ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ನಗರದಲ್ಲಿ ವೇಷದ ಹುಲಿ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೇಖಕ ಡಾ.ಎಂ.ಬೈರೇಗೌಡ ಅವರು ರಚಿಸಿದ, ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ `ವೇಷದ ಹುಲಿ~ ನಾಟಕದ ಮೊದಲ ಪ್ರದರ್ಶನವು ಮಂಗಳವಾರ (ಅ. 11) ಸಂಜೆ 6.30ಕ್ಕೆ ನಗರದ ಹಂಪಿನಗರದ ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನಡೆಯಲಿದೆ. ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಈ ಪ್ರಯೋಗವನ್ನು ಸಿದ್ಧಪಡಿಸಿದೆ.

`ಕ್ರಿ.ಶ. 15ನೇ ಶತಮಾನದಲ್ಲಿ ನಡೆದಿರಬಹುದಾದ ಪ್ರಸಂವನ್ನಾಧರಿಸಿದ ಈ ನಾಟಕವು, ಪ್ರಭುತ್ವ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚುವಂತೆ ಜನಸಾಮಾನ್ಯರ ಮದುವೆಯ ವಿಚಾರದಲ್ಲೂ ತಲೆಹಾಕಿ, ನಡೆವ ಮದುವೆಗಳನ್ನು ನಿಲ್ಲಿಸಿ ವಧುವನ್ನು ತನ್ನ ಕೈವಶ ಮಾಡಿಕೊಳ್ಳುವ ಕಥೆ ಹೊಂದಿದೆ~ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

`ಮನುಷ್ಯ ಮೃಗವಾಗಿ, ಮತ್ತೆ ಮೃಗವೇ ಮನುಷ್ಯನಾಗುವ ಪರಿವರ್ತನೆಯ ಕಥೆಯನ್ನು ನಾಟಕ ಹೊಂದಿದೆ.
ವರ್ತಮಾನದ ಎಲ್ಲ ತಲ್ಲಣಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಇದೊಂದು ವಿಭಿನ್ನ ಮತ್ತು ವಿನೂತನ ಪ್ರಯೋಗವಾಗಿದೆ~ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT