ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಪಶುವೈದ್ಯಕೀಯ ಪರೀಕ್ಷಕರ ಪ್ರತಿಭಟನೆ

Last Updated 1 ಅಕ್ಟೋಬರ್ 2012, 19:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.3 ರಂದು ರಾಜ್ಯದಾದ್ಯಂತ ಪ್ರತಿಭಟನೆಯನ್ನು ಕೈಗೊಳ್ಳಲಿದೆ~ ಎಂದು ಸಂಘದ ಅಧ್ಯಕ್ಷ ಎಚ್. ಪಾಂಡುರಂಗ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರದ ಮುಂದೆ 12 ವರ್ಷಗಳಿಂದ  ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ,  ಇದುವರೆಗೂ ಸರ್ಕಾರ ಅವುಗಳನ್ನು ಈಡೇರಿಸಿಲ್ಲ. ನಾವು ಕೂಡ ಪಶು ವೈದ್ಯರಂತೆಯೇ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸವನ್ನು ನಿರ್ವಹಿಸುತ್ತೇವೆ~ ಎಂದರು.

`ಪಶುವೈದ್ಯಕೀಯ ಪರೀಕ್ಷಕರ ನೇಮಕಾತಿಗೆ ಇರುವ ವಿದ್ಯಾರ್ಹತೆ ಪಿಯುಸಿ ವಿಜ್ಞಾನ ನಂತರ ಎರಡು ವರ್ಷಗಳ ಇಲಾಖಾ ವತಿಯಿಂದ ನೀಡುವ ತಾಂತ್ರಿಕ ತರಬೇತಿಯಾಗಿರುತ್ತದೆ. ಅದನ್ನು ಬದಲಾಯಿಸಿ ಪಿಯುಸಿ ವಿಜ್ಞಾನದ ನಂತರ ಎರಡು ವರ್ಷಗಳ ಪಶುವೈದ್ಯಕೀಯ ಡಿಪ್ಲೊಮಾ ತರಗತಿಗಳನ್ನು ಆರಂಭಿಸಬೇಕು. ಹೋಬಳಿ ಮಟ್ಟದಲ್ಲಿರುವ ವಿವಿಧ ಪಶುವೈದ್ಯಕೀಯ ಸಂಸ್ಥೆಗಳನ್ನು ಪಶು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಏಕ ರೂಪದ ಸಿಬ್ಬಂದಿ ವರ್ಗವನ್ನು ಹೊಂದುವಂತೆ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಜಾನುವಾರು ಅಧಿಕಾರಿ ಹುದ್ದೆಗಳನ್ನು ನೇಮಿಸಬೇಕು~ ಎಂದು ಒತ್ತಾಯಿಸಿದರು. `ಪಶುವೈದ್ಯಕೀಯ ಪರೀಕ್ಷಕರ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸುವ ಸಲುವಾಗಿ ಪದವಿಯೇತರ ಪಶುವೈದ್ಯಕೀಯ ಪ್ರಾಕ್ಟಿಶನಲ್ ಕಾಯ್ದೆಯನ್ನು ಜಾರಿಗೊಳಿಸಬೇಕು. ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ತಾಂತ್ರಿಕ ಅಧಿಕಾರಿಗಳಿಗೆ ನೀಡುವಂತೆ ಗ್ರಾಮೀಣ ಭತ್ಯೆ ಮತ್ತು ಕ್ಷೇತ್ರ ಭತ್ಯೆಯನ್ನು ನೀಡಬೇಕು~ ಎಂದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಿ.ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT