ಮಾನಿಸಲಾಗುವುದು. ಪ್ರಾಂಶುಪಾಲ ಆರ್. ಪಾಂಡುರಂಗಯ್ಯ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಬಿಇಒ ರೇವಣಸಿದ್ದಪ್ಪ, ಬೆಂಗಳೂರಿನ ಕಾರ್ಯನಿರ್ವಾಹಕ  ಎಂಜಿನಿಯರ್ ತಿಪ್ಪೇಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜಿನ ಉಪನ್ಯಾಸಕ ಡಾ.ಬಿ.ಎಂ. ಗುರುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT