ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಗುರು ಸಂಸ್ಮರಣ ಕಾರ್ಯಕ್ರಮ

Last Updated 14 ಡಿಸೆಂಬರ್ 2013, 8:04 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಚಿಕ್ಕಬಳ್ಳಾಪುರದಲ್ಲಿ ಹನುಮಜಯಂತಿ ಪ್ರಯುಕ್ತ ನೂತನ ನವಗ್ರಹ ಮಂದಿರ ಉದ್ಘಾ ಟನೆ ಹಾಗೂ ಶ್ರೀ ಗುರು ಪ್ರತಿಷ್ಠಾಪನೆಯ ಜೊತೆಗೆ ಶ್ರೀ ಗುರು ಸಂಸ್ಮರಣ ಮತ್ತು ಭಕ್ತಿಸಂಗಮ ಕಾರ್ಯಕ್ರಮ ವನ್ನು ಡಿ.15 ರಂದು ಆಯೋಜಿಸಿದೆ’ ಎಂದು ಸಂಸ್ಥಾನ ಮಠದ ಶ್ರೀಮಂಗಳ ನಂದನಾಥ ಸ್ವಾಮೀಜಿ ತಿಳಿಸಿದರು.

ದೇವನಹಳ್ಳಿ ಪ್ರವಾಸಿಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ‘ಮುಂದಿನ ತಿಂಗಳು ಆದಿಚುಂಚನಗಿರಿ ಮೂಲ ಮಠದಲ್ಲಿ ಶ್ರೀ ಬಾಲಗಂಗಾಧರ ಸ್ವಾಮಿ ಅವರ ಮೊದಲ ವರ್ಷದ ಗುರು ಸ್ಮರಣೆ ಕಾರ್ಯಕ್ರಮ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಮೂಲಪೀಠಾಧ್ಯಕ್ಷ ನಿರ್ಮಲಾನಂದನಥ ಸ್ವಾಮೀಜಿ ಅವರ ಆಶಯದಂತೆ ಚಿಕ್ಕಬಳ್ಳಾಪುರ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯ ದೇವಾಲಯದ ಪಕ್ಕದಲ್ಲಿ ಶ್ರೀಬಾಲ ಗಂಗಾಧರನಾಥ ಸ್ವಾಮೀಜಿಯ ಐದು ಅಡಿ ಎತ್ತರದ ಕಂಚಿನ ಪುತ್ಥಳಿ ಅನಾವರಣ ನಡೆಯಲಿದೆ’ ಎಂದು ಅವರು ಹೇಳಿದರು.

ಕೋಲಾರ ಬೆಂಗಳೂರು ಗ್ರಾಮಾಂತರ ಚಿಕ್ಕ ಬಳ್ಳಾಪುರ ಜಿಲ್ಲೆ ವ್ಯಾಪ್ತಿ ಅಲ್ಲದೆ ಹೊರರಾಜ್ಯದ ಎಲ್ಲಾ ಸಮುದಾಯದ ಭಕ್ತರು ಧಾರ್ಮಿಕ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ನಾಡಿ ನಾದ್ಯಂತ  ಎಲ್ಲಾ ಹೆಸರಾಂತ ಜನಪದ ಕಲಾ ತಂಡಗಳು ಭಾಗವಹಿಸಲಿದ್ದು, ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಜಾತ್ಯತೀತವಾಗಿ ಮೂರು ಜಿಲ್ಲೆಯ ಶಾಸಕರು, ಕೇಂದ್ರ ಸಚಿವರು ಹಾಗೂ ಎಲ್ಲಾ ಪಕ್ಷದ ಮುಖಂಡರು ಸೇರಿ ಒಂದು ಲಕ್ಷ ಭಕ್ತರಿಗೆ ಅನ್ನದಾಸೋಹ ಏರ್ಪಡಿಸ ಲಾಗಿದೆ ಎಂದರು.

ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್‌.ಎನ್‌. ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಗ್ರಾಮಾಂತರ ಜಿಲ್ಲೆ ಸಂಚಾಲಕ ಕಲ್ಯಾಣ್‌ ಕುಮಾರ್‌, ಜಿ.ಪಂ ಮಾಜಿ ಸದಸ್ಯ ವೀರಪ್ಪ, ಮುಖಂಡ ಜಯರಾಮಪ್ಪ, ವೆಂಕಟೇಶ್‌ ಮುಂತಾ ದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT